ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಗಲ್ಸ್‌ ವಿಭಾಗಕ್ಕೆ ಆದ್ಯತೆ: ನಿಕ್ಷೇಪ್‌

Last Updated 7 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಪಾಲ್ಗೊಂಡ ಮೊದಲ ಐಟಿಎಫ್‌ ಟೂರ್ನಿಯಲ್ಲಿಯೇ ಪ್ರಶಸ್ತಿ ಜಯಿಸಲು ಸಾಧ್ಯವಾಗಿದ್ದಕ್ಕೆ ಖುಷಿಯಾಗಿದೆ. ಈ ಸಾಧನೆ ಮೂಡಿ ಬಂದಿದ್ದು ಡಬಲ್ಸ್‌ನಲ್ಲಿ. ಆದರೆ, ನನ್ನ ಮೊದಲ ಆದ್ಯತೆ ಸಿಂಗಲ್ಸ್‌್ ವಿಭಾಗ...’

ಮುಂಬೈಯಲ್ಲಿ ನಡೆದ ಸಿಸಿಐ ಅಂತರರಾಷ್ಟ್ರೀಯ ಐಟಿಎಫ್ ಟೆನಿಸ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಕರ್ನಾಟಕದ ಭರವಸೆಯ ಆಟಗಾರ ಬಿ.ಆರ್‌. ನಿಕ್ಷೇಪ್‌ ‘ಪ್ರಜಾವಾಣಿ’ ಜೊತೆ ಹಂಚಿಕೊಂಡ ಅನಿಸಿಕೆಗಳಿವು.

ಡಬಲ್ಸ್‌ ವಿಭಾಗದಲ್ಲಿ ದೆಹಲಿಯ ಅಲೆಕ್ಸ್‌ ಸೋಲಂಕಿ ಜೊತೆಗೂಡಿ ನಿಕ್ಷೇಪ್‌ ಫೈನಲ್‌ ಹಣಾಹಣಿಯಲ್ಲಿ 6-3, 6-4ರಲ್ಲಿ ದೆಹಲಿಯ ಅನುರಾಗ್‌ ನೆನ್ವಾನಿ ಮತ್ತು ಉತ್ತರ ಪ್ರದೇಶದ ಸಚಿನ್‌ ಕುಮಾರ್‌ ಎದುರು ಗೆಲುವು ಪಡೆದಿದ್ದರು.

ಎಐಟಿಎ ರ್‍್ಯಾಂಕಿಂಗ್‌ ಪಟ್ಟಿಯ 16 ವರ್ಷದೊಳಗಿನವರ ವಿಭಾಗದಲ್ಲಿ ಅಗ್ರಸ್ಥಾನ ಹೊಂದಿ ರುವ ನಿಕ್ಷೇಪ್‌ ಈಗ 18 ವರ್ಷ ದೊಳಗಿನವರ ವಿಭಾಗದಲ್ಲೂ  ಮೂರನೇ ಸ್ಥಾನ ಗಳಿಸಿದ್ದಾರೆ. ಜೊತೆಗೆ 2014ರಲ್ಲಿ ನಡೆಯ ಲಿರುವ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಜೂನಿಯರ್‌ ವಿಭಾಗದಲ್ಲಿ ಸ್ಪರ್ಧಿ ಸುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ.

‘2013 ನನ್ನ ಪಾಲಿಗೆ ಅದೃಷ್ಟದ ವರ್ಷ. ಸಾಕಷ್ಟು ಪ್ರಶಸ್ತಿಗಳನ್ನು ಗೆದ್ದಿದ್ದೇನೆ. ಜೂನಿಯರ್‌ ಡೇವಿಸ್‌ ಕಪ್‌ನಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಬೇಕೆನ್ನುವ  ಗುರಿಯಿದೆ. ಜೊತೆಗೆ ಬೆಂಗಳೂರಿನಲ್ಲಿ ಆರ್‌.ಟಿ. ನಾರಾಯಣ್‌ ಸ್ಮರಣಾರ್ಥ ನಡೆಯುವ ಎಐಟಿಎ ಟೆನಿಸ್‌ ಟೂರ್ನಿಯಲ್ಲೂ ಪ್ರಶಸ್ತಿ ಗೆಲ್ಲುವ ಕನಸು ಇದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT