ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತಿಯ ಆಷಾಢಭೂತಿ ನಿಲುವು

Last Updated 17 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಚಂದ್ರಶೇಖರ ಪಾಟೀಲರು ಪ್ರಖರ ವಿಚಾರವಾದಿ, ಕವಿ ಹಾಗೂ ವಿಮರ್ಶಕರು. ಇವರೀಗ ಪ್ರಾದೇಶಿಕ ಪಕ್ಷದ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತಿದ್ದಾರೆ. ಅದಕ್ಕಾಗಿ ಅವರು ತಮಿಳುನಾಡಿನ ಡಿಎಂಕೆ ಮತ್ತು ಎಐಡಿಎಂಕೆ ಪಕ್ಷಗಳನ್ನು ಉದಾಹರಿಸುತ್ತ ಈ ಪಕ್ಷದ ನೇತಾರರಾದ ಕರುಣಾನಿಧಿ ಮತ್ತು ಜಯಲಲಿತಾ ರಾಜ್ಯಾಧಿಕಾರಕ್ಕೆ ಸಂಬಂಧಿಸಿದಂತೆ ಎಷ್ಟೇ ಕಿತ್ತಾಡಿದರೂ ಕೇಂದ್ರವನ್ನು ಮಣಿಸಿ ರಾಜ್ಯಕ್ಕೆ ಆಗಬೇಕಾದುದನ್ನು ಸಾಧಿಸುವಾಗ ಒಗ್ಗಟ್ಟನ್ನು ಮೆರೆಯುತ್ತಾರೆ.

ಆದ್ದರಿಂದ ಎಚ್.ಡಿ. ಕುಮಾರಸ್ವಾಮಿಯವರು ಹೇಳಿದಂತೆ, `ರಾಜ್ಯದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಪ್ರಾದೇಶಿಕ ಪಕ್ಷವೇ ಬೇಕು' ಎನ್ನುವರು ಚಂಪಾ, ಆದರೆ ಇವರೀಗ ಜಾತ್ಯತೀತ ಜನತಾದಳವನ್ನಾದರೂ ಬೆಂಬಲಿಸದೆ, ಸದ್ಯ ಬಿಜೆಪಿಯನ್ನು ಸೀಳಿ ಬಂದಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಕೆಜೆಪಿಯನ್ನು ಬೆಂಬಲಿಸುತ್ತಿರುವುದೇ ಸೋಜಿಗ. ಜಾತೀಯತೆಯ ಕಳಂಕ ಹೊತ್ತವರನ್ನು ಸಮರ್ಥಿಸುವ ಚಂಪಾ ಅವರ ಆಷಾಢಭೂತಿತನ ಬಯಲಾಗಿದೆ.
-ಪ್ರೊ. ಶಿವರಾಮಯ್ಯ,ಬೆಂಗಳೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT