ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಸಮ್ಮೇಳನಕ್ಕೆ ಹಣ ಕೊರತೆ

Last Updated 21 ಡಿಸೆಂಬರ್ 2013, 20:07 IST
ಅಕ್ಷರ ಗಾತ್ರ

ಕುಶಾಲನಗರ: ಜನವರಿ 6ರಿಂದ 8ರ­ವರೆಗೆ ಮಡಿಕೇರಿಯಲ್ಲಿ ನಡೆಯ­ಲಿರುವ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಒಟ್ಟು 3.75 ಕೋಟಿ ವೆಚ್ಚವಾಗಲಿದ್ದು ಸದ್ಯ ರೂ 2.90 ಕೋಟಿ­ಯಷ್ಟೇ ಸಂಗ್ರಹ­ವಾಗಿದೆ. ಕೊರತೆಯಾ­ಗಿರುವ ರೂ 1.85 ಕೋಟಿ ಹಣವನ್ನು ವಸ್ತುಗಳ ರೂಪದಲ್ಲಿ ಸಂಗ್ರಹಿಸಲು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಿಸರ್ಗಧಾಮದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

14 ದಿನಗಳಷ್ಟೇ ಬಾಕಿ ಇರುವ ಸಮ್ಮೇಳನಕ್ಕೆ ಜಾಹೀರಾತು ವಿಭಾಗ­ದಿಂದ ರೂ 13 ಲಕ್ಷ, ಜಿಲ್ಲೆಯ ರಾಜ್ಯ ಸರ್ಕಾರಿ ನೌಕರರ ಒಂದು ದಿನದ ಸಂಬಳ­ದಿಂದ ರೂ 25 ಲಕ್ಷ ಸೇರಿದಂತೆ ವಿವಿಧ ಮೂಲಗಳಿಂದ ಒಟ್ಟು ರೂ 2.90 ಕೋಟಿ ಹಣ ಸಂಗ್ರಹವಾಗುವ ಖಚಿತತೆ ಇದೆ ಎಂದು ಸಮ್ಮೇಳನದ ಕಾರ್ಯ­ದರ್ಶಿಯೂ ಆದ  ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಪಿ. ರಮೇಶ್ ಸಭೆಗೆ ಮಾಹಿತಿ ನೀಡಿದರು.

ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿ­ನಿ­ಧಿಗಳಿಗೆ ಊಟದ ವ್ಯವಸ್ಥೆಗಾಗಿ ಆಹಾರ ಸಾಮಗ್ರಿ ಕೊಳ್ಳಲು ರೂ 45ರಿಂದ 50 ಲಕ್ಷ ಬೇಕಾಗಿದ್ದು ಇದಕ್ಕೆ ಸಂಬಂಧಿಸಿ ಮುಜರಾಯಿ ಇಲಾಖೆಯ ರಾಜ್ಯದ ವಿವಿಧ ದೇವಾಲಯಗಳಿಂದ ಆಹಾರ ಸಾಮಗ್ರಿ ನೀಡಲು ಸರ್ಕಾರ ಆದೇಶಿ­ಸುವಂತೆ ಕೇಳಿಕೊಳ್ಳ­ಲಾ­ಗು­ವುದು, ಅಲ್ಲದೆ, ತಮ್ಮ ವಿಧಾನಸಭಾ ಕ್ಷೇತ್ರದಿಂದ ನೂರು ಕ್ವಿಂಟಲ್ ಅಕ್ಕಿ ಕೊಡಿಸುವುದಾಗಿ  ಎಂದು ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು.

ಪ್ರತಿ ವರ್ಷದ ಸಮ್ಮೇಳನಕ್ಕೆ ಹಾಸನ ಹಾಲೂ ಒಕ್ಕೂಟದಿಂದ ಹಾಲು, ಮೊಸರು ಮತ್ತು ತುಪ್ಪಗಳನ್ನು ನೀಡಲಾ­ಗುತ್ತಿತ್ತು. ಆದರೆ, ಈ ಒಕ್ಕೂಟಕ್ಕೆ ಮನವಿ ಸಲ್ಲಿಸಿದ್ದರೂ ಇದುವರೆಗೂ ಯಾವುದೇ ಸಕಾ­ರಾತ್ಮಕ ಸ್ಪಂದನೆ ದೊರೆತ್ತಿಲ್ಲ ಎಂದು ಟಿ.ಪಿ. ರಮೇಶ್ ತಿಳಿಸಿದರು. ಹಾಲು ಒಕ್ಕೂಟದಿಂದ ಹಾಲು, ಮೊಸರು ದೊರೆತಲ್ಲಿ ರೂ 10 ಲಕ್ಷ ಹಣ ಉಳಿತಾ­ಯ­ವಾಗುವುದರಿಂದ ತಕ್ಷಣವೇ ಈ ಕುರಿತು ಸಂಬಂಧಿಸಿದವರಲ್ಲಿ ಮಾತನಾ­ಡುವುದಾಗಿ ಸಚಿವ ಮಹದೇವಪ್ಪ ತಿಳಿಸಿದರು.

ಮೈಸೂರು ಕೊಡಗು ಕ್ಷೇತ್ರದ ಸಂಸದ ಎಚ್. ವಿಶ್ವನಾಥ್, ಜಿಲ್ಲಾಧಿ­ಕಾರಿ ಅನುರಾಗ್ ತಿವಾರಿ, ಹೆಚ್ಚು­ವರಿ ಜಿಲ್ಲಾಧಿಕಾರಿ ಪ್ರಸನ್ನ, ವಿಧಾನ ಪರಿಷತ್ ಸದಸ್ಯ ಟಿ. ಜಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT