ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಹ ಸಾವು

Last Updated 25 ಫೆಬ್ರುವರಿ 2011, 19:45 IST
ಅಕ್ಷರ ಗಾತ್ರ

ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನದ ಪುನರ್ವಸತಿ ಕೇಂದ್ರದಲ್ಲಿದ್ದ ‘ರವಿ’ ಎಂಬ 22 ವರ್ಷದ ಸಿಂಹ ಗುರುವಾರ ರಾತ್ರಿ ಸಾವನ್ನಪ್ಪಿದೆ.

‘ಸಿಂಹವು ಹಲವು ದಿನಗಳಿಂದ ಶ್ವಾಸಕೋಶ, ಪಿತ್ತಜನಕಾಂಗ ತೊಂದರೆ ಹಾಗೂ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿತ್ತು. ಅಲ್ಲದೇ ಸಾಕಷ್ಟು ವಯಸ್ಸಾಗಿತ್ತು. ಆದ ಕಾರಣ ಸಹಜವಾಗಿಯೇ ಸಾವನ್ನಪ್ಪಿದೆ’ ಎಂದು ಉದ್ಯಾನದ ವೈದ್ಯಾಧಿಕಾರಿ ಡಾ. ಚೆಟ್ಟಿಯಪ್ಪ ತಿಳಿಸಿದರು.

‘ಸಿಂಹವನ್ನು 2000ನೇ ಡಿಸೆಂಬರ್ 24 ರಂದು ಗುಲ್ಬರ್ಗದ ‘ಗೀತಾ ಸರ್ಕಸ್’ನಿಂದ್ ವಶಪಡಿಸಿಕೊಂಡು ಉದ್ಯಾನಕ್ಕೆ ತರಲಾಗಿತ್ತು. ಸರ್ಕಸ್‌ನಲ್ಲಿ ಹಿಂಸೆ ಅನುಭವಿಸಿದ್ದ ಸಿಂಹವು ಶ್ವಾಸಕೋಶ ತೊಂದರೆ ಹಾಗೂ ಇನ್ನಿತರೆ ಸಮಸ್ಯೆಗಳಿಂದ ಬಳಲುತ್ತಿತ್ತು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT