ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಗ್ ಜನ್ಮದಿನಕ್ಕೆ ಸೇವಾ ದಾಖಲಾತಿ ಅಂತಿಮ: ಕೋರ್ಟ್

Last Updated 11 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ಭೂಸೇನಾ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್ ಅವರ ಶಾಲಾ ದಾಖಲಾತಿಗಳಲ್ಲಿ ಜನ್ಮದಿನಾಂಕವನ್ನು 1951ರ ಮೇ 10 ಎಂದು ತಿಳಿಸಿದ್ದರೂ, ಅವರು ಕೆಲಸಕ್ಕೆ ಸೇರುವಾಗ ಸಲ್ಲಿಸಿರುವ ದಾಖಲುಪತ್ರಗಳಲ್ಲಿ ತಾವು 1950ರ ಮೇ 10ರಂದು ಜನಿಸಿದ್ದೆಂದು ತಿಳಿಸಿರುವುದರಿಂದ ಸೇವಾ ವಿಷಯಗಳಿಗೆ ಅದನ್ನೇ ಅಂತಿಮ ದಿನಾಂಕವಾಗಿ ಪರಿಗಣಿಸಲಾಗುತ್ತದೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.

ಸಿಂಗ್ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ಭಾರತೀಯ ಸೇನಾ ಅಕಾಡೆಮಿ (ಐಎಂಎ) ಸೇರಿದಾಗ ಜನ್ಮದಿನಾಂಕವನ್ನು 1950ರ ಮೇ 10 ಎಂದು ನಮೂದಿಸಿದ್ದು, ಇದನ್ನೇ ರಕ್ಷಣಾ ಸಚಿವಾಲಯವು ಅಧಿಕೃತ ದಾಖಲೆಯಾಗಿ ಕಾಪಾಡಿಕೊಂಡು ಬಂದಿದೆ. ಅವರ ಶಾಲಾ ದಾಖಲಾತಿಗಳು ಮಾತ್ರ 1951ರ ಮೇ 10ರಂದು ಜನಿಸಿದ್ದೆಂದು ತಿಳಿಸುತ್ತವೆ. ಆದರೂ ಸೇವೆಗೆ ಸೇರುವಾಗ ಸಲ್ಲಿಸಿದ ದಾಖಲಾತಿಯನ್ನೇ ಅಂತಿಮವೆಂದು ಪರಿಗಣಿಸಲಾಗಿದೆ ಎಂದು ನ್ಯಾಯಮೂರ್ತಿಗಳಾದ ಆರ್.ಎಂ. ಲೋಧಾ ಮತ್ತು ಎಚ್.ಎಲ್. ಗೋಖಲೆ ಅವರನ್ನೊಳಗೊಂಡ ನ್ಯಾಯಪೀಠ ಶುಕ್ರವಾರ ಅಭಿಪ್ರಾಯಪಟ್ಟಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT