ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸಾಹಿತ್ಯ ಕ್ಷೇತ್ರಕ್ಕೆ ಬಸವಣ್ಣನ ಕೊಡುಗೆ ಅಪಾರ'

Last Updated 3 ಏಪ್ರಿಲ್ 2013, 9:35 IST
ಅಕ್ಷರ ಗಾತ್ರ

ಬೇಲೂರು: `ಬಸವಣ್ಣನವರು ವಚನಗಳ ಮೂಲಕ ಸಾರಿದ ತತ್ವಗಳನ್ನು ಅಂಬೇಡ್ಕರ್ ಅವರು ಸಂವಿಧಾನದ ರೂಪದಲ್ಲಿ ಜಾರಿಗೆ ತಂದಿದ್ದಾರೆ' ಎಂದು ತಾಲ್ಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಕೆ.ಎಸ್.ಲಿಂಗೇಶ್ ಹೇಳಿದರು.

ಬಸವಣ್ಣನವರ ದಿನಾಚರಣೆಯ ಶತಮಾನೋತ್ಸವದ ಅಂಗವಾಗಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಶರಣ ಮಹಾಯಾತ್ರೆಯನ್ನು ಮಂಗಳವಾರ ಇಲ್ಲಿ ಸ್ವಾಗತಿಸಿದ ಬಳಿಕ ಅವರು ಮಾತನಾಡಿದರು. ಬಸವಣ್ಣ ಅವರ ವಿಚಾರಧಾರೆಗಳನ್ನು ಮನುಕುಲಕ್ಕೆ ತಿಳಿಸುವ ಅಂಗವಾಗಿ ಈ ಶರಣ ಮಹಾಯಾತ್ರೆ ರಾಜ್ಯಾದ್ಯಂತ ಸಂಚರಿಸುತ್ತಿದ್ದು, ಏಪ್ರಿಲ್ 14ರಂದು ಬಸವ ಕಲ್ಯಾಣದಲ್ಲಿ ಕೊನೆಗೊಳ್ಳಲಿದೆ ಎಂದರು.

ಬಸವಣ್ಣನವರು ಕನ್ನಡ ಸಾಹಿತ್ಯಕ್ಕೆ ವಚನಗಳ ಮೂಲಕ ಅಪಾರ ಕೊಡುಗೆ ನೀಡಿದ್ದಾರೆ. ಮಾನವ ಮಾಡುವ ಕಸುಬುಗಳನ್ನು ಜಾತಿಗಳಿಂದ ಗುರುತಿಸುವುದು ಸರಿಯಲ್ಲ ಎಂಬ ನಿಲುವು ಅವರದ್ದಾಗಿತ್ತು ಎಂದು ತಿಳಿಸಿದರು.

ಶರಣ ಮಹಾಯಾತ್ರೆಗೆ ಮಹಿಳೆಯರು ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಂಡರು. ಶಾಸಕ ವೈ.ಎನ್.ರುದ್ರೇಶ್‌ಗೌಡ, ಮಾಜಿ ಸಂಸದ ಎಚ್.ಕೆ.ಜವರೇಗೌಡ, ತಹಶೀಲ್ದಾರ್ ಜಗದೀಶ್, ಜಿಲ್ಲಾ ಪಂಚಾಯಿತಿ ಸದಸ್ಯೆ ಎಂ.ವಿ.ಹೇಮಾವತಿ, ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್, ವೀರಶೈವ ಮುಖಂಡರಾದ ಬಿ.ಶಿವರುದ್ರಪ್ಪ, ಸಿ.ಎಂ.ನಿಂಗರಾಜು, ಕೊರಟಿಕೆರೆ ಪ್ರಕಾಶ್, ಎಚ್.ಎಂ.ದಯಾನಂದ್, ಬಿ.ಎಂ.ರವಿಕುಮಾರ್, ಶಿವಕುಮಾರ್, ಕೆ.ಸಿ.ಮಹದೇವ್, ರುದ್ರಯ್ಯ, ಎಚ್.ಜಿ.ಭುವನೇಶ್, ಪುರಸಭಾ ಸದಸ್ಯ ಬಿ.ಎ.ರವಿಕುಮಾರ್, ಕುಮಾರಸ್ವಾಮಿ, ಮಾಜಿ ಸದಸ್ಯ ಬಿ.ಸಿ.ಮಂಜುನಾಥ್, ದಲಿತ ಮುಖಂಡ ದೊರೆಯಪ್ಪ, ಎಂ.ಜಿ.ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT