ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತಿ ನಾ. ಪ್ರಭಾಕರ್ ನಿಧನ

Last Updated 9 ಜನವರಿ 2014, 19:30 IST
ಅಕ್ಷರ ಗಾತ್ರ

ಪಾಂಡವಪುರ: ಕಾದಂಬರಿಕಾರ ತರಾಸು ಅವರ ಆಪ್ತ ಶಿಷ್ಯರೆಂದೇ ಹೆಸ­ರಾಗಿದ್ದ ಸಾಹಿತಿ ನಾ. ಪ್ರಭಾಕರ್ (65) ಗುರುವಾರ ನಿಧನರಾದರು.

ಮೃತರಿಗೆ ಪತ್ನಿ ಇಂದ್ರಮ್ಮ ಇದ್ದಾರೆ. ಕೆಲಕಾಲ ‘ಪ್ರಜಾ­ವಾಣಿ’ಯ ಅರೆಕಾ­ಲಿಕ ವರದಿಗಾರರಾಗಿ ಪ್ರಭಾಕರ್‌ ಸೇವೆ ಸಲ್ಲಿಸಿದ್ದರು. ಅನಾರೋಗ್ಯ ಪೀಡಿ­ತರಾಗಿದ್ದ ತರಾಸು ಅವರು ಹೇಳಿದಂತೆ ಇವರು ಕೈಬರವಣಿಗೆ ಮಾಡಿದ್ದರು.

‘ದುರ್ಗಾಸ್ತ­ಮಾನ’ ಕಾದಂಬ­ರಿ­ಯನ್ನು ಇವರು ಕೈ ಬರವಣಿಗೆ ಮಾಡಿಕೊ­ಟ್ಟಿದ್ದರು. ತರಾಸು ಅರ್ಧಕ್ಕೆ ನಿಲ್ಲಿಸಿದ್ದ ‘ಚಕ್ರೇಶ್ವರಿ’ ಕಾದಂಬರಿಯನ್ನು ಅವರು ಕಾಲವಾದ ನಂತರ ಇವರು ಪೂರ್ಣ­ಗೊಳಿಸಿ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದರು.‘ಚಾವುಂಡ­ರಾಯ’, ‘ಮಾ­­ಲಂಗಿಮ­ಡು’ ಎಂಬ ಎರಡು ನಾಟ­ಕಗಳನ್ನು, ಮಕ್ಕಳಿಗಾಗಿ ‘ಮದಕರಿ­ನಾ­ಯಕ’, ‘ಶ್ರೀಶಂಕ­ರಾ­ಚಾರ್ಯ’ ಕೃತಿ­ಗಳನ್ನು ಹಾಗೂ ‘ಮದಕರಿ ನಾಡಿನಲ್ಲಿ’ ಎಂಬ ಹೆಸರಿನಲ್ಲಿ ಬಿಡಿ ಲೇಖನಗಳನ್ನು ಪ್ರಕಟಿಸಿದ್ದಾರೆ. ಅಲ್ಲದೆ, ‘ಕಾಮರ್ಶಿಯ ಕವನಗಳು’ ಎಂಬ ಕವನ  ಸಂಕಲನ­ಗಳನ್ನು ಹೊರತಂದಿದ್ದರು.

ತರಾಸು ಜತೆಗೆ ಪ್ರಸಿದ್ಧ ಸಾಹಿತಿ ಅನಕೃ ಅವರ ಶಿಷ್ಯರಾಗಿದ್ದು, ಇವರಿಬ್ಬರ ಕುರಿತು ಪರಿಚಯ ಪುಸ್ತಕಗಳನ್ನು ಬರೆದಿದ್ದಾರೆ.  ಅಂತ್ಯಸಂಸ್ಕಾರ ಪಾಂಡವಪುರದಲ್ಲಿ ಗುರುವಾರ ಸಂಜೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT