ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ರಚನೆಗೆ ಆಸಕ್ತಿವಹಿಸಿ

Last Updated 18 ಜನವರಿ 2011, 10:20 IST
ಅಕ್ಷರ ಗಾತ್ರ

ಗೌರಿಬಿದನೂರು:  ಸಾಹಿತ್ಯ ಸಂಸ್ಕೃತಿ ಕಲೆಗಳು ಮನುಷ್ಯನ ಬದುಕನ್ನು ತಿದ್ದುತ್ತವೆ. ಮನಸ್ಸನ್ನು ಅರಳಿಸುತ್ತವೆ. ಇವುಗಳ ಒಡನಾಟದಲ್ಲಿರುವವರು ಶಾಶ್ವತವಾಗಿ ಉಳಿಯುತ್ತಾರೆ ಎಂದು ಸಾಹಿತಿ ಡಾ.ರಂಗಾರೆಡ್ಡಿ ಕೋಡಿರಾಂಪುರ ಅಭಿಪ್ರಾಯಪಟ್ಟರು

ಆಚಾರ್ಯ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ದೈವಿಕ್ ಪ್ರಕಾಶನ ಸೋಮವಾರ ಏರ್ಪಡಿಸಿದ್ದ ಸಾ.ನ. ಲಕ್ಷ್ಮಣಣಗೌಡ ಅವರ ಎರಡು ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.

ಸಾಹಿತಿ ಡಾ.ರಾಮಕೃಷ್ಣೇಗೌಡ ಮಾತನಾಡಿ, ‘ಸಾಹಿತ್ಯ ರಚನೆಗೆ ಎಲ್ಲರೂ ಆಸಕ್ತಿ ತೋರಬೇಕು. ಎಲ್ಲ ರೀತಿಯ ನ್ಯೂನತೆ ಮತ್ತು ಅಡ್ಡಿ-ಆತಂಕಗಳನ್ನು ಮೀರಿ ನಿಲ್ಲಬೇಕು’ ಎಂದರು.
ರಂಗಸಂಘಟಕ ಕಾ.ನಾ ಶ್ರೀ, ಆಚಾರ್ಯ ಕಾಲೇಜಿನ ಮಾಜಿ ಪ್ರಾಂಶುಪಾಲ ಬಿ.ಎನ್.ರಾಮಯ್ಯ, ಉಪನ್ಯಾಸಕರಾದ ಎಂ.ಟಿ ನರಸಿಂಹಮೂರ್ತಿ, ಸುನಂದ ಮತ್ತು ಡಿ.ಎಸ್ ಹನುಮಂತರಾವ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT