ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯದಲ್ಲಿ ಸಂಖ್ಯಾಬಲಕ್ಕಿಂತ ಗುಣಬಲ ಮುಖ್ಯ

Last Updated 25 ಜೂನ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:  `ಯಾವುದೇ ಕಾರ್ಯದಲ್ಲೂ ನಮ್ಮ ಶ್ರಮ ಮತ್ತು ಉದ್ದೇಶ ಸಾರ್ಥಕ ರೀತಿಯಲ್ಲಿರಬೇಕು. ಹಾಗಾದಾಗಲೇ ನಾವು ಯಶಸ್ವಿಯಾಗಲು ಸಾಧ್ಯ~ ಎಂದು ಕರ್ನಾಟಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ.ವೀರಣ್ಣ ಹೇಳಿದರು.

ರಾಜಮಾರ್ಗ ಸಾಹಿತ್ಯ ಸಂಸ್ಕೃತಿ ಮತ್ತು ಪಾರ್ವತಿ ವಿಹಂಗಮವು ಸೋಮವಾರ ಕನ್ನಡ ಭವನದಲ್ಲಿ ಏರ್ಪಡಿಸಿದ್ದ ರಂಗಕರ್ಮಿ ಯೋಗೇಶ್ ಮಾಸ್ಟರ್ ಅವರ ಐದು ಸಾಹಿತ್ಯ ಕೃತಿಗಳ ಲೋಕಾರ್ಪಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

`ಸಾಹಿತ್ಯದಲ್ಲಿ ಸಂಖ್ಯಾಬಲಕ್ಕಿಂತ ಗುಣಬಲಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕು. ನಾವು ಸಾಹಿತ್ಯದಲ್ಲಿ ಎಷ್ಟು ಕೃತಿಗಳನ್ನು ರಚಿಸಿದ್ದೇವೆ ಎಂಬುದು ಮುಖ್ಯವಲ್ಲ, ಬದಲಿಗೆ ಹೇಗೆ ರಚಿಸಿದ್ದೇವೆ, ಯಾವ ಮೌಲ್ಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸಾಹಿತ್ಯ ರಚನೆಯಾಗಿದೆ ಎಂಬುದು ಪ್ರಾಮುಖ್ಯತೆ ಪಡೆಯುತ್ತದೆ~ ಎಂದು ಹೇಳಿದರು.

ಹಿರಿಯ ಸಾಹಿತಿ ಸಾ.ಶಿ.ಮರುಳಯ್ಯ ಮಾತನಾಡಿ, `ಹಳೆಯ ಸಂಪ್ರದಾಯ ನಶಿಸಿ, ಹೊಸ ಮೌಲ್ಯ ಚಿಂತನೆಗಳು ಬೆಳಗಬೇಕಾದ ಸಂದರ್ಭ ಬಂದೊದಗಿದೆ. ಯುವ ಸಾಹಿತಿಗಳಿಗೆ ಆದರ್ಶಮಯವಾದ ಮಾರ್ಗ ಮತ್ತು ಪ್ರೋತ್ಸಾಹ ನೀಡುವ ಕಾರ್ಯವನ್ನು ಇಂದಿನ ಹಿರಿಯ ಸಾಹಿತಿಗಳು ಮಾಡಬೇಕು~ ಎಂದು ಹೇಳಿದರು.

ಹಿರಿಯ ಪತ್ರಕರ್ತ ಲಕ್ಷ್ಮಣ ಕೊಡಸೆ ಮಾತನಾಡಿ, `ಸಾಹಿತ್ಯದ ಹಿನ್ನೆಲೆಯಿಲ್ಲದ ಯುವಕರು ಸಾಹಿತ್ಯಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಒಳ್ಳೆಯ ಶುಭಸೂಚಕ ಸಂಕೇತವಾಗಿದೆ. ಏಕೆಂದರೆ, ಅವರು ತಮ್ಮ ಅನುಭವಗಳನ್ನೆಲ್ಲ ಒಟ್ಟಾಗಿಸಿ, ಮೌಲ್ಯಯುತವಾಗಿ ಬರೆಯವುದು ಸಾಧ್ಯವಾಗುತ್ತದೆ. ಇದರಿಂದ ಸಾಹಿತ್ಯದಲ್ಲಿ ವಿಶಿಷ್ಟವಾದ ಧ್ವನಿ ಹೊರಹೊಮ್ಮುತ್ತದೆ~ ಎಂದು ಅಭಿಪ್ರಾಯಪಟ್ಟರು.

ಯೋಗೇಶ್ ಮಾಸ್ಟರ್ ಅವರ ಮರಳಿ ಮನೆಗೆ (ಕಾದಂಬರಿ), ಕೊನೆಯ ಅಂಕ (ನಾಟಕ), ಜೀವನ ಸಂಜೀವನ (ಕಥಾ ಸಂಕಲನ), ಮಳೆ ಬಂದು ನಿಂತಾಗ (ರಂಗ ಗೀತೆಗಳ ಸಂಗ್ರಹ),  ನಾನ್ ಕೋಳೀಕೆ ರಂಗಾ (ಮಕ್ಕಳ ಕಥೆಗಳು) ಈ ಐದು ಪುಸ್ತಕಗಳು ಲೋಕಾರ್ಪಣೆಗೊಂಡವು.

ಕಾರ್ಯಕ್ರಮದಲ್ಲಿ ಪಾರ್ವತಿ ನೃತ್ಯ ವಿಹಂಗಮದ ನಿರ್ದೇಶಕಿ ನಿರ್ಮಲಾ ಜಗದೀಶ್, ಲೇಖಕರಾದ ನಾ. ದಾಮೋದರ ಶೆಟ್ಟಿ, ಬಂಜಗೆರೆ ಜಯಪ್ರಕಾಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT