ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಹಳೀಯರಿಗೆ ಕಿವೀಸ್ ಶರಣು

Last Updated 18 ಮಾರ್ಚ್ 2011, 19:30 IST
ಅಕ್ಷರ ಗಾತ್ರ


ಮುಂಬೈ: ಗಾಯಾಳುಗಳ ಸಮಸ್ಯೆಯಿಂದ ಬಳಲಿದ ಕಿವೀಸ್ ಪಡೆಯನ್ನು ಸೋಲಿಸುವುದು ಶ್ರೀಲಂಕಾ ತಂಡದವರಿಗೆ ಕಷ್ಟವಾಗಲೇ ಇಲ್ಲ. ರಾಸ್ ಟೇಲರ್ ನೇತೃತ್ವದಲ್ಲಿ ಆಡಿದ ನ್ಯೂಜಿಲೆಂಡ್ ಎದುರು ಸಿಂಹಳೀಯರು 112 ರನ್‌ಗಳ ಅಂತರದ ವಿಜಯ ಸಾಧಿಸಿ, ‘ಎ’ ಗುಂಪಿನಲ್ಲಿ ಸದ್ಯಕ್ಕೆ ಅಗ್ರಸ್ಥಾನವನ್ನು ಗಿಟ್ಟಿಸುವಲ್ಲಿ ಯಶಸ್ವಿಯಾದರು.
ವಿಶ್ವಕಪ್ ಕ್ರಿಕೆಟ್ ಚಾಂಪಿಯನ್‌ಷಿಪ್‌ನ ‘ಎ’ ಗುಂಪಿನಲ್ಲಿ ತನ್ನ ಆರು ಲಿಗ್ ಪಂದ್ಯಗಳನ್ನು ಪೂರ್ಣಗೊಳಿಸಿರುವ ಲಂಕಾ ಒಟ್ಟು ಒಂಬತ್ತು ಪಾಯಿಂಟುಗಳನ್ನು ಗಳಿಸಿದೆ.

ಆಸ್ಟ್ರೇಲಿಯಾ ಕೂಡ ತನ್ನ ಖಾತೆಯಲ್ಲಿ ಇಷ್ಟೇ ಪಾಯಿಂಟುಗಳನ್ನು ಹೊಂದಿದ್ದರೂ, ರನ್ ಸರಾಸರಿಯಲ್ಲಿ ಹಿಂದೆ. ಆದರೆ ಅದು ಇನ್ನೂ ಒಂದು ಪಂದ್ಯವನ್ನು ಆಡುವುದು ಬಾಕಿ ಇದೆ ಎನ್ನುವುದನ್ನು ಮರೆಯುವಂತಿಲ್ಲ. ಆದ್ದರಿಂದ ಕುಮಾರ ಸಂಗಕ್ಕಾರ ಬಳಗವು ಒಂದು ದಿನದ ಮಟ್ಟಿಗೆ ಗುಂಪಿನಲ್ಲಿ ಮೊದಲ ಸ್ಥಾನದಲ್ಲಿ ನಿಂತಿದೆ ಎಂದು ಹೇಳಬಹುದು. ಕಾಂಗರೂಗಳ ನಾಡಿನವರು ತಮ್ಮ ಕೊನೆಯ ಪಂದ್ಯದಲ್ಲಿ ವಿಜಯ ಸಾಧಿಸಿದರೆ, ‘ಎ’ ಗುಂಪಿನಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಏರುತ್ತಾರೆ.

ಶುಕ್ರವಾರ ನ್ಯೂಜಿಲೆಂಡ್ ಎದುರು ಗೆದ್ದು, ನಾಕ್‌ಔಟ್ ಹಂತದಲ್ಲಿ ಹೋರಾಡಲು ಸಜ್ಜಾಗಬೇಕು ಎನ್ನುವ ಶ್ರೀಲಂಕಾ ಆಸೆ ಈಡೇರಿದೆ. ಆರಂಭಿಕ ಬ್ಯಾಟ್ಸ್‌ಮನ್‌ಗಳು ಮುಗ್ಗರಿಸಿದರೂ, ‘ಸಂಗಾ’ ಬಳಗವು ತನ್ನ ಪಾಲಿನ ಐವತ್ತು ಓವರುಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 265 ರನ್ ಗಳಿಸುವಲ್ಲಿ ಯಶಸ್ವಿ ಆಯಿತು. ಈ ಮೊತ್ತದಲ್ಲಿ ನಾಯಕ ಸಂಗಕ್ಕಾರ (111; 186 ನಿ., 128 ಎ., 12 ಬೌಂಡರಿ, 2 ಸಿಕ್ಸರ್) ಅವರ ಪಾಲು ದೊಡ್ಡದು. ಶತಕ ಸಾಧನೆ ಮಾಡಿದ ಅವರು ತಮ್ಮ ತಂಡವು ಬೇಗ ಕುಸಿತದ ಹಾದಿ ಹಿಡಿಯದಂತೆ ಎಚ್ಚರವಹಿಸಿದರು. ಮಾಹೇಲ ಜಯವರ್ಧನೆ (66; 149 ನಿ., 90 ಎ., 6 ಬೌಂಡರಿ) ಹಾಗೂ ಔಟಾಗದೆ ಉಳಿದ ಆ್ಯಂಜೆಲೊ ಮ್ಯಾಥ್ಯೂಸ್ (41; 67 ನಿ., 35 ಎ., 4 ಬೌಂಡರಿ) ಅವರ ಕೊಡುಗೆಯೂ ಬೆಲೆಯುಳ್ಳದ್ದು. 

ಗೆಲುವಿನ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ಹಾದಿ ಮಾತ್ರ ಸುಗಮ ಎನಿಸಲಿಲ್ಲ. ಅದು ಕೇವಲ 35 ಓವರುಗಳಲ್ಲಿ 153 ರನ್‌ಗಳನ್ನು ಕಲೆಹಾಕುವಷ್ಟರಲ್ಲಿ ಆಲ್‌ಔಟ್ ಆಯಿತು. ಡೇನಿಯಲ್ ವೆಟೋರಿ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ ರಾಸ್ ಟೇಲರ್ (33; 72 ನಿ., 55 ಎ., 3 ಬೌಂಡರಿ, 1 ಸಿಕ್ಸರ್) ಮಾತ್ರ ಅಲ್ಪ ಹೋರಾಟ ನಡೆಸಿದರು.

ಸ್ಕೋರ್ ವಿವರ
ಶ್ರೀಲಂಕಾ: 50 ಓವರುಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 265
ಉಪುಲ್ ತರಂಗ ರನ್‌ಔಟ್ (ಟಿಮ್ ಸೌಥೀ)  03
ತಿಲಕರತ್ನೆ ದಿಲ್ಶಾನ್ ಸಿ ಜೇಕಬ್ ಓರಾಮ್ ಬಿ ಟಿಮ್ ಸೌಥೀ  03
ಕುಮಾರ ಸಂಗಕ್ಕಾರ ಬಿ ನಥಾನ್ ಮೆಕ್ಲಮ್  111
ಮಾಹೇಲ ಜಯವರ್ಧನೆ ಎಲ್‌ಬಿಡಬ್ಲ್ಯು ಬಿ ಟಿಮ್ ಸೌಥೀ  66
ಆ್ಯಂಜೆಲೊ ಮ್ಯಾಥ್ಯೂಸ್ ಔಟಾಗದೆ  41
ತಿಲಾನ್ ಸಮರವೀರ ಸಿ ಬ್ರೆಂಡನ್ ಮೆಕ್ಲಮ್ ಬಿ ಸ್ಕಾಟ್ ಸ್ಟೈರಿಸ್ 05
ಚಾಮರ ಸಿಲ್ವಾ ಸಿ ಮತ್ತು ಬಿ ನಥಾನ್ ಮೆಕ್ಲಮ್  03
ನುವಾನ್ ಕುಲಶೇಖರಾ ಸಿ ಗುಪ್ಟಿಲ್ ಬಿ ಟಿಮ್ ಸೌಥೀ  01
ಲಸಿತ್ ಮಾಲಿಂಗ ಸಿ ಬ್ರೆಂಡನ್ ಮೆಕ್ಲಮ್ ಬಿ ಜೇಕಬ್ ಓರಾಮ್ 06
ಮುತ್ತಯ್ಯ ಮುರಳೀಧರನ್ ರನ್‌ಔಟ್ (ಓರಾಮ್/ಗುಪ್ಟಿಲ್/ನಥಾನ್ ಮೆಕ್ಲಮ್)  07
ಅಜಂತಾ ಮೆಂಡಿಸ್ ಔಟಾಗದೆ  00
ಇತರೆ: (ಲೆಗ್‌ಬೈ-4, ವೈಡ್-12, ನೋಬಾಲ್-3)  19
ವಿಕೆಟ್ ಪತನ: 1-13 (ಉಪುಲ್ ತರಂಗ; 2.6), 2-19 (ತಿಲಕರತ್ನೆ ದಿಲ್ಶಾನ್; 4.3), 3-164 (ಮಾಹೇಲ ಜಯವರ್ಧನೆ; 36.1), 4-210 (ಕುಮಾರ ಸಂಗಕ್ಕಾರ; 41.4), 5-219 (ತಿಲಾನ್ ಸಮರವೀರ; 44.1), 6-224 (ಚಾಮರ ಸಿಲ್ವಾ; 45.4), 7-232 (ನುವಾನ್ ಕುಲಶೇಖರಾ; 46.6), 8-239 (ಲಸಿತ್ ಮಾಲಿಂಗ; 47.5), 9-260 (ಮುತ್ತಯ್ಯ ಮುರಳೀಧರನ್; 49.2).
ಬೌಲಿಂಗ್: ಟಿಮ್ ಸೌಥೀ 10-0-63-3 (ವೈಡ್-5), ಜೇಕಬ್ ಓರಾಮ್ 10-1-57-1 (ನೋಬಾಲ್-1, ವೈಡ್-1), ಹ್ಯಾಮಿಶ್ ಬೆನೆಟ್ 4.1-0-16-0 (ನೋಬಾಲ್-1, ವೈಡ್-1), ಜೆಸ್ಸಿ ರೈಡರ್ 3.5-0-18-0 (ನೋಬಾಲ್-1, ವೈಡ್-1), ಜೇಮ್ಸ್ ಫ್ರಾಂಕ್ಲಿನ್ 3-0-11-0, ಸ್ಕಾಟ್ ಸ್ಟೈರಿಸ್ 8-0-44-1, ನಥಾನ್ ಮೆಕ್ಲಮ್ 10-0-48-2, ಕೇನ್ ವಿಲಿಯಮ್‌ಸನ್ 1-0-4-0
ನ್ಯೂಜಿಲೆಂಡ್: 35 ಓವರುಗಳಲ್ಲಿ 153
ಮಾರ್ಟಿನ್ ಗುಪ್ಟಿಲ್ ಎಲ್‌ಬಿಡಬ್ಲ್ಯು ನುವಾನ್ ಕುಲಶೇಖರಾ  13
ಬ್ರೆಂಡನ್ ಮೆಕ್ಲಮ್ ಸಿಜಯವರ್ಧನೆ ಬಿ ಆ್ಯಂಜೆಲೊ ಮ್ಯಾಥ್ಯೂಸ್ 14
ಜೆಸ್ಸಿ ರೈಡರ್ ಸಿ ಕುಮಾರ ಸಂಗಕ್ಕಾರ ಬಿ ಅಜಂತಾ ಮೆಂಡಿಸ್  19
ರಾಸ್ ಟೇಲರ್ ಎಲ್‌ಬಿಡಬ್ಲ್ಯು ಬಿ ಮುತ್ತಯ್ಯ ಮುರಳೀಧರನ್  33
ಕೇನ್ ವಿಲಿಯಮ್‌ಸನ್ ಸ್ಟಂಪ್ಡ್ ಸಂಗಕ್ಕಾರ ಬಿ ಮುರಳೀಧರನ್  05
ಸ್ಕಾಟ್ ಸ್ಟೈರಿಸ್ ಸಿ ಮತ್ತು ಬಿ ಮುತ್ತಯ್ಯ ಮುರಳೀಧರನ್  06
ಜೇಮ್ಸ್ ಫ್ರಾಂಕ್ಲಿನ್ ಸಿ ದಿಲ್ಶಾನ್ ಬಿ ಮುತ್ತಯ್ಯ ಮುರಳೀಧರನ್ 20
ನಥಾನ್ ಮೆಕ್ಲಮ್ ಸಿ ಮಾಹೇಲ ಜಯವರ್ಧನೆ ಬಿ ತಿಲಕರತ್ನೆ ದಿಲ್ಶಾನ್  04
ಜೇಕಬ್ ಓರಾಮ್ ಔಟಾಗದೆ  20
ಟಿಮ್ ಸೌಥೀ ಎಲ್‌ಬಿಡಬ್ಲ್ಯು ಬಿ ಅಜಂತಾ ಮೆಂಡಿಸ್  08
ಹ್ಯಾಮಿಶ್ ಬೆನೆಟ್ ಬಿ ಲಸಿತ್ ಮಾಲಿಂಗ  00
ಇರತೆ: (ಲೆಗ್‌ಬೈ-4, ವೈಡ್-6, ನೋಬಾಲ್-1)  11
ವಿಕೆಟ್ ಪತನ: 1-29 (ಬ್ರೆಂಡನ್ ಮೆಕ್ಲಮ್; 6.2), 2-33 (ಮಾರ್ಟಿನ್ ಗುಪ್ಟಿಲ್; 7.1), 3-82 (ಜೆಸ್ಸಿ ರೈಡರ್; 16.5), 4-88 (ಕೇನ್ ವಿಲಿಯಮ್‌ಸನ್; 19.2), 5-93 (ರಾಸ್ ಟೇಲರ್; 21.1), 6-102 (ಸ್ಕಾಟ್ ಸ್ಟೈರಿಸ್; 23.5), 7-115 (ನಥಾನ್ ಮೆಕ್ಲಮ್; 26.5), 8-129 (ಜೇಮ್ಸ್ ಫ್ರಾಂಕ್ಲಿನ್; 31.3), 9-144 (ಟಿಮ್ ಸೌಥೀ; 33.4), 10-153 (ಹ್ಯಾಮಿಶ್ ಬೆನೆಟ್; 34.6).
ಬೌಲಿಂಗ್: ಲಸಿತ್ ಮಾಲಿಂಗ 5-0-38-1 (ವೈಡ್-3), ನುವಾನ್ ಕುಲಶೇಖರಾ 7-0-19-1 (ವೈಡ್-2), ಆ್ಯಂಜೆಲೊ ಮ್ಯಾಥ್ಯೂಸ್ 3-0-19-1, ಅಜಂತಾ ಮೆಂಡಿಸ್ 6-0-24-2 (ವೈಡ್-1), ತಿಲಕರತ್ನೆ ದಿಲ್ಶಾನ್ 6-0-24-1, ಮುತ್ತಯ್ಯ ಮುರಳೀಧರನ್ 8-0-25-4 (ನೋಬಾಲ್-1).

ಫಲಿತಾಂಶ: ಶ್ರೀಲಂಕಾಕ್ಕೆ 112 ರನ್‌ಗಳ ಗೆಲುವು.
ಪಾಯಿಂಟ್ಸ್: ಶ್ರೀಲಂಕಾ-2, ನ್ಯೂಜಿಲೆಂಡ್-0
                  ಪಂದ್ಯ ಶ್ರೇಷ್ಠ: ಕುಮಾರ ಸಂಗಕ್ಕಾರ.    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT