ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧು: ಏಸ್ ಕ್ರಿಯೇಟಿವ್

Last Updated 16 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ


‘ಏಸ್ ಕ್ರಿಯೇಟಿವ್ ಲರ್ನಿಂಗ್’ 10ನೇ ತರಗತಿ ಮಕ್ಕಳಲ್ಲಿ ವಿಶ್ಲೇಷಣಾ ಸಾಮರ್ಥ್ಯ, ಅನ್ವಯಿಕ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ನಗರದ 150 ಶಾಲೆಗಳಲ್ಲಿ ಪ್ರತಿಭಾ ಪರೀಕ್ಷೆ ಏರ್ಪಡಿಸಿತ್ತು.

ರಾಜ್ಯ, ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪಠ್ಯಕ್ರಮದ ಶಾಲೆಗಳಲ್ಲಿ ಗಣಿತ ಮತ್ತು ವಿಜ್ಞಾನದಲ್ಲಿ ಪ್ರತಿಭಾವಂತರಾದ ಮಕ್ಕಳನ್ನು ಪತ್ತೆ ಹಚ್ಚಲು ಈ ಪರೀಕ್ಷೆ ಏರ್ಪಡಿಸಲಾಗಿತ್ತು. ಎರಡು ಹಂತದಲ್ಲಿ ನಡೆದ ಪರೀಕ್ಷೆಯಲ್ಲಿ ವಿವಿಧ ಶಾಲೆಗಳ ಎಂಟು ವಿದ್ಯಾರ್ಥಿಗಳು ಮೊದಲ ಮೂರು ಬಹುಮಾನ ಹಂಚಿಕೊಂಡರು. ಇತರ 10 ವಿದ್ಯಾರ್ಥಿಗಳು ಸಮಾಧಾನಕರ ಬಹುಮಾನಕ್ಕೆ ಪಾತ್ರರಾದರು.

ಮೊದಲ ಬಹುಮಾನ: ಸಿಂಧು ಶ್ರೀಧರ (ಡೆಲ್ಲಿ ಪಬ್ಲಿಕ್ ಸ್ಕೂಲ್, ಸೌತ್), ಎರಡನೇ ಬಹುಮಾನ: ವಿಶ್ವಾಸ್ ಡಿ. ಆರ್. (ಸೇಂಟ್ ಮೇರಿ ಕಾನ್ವೆಂಟ್) ಮತ್ತು ಜಯ್ ಎನ್. ಬೊಸ್ಮಿಯಾ (ಶ್ರೀ ಕುಮಾರನ್ ಚಿಲ್ಡ್ರನ್ಸ್ ಹೋಮ್), ಮೂರನೇ ಬಹುಮಾನ: ಶಂಕಬ್ರತ್ ನಾಗ್, ಟ್ವಿಂಕಲ್ ಖನ್ನಾ (ನ್ಯಾಷನಲ್ ಪಬ್ಲಿಕ್ ಸ್ಕೂಲ್, ಕೋರಮಂಗಲ), ಗಾಯತ್ರಿ ಎಚ್. ಭಟ್ (ಶ್ರೀ ಕುಮಾರನ್ಸ್ ಚಿಲ್ಡ್ರನ್ಸ್ ಹೋಮ್), ಅನಂತ್ ಕಾಮತ್ (ಏರ್‌ಫೋರ್ಸ್ ಸ್ಕೂಲ್, ಯಲಹಂಕ), ಸ್ಮೃತಿ ಮುರಳಿ (ಬೆಲ್ ಹೈಸ್ಕೂಲ್).

ಮೊದಲ ಬಹುಮಾನ ಪಡೆದ ಸಿಂಧುಗೆ 10 ಸಾವಿರ ರೂ ನಗದು ದೊರೆಯಿತು. ಜತೆಗೆ ಏಸ್‌ನ ಯಾವುದೇ ತರಬೇತಿ ಕಾರ್ಯಕ್ರಮದಲ್ಲಿ ಶೇ 100 ರಷ್ಟು ಶಿಷ್ಯವೇತನ ದೊರೆಯಲಿದೆ.

ಎರಡನೇ ಬಹುಮಾನ ವಿಜೇತರು ಐದು ಸಾವಿರ ನಗದು, ಶೇ 75ರಷ್ಟು ಶಿಷ್ಯವೇತನ, ಮೂರನೇ ಬಹುಮಾನ ವಿಜೇತರು ಸಾವಿರ ರೂಪಾಯಿ ನಗದು ಮತ್ತು ಶೇ 50 ರಷ್ಟು ಶಿಷ್ಯವೇತನಕ್ಕೆ ಪಾತ್ರರಾದರು.

ಸಮಾಧಾನಕರ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ 500 ರೂಪಾಯಿ ನಗದು ಬಹುಮಾನ ಮತ್ತು ಏಸ್ ಕಾರ್ಯಕ್ರಮದಲ್ಲಿ ಶೇ 15ರಷ್ಟು ಶಿಷ್ಯವೇತನ ದೊರೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT