ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯೋತ್ಸವ- ಒಲವು ವೃದ್ಧಿ

Last Updated 24 ಜನವರಿ 2012, 10:25 IST
ಅಕ್ಷರ ಗಾತ್ರ

ಶೃಂಗೇರಿ (ಕೊಪ್ಪ):ಸಾಹಿತ್ಯ ಉತ್ಸವ ಗಳಿಂದ ಜನ ಸಮುದಾಯದಲ್ಲಿ ಸಾಹಿತ್ಯದ ಒಲವು ವೃದ್ಧಿಯಾಗುತ್ತದೆ ಎಂದು ಸಾಹಿತಿ ಸುಬ್ರಾಯ ಚೊಕ್ಕಾಡಿ ಹೇಳಿದರು.

ಮೆಣಸೆಯಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ಚುಟುಕು ಸಾಹಿತ್ಯ ಸಮ್ಮೇಳನ ಸಮಾರೋಪದಲ್ಲಿ ಭಾನು ವಾರ ಅವರು ಮಾತನಾಡಿದರು.

ಮಾಡಿ ಉತ್ಸವಗಳು ನಡೆದಾಗ ಸಾಂಸ್ಕೃತಿಕ ಲೋಕದ ಸಂಬಂಧ ಬೆಸೆಯುತ್ತದೆ. ದೇಶದಲ್ಲಿ ಅನೇಕ ಸಂಸ್ಕೃತಿಗಳಿದ್ದು, ಎಲ್ಲವೂ ವಿಶಿಷ್ಟ ವಾದುದು. ಸಂಸ್ಕೃತಿ, ಭಾಷೆ ಬಗ್ಗೆ ಅಭಿಮಾನ ಹೊಂದಿ ಅದನ್ನು ಬೆಳೆಸಲು ಕಾರ್ಯಕ್ರಮಗಳನ್ನು ಏರ್ಪಡಿಸಿ ಕೊಳ್ಳಬೇಕು. ಸಮಾಜದಲ್ಲಿ ಅಧಿಕಾರ, ಹಣದ ಶಕ್ತಿ ಬೆಳೆಯುತ್ತಿದೆ.

ಸಾಂಸ್ಕೃತಿಕವಾಗಿ ಬೆಳೆದರೆ ಮಾತ್ರ ಸಧೃಢ ಸಮಾಜ ನಿರ್ಮಾಣ ಸಾಧ್ಯ. ಕಲಾವಿದರಿಗೆ ಸಮಾಜದಲ್ಲಿ ಎಂದಿಗೂ ಗೌರವಿದ್ದು, ಆತ ಮಾತನಾಡುವ ಶೈಲಿ, ಸಾಂಸ್ಕೃತಿಕವಾಗಿರುವುದೇ ಇದಕ್ಕೆ ಕಾರಣ ಎಂದರು.

ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಿ ಮಾತನಾಡಿದ ಮಠದ ಅಧಿಕಾರಿ ಶ್ರೀಪಾದ ರಾವ್, ದೈನಂದಿನ ಕಾಯಕದೊಡನೆ ಒಂದಿಷ್ಟು ಸಮಯ ವನ್ನು ಸಾಹಿತ್ಯ, ಸಂಸ್ಕೃತಿಗೂ ಮೀಸ ಲಿಡಬೇಕು ಎಂದರು.

ಚುಟುಕುಸಾಹಿತ್ಯ ಪರಿಷತ್ ತಾಲ್ಲೂಕು ಘಟಕ ಅಧ್ಯಕ್ಷೆ ಶೋಭಾ ಅನಂತಯ್ಯ ಅಧ್ಯಕ್ಷತೆಯಲ್ಲಿ ಹಾಸ್ಯ ಕಲಾವಿದ ಶಂಕರ್ ಮೆಣಸೆ, ಚಂಡೆ ವಾದಕ ಕಿಗ್ಗಾ ಶ್ರೀಕಂಠ, ಶಿಕ್ಷಕಿ ಅನ್ನಪೂರ್ಣ, ಸಂಗೀತ ಶಿಕ್ಷಕಿ ಸಾವಿತ್ರಿ ಪ್ರಭಾಕರ್ ಅವರನ್ನು ಗೌರವಿಸಲಾಯಿತು.

ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎ.ಎಸ್.ನಯನ ಅಭಿನಂದನಾ ಭಾಷಣ ಮಾಡಿದರು. ತಾ.ಪಂ.ಸದಸ್ಯೆ ಪುಷ್ಪಾ, ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಎಸ್.ರಮೇಶ್, ಗ್ರಾ.ಪಂ. ಸದಸ್ಯರಾದ ಶಿವಶಂಕರ್, ಶಿವಕುಮಾರ್, ಶಿವಸ್ವಾಮಿ, ವೈ.ಆರ್.ರಾಜೀವ್, ಶೃಂಗೇರಿ ಸುಬ್ಬಣ್ಣ ಇದ್ದರು.

ಟಿ.ಎಲ್.ಉಮೇಶ್ ರಚಿತ ಕವನ ಸಂಕಲನವನ್ನು ಸುಬ್ರಾಯ ಚೊಕ್ಕಾಡಿ ಬಿಡುಗಡೆ ಮಾಡಿದರು.
ಬಳಿಕ ಹೊನ್ನಳ್ಳಿವೆಂಕಟೇಶ್ವರ ಯಕ್ಷಗಾನ ಕಲಾ ಸಂಘದ ದಕ್ಷಯಜ್ಞ ಯಕ್ಷಗಾನ ಪ್ರದರ್ಶನಗೊಂಡಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT