ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಪರಿಷತ್‌ ಪರೀಕ್ಷೆ 27ರಿಂದ

Last Updated 9 ಡಿಸೆಂಬರ್ 2013, 8:41 IST
ಅಕ್ಷರ ಗಾತ್ರ

ಬಳ್ಳಾರಿ: ಕನ್ನಡ ಸಾಹಿತ್ಯ ಪರಿಷತ್‌ನ ಪ್ರಸಕ್ತ ಸಾಲಿನ ಪ್ರವೇಶ, ಕಾವ, ಜಾಣ ಮತ್ತು ರತ್ನ ಪರೀಕ್ಷೆಗಳು ಇದೇ 27ರಿಂದ 29ರ ವರೆಗೆ ನಡೆಯಲಿವೆ. ಪರೀಕ್ಷೆಗಳು ರಾಜ್ಯದ 19 ಕೇಂದ್ರಗಳಲ್ಲಿ ನಡೆಯಲಿದ್ದು, ಬಳ್ಳಾರಿಯಲ್ಲಿ ಶೆಟ್ರ ಗುರುಶಾಂತಪ್ಪ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿವೆ. ಪರೀಕ್ಷಾ ಪ್ರವೇಶ ಪತ್ರಗಳನ್ನು  ಈಗಾಗಲೇ ಅಂಚೆ ಮೂಲಕ ಕಳುಹಿಸಲಾಗಿದೆ.  ಪ್ರವೇಶ ಪತ್ರ ತಲುಪದೆ ಇರುವವರು ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು–-18 ಇವರನ್ನು ದೂರವಾಣಿ ಸಂಖ್ಯೆ (080) -26623584 ಮೂಲಕ ಸಂಪರ್ಕಿಸಬಹುದು ಎಂದು ಗೌರವ ಕಾರ್ಯದರ್ಶಿ ಸಿ.ಕೆ. ರಾಮೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವೇಳಾಪಟ್ಟಿ: ಪರೀಕ್ಷೆ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಈ ಕೆಳಕಂಡಂತಿದೆ.
ಡಿಸೆಂಬರ್ 27ರಂದು ಬೆ.10ರಿಂದ ಮಧ್ಯಾಹ್ನ 1ರವರೆಗೆ ಕನ್ನಡ ರತ್ನ ಪತ್ರಿಕೆ– -1 (ಹಳಗನ್ನಡ ಸಾಹಿತ್ಯ) ಹಾಗೂ  ಕನ್ನಡ ಜಾಣ ಪತ್ರಿಕೆ–-1 (ನಡುಗನ್ನಡ ಸಾಹಿತ್ಯ),  ಮಧ್ಯಾಹ್ನ 2ರಿಂದ 5ರವರೆಗೆ ಕನ್ನಡ ರತ್ನ ಪತ್ರಿಕೆ– -2 (ಹೊಸಗನ್ನಡ ಸಾಹಿತ್ಯ – ಕಾವ್ಯ ಮತ್ತು ಸಣ್ಣಕತೆ)) ಹಾಗೂ ಕನ್ನಡ ಜಾಣ ಪತ್ರಿಕೆ– -2 (ನಾಟಕ ಮತ್ತು ಪ್ರಬಂಧ ಸಾಹಿತ್ಯ).

ಡಿ.28ರಂದು ಬೆ. 10ರಿಂದ ಮ. 1ರವರೆಗೆ ಕನ್ನಡ ಕಾವ ಪತ್ರಿಕೆ-–1 (ಕನ್ನಡ ಗದ್ಯ, ಪದ್ಯ, ಸಾಹಿತ್ಯ), ಕನ್ನಡ ಜಾಣ ಪತ್ರಿಕೆ– -3 (ಕನ್ನಡ ಸಾಹಿತ್ಯ ಚರಿತ್ರೆ), ಕನ್ನಡ ರತ್ನ ಪತ್ರಿಕೆ– -3 (ಕಾವ್ಯ ಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆ), ಮಧ್ಯಾಹ್ನ 2ರಿಂದ 5ರವರೆಗೆ ಕನ್ನಡ ಕಾವ ಪತ್ರಿಕೆ– -2 (ವ್ಯಾವಹಾರಿಕ ಕನ್ನಡ ಮತ್ತು ಸಂವಹನ- ಕನ್ನಡ), ಕನ್ನಡ ಜಾಣ ಪತ್ರಿಕೆ–-4 (ಹೊಸಗನ್ನಡ ವ್ಯಾಕರಣ ಮತ್ತು ಛಂದಸ್ಸು), ಕನ್ನಡ ರತ್ನ ಪತ್ರಿಕೆ-4 (ಭಾಷಾ ವಿಜ್ಞಾನ).

ಡಿ.29ರಂದು ಬೆ. 10ರಿಂದ ಮ. 1ರವರೆಗೆ ಕನ್ನಡ ಪ್ರವೇಶ ಪತ್ರಿಕೆ-–1 (ಅಕ್ಷರ, ಪದ, ವಾಕ್ಯ ರಚನೆ), ಕನ್ನಡ ರತ್ನ ಪತ್ರಿಕೆ-– 5 (ಜಾನಪದ ಸ್ವರೂಪ -ಕನ್ನಡ ಸಂಸ್ಕೃತಿ), ಕನ್ನಡ ಕಾವ ಹಾಗೂ ಕನ್ನಡ ಜಾಣ (ಮೌಖಿಕ ಪರೀಕ್ಷೆ), ಮ. 2ರಿಂದ 5ರವರೆಗೆ ಕನ್ನಡ ಪ್ರವೇಶ ಪತ್ರಿಕೆ-– 2 (ಭಾಷೆ ಮತ್ತು ಸಾಹಿತ್ಯ ಪರಿಚಯ), ಕನ್ನಡ ಕಾವ (ಮೌಖಿಕ ಪರೀಕ್ಷೆ –ಮುಂದುವರಿಕೆ) ಪರೀಕ್ಷೆಗಳು ನಡೆಯಲಿವೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT