ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂದಗಿಯಲ್ಲಿ ಜೆಡಿಎಸ್‌ನಿಂದ ಪ್ರತಿಭಟನೆ

Last Updated 15 ಫೆಬ್ರುವರಿ 2012, 6:35 IST
ಅಕ್ಷರ ಗಾತ್ರ

ಸಿಂದಗಿ: ಬಿಜೆಪಿ ಸರ್ಕಾರದ ಆಡಳಿತ ವನ್ನು ತಕ್ಷಣವೇ ವಜಾಗೊಳಿಸುವಂತೆ ಆಗ್ರಹಿಸಿ ಮಂಗಳವಾರ ಸಿಂದಗಿಯಲ್ಲಿ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ನೇತೃತ್ವದಲ್ಲಿ ನೂರಾರು ಕಾರ್ಯಕ ರ್ತರು ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಸಿದರು.

ಸ್ಥಳೀಯ ಟಿಪ್ಪು ಸುಲ್ತಾನ ವೃತ್ತ ದಿಂದ ಆರಂಭಗೊಂಡ ರ‌್ಯಾಲಿ ಬಸ್ ನಿಲ್ದಾಣ ರಸ್ತೆ ಮಾರ್ಗವಾಗಿ ಡಾ. ಅಂಬೇಡ್ಕರ್ ವೃತ್ತ, ಅಲ್ಲಿಂದ ಅಂಬಿಗರ ಚೌಡಯ್ಯ, ಸಂಗೊಳ್ಳಿ ರಾಯಣ್ಣ ವೃತ್ತಗಳ ಮುಖಾಂತರ ನೇರವಾಗಿ ತಹಶೀಲ್ದಾರ ಕಚೇರಿಗೆ ತಲುಪಿತು.

ರ‌್ಯಾಲಿಯಲ್ಲಿ ಕಾರ್ಯಕರ್ತರು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ತಹಶೀಲ್ದಾರ ಕಚೇರಿ ಎದುರು ನಡೆದ ಪ್ರತಿಭಟನಾ ಸಭೆಯಲ್ಲಿ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ. ಮನಗೂಳಿ, ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಎಸ್. ಖಾದ್ರಿ ಇನಾಮದಾರ, ಹಿಂದುಳಿದ ಘಟಕದ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಕಣ್ಮೇಶ್ವರ, ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷೆ ರೇಷ್ಮಾ ಪಡೇಕನೂರ, ಅಲ್ಪಸಂಖ್ಯಾತರ ತಾಲ್ಲೂಕು ಘಟಕದ ಅಧ್ಯಕ್ಷ ನೂರಅಹ್ಮದ ಅತ್ತಾರ, ನಗರ ಘಟಕದ ಅಧ್ಯಕ್ಷ ಇರ್ಫಾನ್ ಬಾಗವಾನ, ಎಂ.ಸಿ. ಮುಲ್ಲಾ, ಗೊಲ್ಲಾಳಪ್ಪಗೌಡ ಪಾಟೀಲ ಗೋಲಗೇರಿ, ಶರಣಗೌಡ ಪಾಟೀಲ ಯಂಕಂಚಿ ಅವರು ಮಾತ ನಾಡಿದರು.

ಬಿಜೆಪಿ ಸರ್ಕಾರ ರಾಮರಾಜ್ಯ ತತ್ವ, ಸಿದ್ಧಾಂತದ ಬದಲಾಗಿ ಕಾಮ ರಾಜ್ಯ ತತ್ವ ಸಿದ್ಧಾಂತವನ್ನು ಮೈಗೂಡಿಸಿ ಕೊಂಡಂತೆ ಮೂವರು ಸಚಿವರು ಪವಿತ್ರ ವಿಧಾನಸೌಧದ ಸದನದಲ್ಲಿ ಬ್ಲೂ ಫಿಲಂ ವೀಕ್ಷಿಸಿ ಇಡೀ ರಾಜ್ಯಕ್ಕೆ ಭಾರಿ ಅವಮಾನವನ್ನುಂಟು ಮಾಡಿದ್ದಾರೆ. ಹೀಗಾಗಿ ಅವರನ್ನು ವಿಧಾನಸೌಧ ದೊಳಗೆ ಪ್ರವೇಶ ನಿರ್ಬಂಧಿಸಬೇಕು. ಕೂಡಲೇ ಅವರ ಸದಸ್ಯತ್ವ ಅನರ್ಹ ಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ಬಿಜೆಪಿ ಯಾವತ್ತಿಗೂ ಅಲ್ಪಸಂಖ್ಯಾ ತರ ವಿರೋಧಿಯಾಗಿದೆ. ಅಂತೆಯೇ ಬಿಜೆಪಿ ಸಚಿವ ಸಂಪುಟದಲ್ಲಿ ಒಬ್ಬ ಅಲ್ಪಸಂಖ್ಯಾತರ ಮುಸ್ಲಿಂನಿಗೂ ಸಚಿವ ಸ್ಥಾನ ನೀಡಿಲ್ಲ ಎಂದರು.
ಸಿಂದಗಿಯಲ್ಲಿ ಈಚೆಗೆ ಪಾಕ್ ಧ್ವಜ ಹಾರಿಸಿ ದೇಶದ್ರೋಹ ಪಟ್ಟ ಕಟ್ಟಿಕೊಂಡ ಶ್ರೀರಾಮ ಸೇನೆಯಂತಹ ಹಿಂದೂ ಸಂಘಟನೆಗಳನ್ನು ಸರ್ಕಾರ ನಿಷೇಧಿಸ ಬೇಕು ಎಂದು ಅವರು ಒತ್ತಾಯಿಸಿದರು.

ಬರ ಕಾಮಗಾರಿ ಪ್ರಾರಂಭಿಸಬೇಕು, ರೈತರ ಸಾಲ ಮನ್ನಾ ಮಾಡಬೇಕು, ರೈತರಿಗೆ 8 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಬೇಕು, ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ ಉಳಿದ ಭಾಗದ ಕಾಮಗಾರಿಗಾಗಿ ಅಗತ್ಯ ಹಣ ಬಿಡುಗಡೆಗೊಳಿಸಬೇಕು, ರೈತರಿಗೆ ಬರಬೇಕಿರುವ ಎರಡನೇ ಕಂತಿನ ಕಬ್ಬಿನ ಬಾಕಿ ಹಣ ಪರಿಹಾರ ಬಿಡುಗಡೆಗೊಳಿಸಬೇಕು, ಸಿಂದಗಿ ತಾಲ್ಲೂಕಿನ ಕೆರೆಗಳಿಗೆ ನೀರು ಜೋಡಿಸುವ ಕೆಲಸ ಕೂಡಲೇ ಪ್ರಾರಂಭಿಸಿ ನೀರಿನ ಹಾಹಾಕಾರ ತಪ್ಪಿಸಬೇಕು, ತೊಗರಿ ಬೆಳೆಯನ್ನು ಸರ್ಕಾರ ರೂ. 4500ಕ್ಕೆ ನೇರವಾಗಿ ಖರೀದಿಸಬೇಕು ಎಂಬಿತ್ಯಾದಿ 13 ಬೇಡಿಕೆಗಳುಳ್ಳ ಮನವಿ ಪತ್ರವನ್ನು ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಕಾಶ ಹಿರೇಕುರಬರ, ನೂರಅಹ್ಮದ ಅತ್ತಾರ  ತಹಶೀಲ್ದಾರರಿಗೆ ಸಲ್ಲಿಸಿದರು.

ಪ್ರತಿಭಟನೆ ನೇತೃತ್ವವನ್ನು ಜಿಪಂ ಮಾಜಿ ಉಪಾಧ್ಯಕ್ಷ ಸಿದ್ದು ಪಾಟೀಲ, ಯುವ ಧುರೀಣ ಅಶೋಕ ಮನಗೂಳಿ, ಚಂದ್ರಕಾಂತ ಹಿರೇಮಠ, ರಿಯಾಜ್ ಫಾರೂಕಿ, ಎಂ.ಎ. ಕಾಲೇಬಾಗ, ಜೆಡಿ ಎಸ್ ತಾಲ್ಲೂಕು ವಕ್ತಾರ ಸಿದ್ದಣ್ಣ ಚೌಧರಿ, ಸಾಹೇಬಗೌಡ ಪಾಟೀಲ ಕೋರವಾರ, ತಾಪಂ ಸದಸ್ಯ ಅಕ್ಬರ್ ಮುಲ್ಲಾ, ಪುರಸಭೆ ಸದಸ್ಯರಾದ ರಾಜಣ್ಣ ನಾರಾಯಣಕರ, ಶಿವು ಹರನಾಳ ರುದ್ರ ಗೌಡ ಪಾಟೀಲ, ಬಸು ಯರನಾಳ, ಡಾ. ರಾಜಶೇಖರ ಸಂಗಮ, ಜುಲ್ಪಿಕರ ಅಂಗಡಿ, ಬಸವರಾಜ ತೆಲ್ಲೂರ, ಮಡಿವಾ ಳಪ್ಪ ಬ್ಯಾಲ್ಯಾಳ, ತನ್ವೀರ್ ಭೈರಾಮ ಡಗಿ, ಮಹಿಬೂಬ ಆಳಂದ, ಕಾಂತನ ಗೌಡ ಪಾಟೀಲ, ಅಶೋಕ ಕೊಳಾರಿ, ಬಸವರಾಜ ಬಾಗೇವಾಡಿ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT