ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಇಟಿ ನೀತಿ ವಿರೋಧಿಸಿ ಎಬಿವಿಪಿ ಕಾರ್ಯಕರ್ತರ ಪ್ರತಿಭಟನೆ

Last Updated 18 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ರಾಯಚೂರು: ವೃತ್ತಿ ಶಿಕ್ಷಣ ಪ್ರವೇಶ ಸಂಬಂಧ 2006ರ ಸಿ.ಇ.ಟಿ ಕಾಯ್ದೆ ಜಾರಿ­ಗೊಳಿಸಲು ಹೊರಟಿರುವ ಸರ್ಕಾರ­ದ ನಿರ್ಧಾರ ವಿರೋಧಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿ­ಷತ್ ಕಾರ್ಯಕರ್ತರು ಬುಧವಾರ ನಗರ­ದಲ್ಲಿ ಪ್ರತಿಭಟನೆ ನಡೆಸಿದರು.

ಸರ್ಕಾರ 2006 ಸಿ.ಇ.ಟಿ ಕಾಯ್ದೆ ಜಾರಿಗೆ ಮುಂದಾಗಿರುವುದು ಸರಿ­ಯಲ್ಲ. ದುರ್ಬಲ ವರ್ಗಗಳಿಗೆ ಸಾಮಾ­ಜಿಕ ನ್ಯಾಯ ಒದಗಿಸಲು ವಿಫಲ­ವಾಗುವ ಮತ್ತು ಅವರ ಶೈಕ್ಷಣಿಕ ಹಕ್ಕು ಮೊಟಕು­ಗೊಳಿಸುವ ನೀತಿ ಇದಾಗಿದೆ ಎಂದು ಆರೋಪಿಸಿದರು.

ಈ ಕಾಯ್ದೆಯಿಂದ ಈಗಿರುವ ಸರ್ಕಾರಿ ಕೋಟಾದಲ್ಲಿ ಎಂಜಿನಿ­ಯರಿಂಗ್‌ ವಿಭಾಗದ ಶೇ 45, ವೈದ್ಯ­ಕೀಯ ವಿಭಾಗದ ಶೇ 40, ದಂತ ವೈದ್ಯ­ಕೀಯ ವಿಭಾಗದ ಶೇ 35ರಷ್ಟು ಸೀಟು­ಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಪಾಲಾಗಲಿದೆ. ಅನುದಾನರಹಿತ ಕಾಲೇಜಿ­ನಲ್ಲಿ ಒಂದೂ ಸರ್ಕಾರಿ ಕೋಟಾದ ಸೀಟುಗಳು ಇಲ್ಲ­ದಂತಾಗುತ್ತದೆ ಎಂದು ವಿದ್ಯಾರ್ಥಿಗಳು ದೂರಿ­ದರು.

ಕಾಮೆಡ್–ಕೆ ನಡೆಸುವ ಪ್ರವೇಶ ಪರೀಕ್ಷೆ ಬಗ್ಗೆ ಹಲವಾರು ದೂರು­ಗಳಿವೆ. ಸರ್ಕಾರ ಉಳಿದ ಸರ್ಕಾರಿ ಸೀಟು­ಗಳಿಗೂ ಪರೀಕ್ಷೆ ನಡೆಸಲು ಕಾಮೆಡ್‌–ಕೆಗೆ ಬಿಟ್ಟು ಕೊಡುವುದು ಖಂಡ­ನೀಯ. ಈ ಕ್ರಮದಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಬೇಕಾಬಿಟ್ಟಿ ಶುಲ್ಕ ವಸೂ­ಲಿಗೆ ಅನುಕೂಲವಾಗಲಿದೆ ಎಂದು ­ಆಕ್ರೋಶ ವ್ಯಕ್ತಪಡಿಸಿದರು.

ಕಾಯ್ದೆಯಿಂದ ಏಕರೂಪ ಶುಲ್ಕ ನೀತಿ ಮಾಯ­ವಾಗಿ ಬಡ ಪ್ರತಿಭಾವಂತ ವಿದ್ಯಾರ್ಥಿ­ಗಳಿಗೆ ಶುಲ್ಕ ಭರಿಸಲು ಕಷ್ಟವಾಗ­ಲಿದೆ.ಸರ್ಕಾರ ವಿದ್ಯಾರ್ಥಿ ವಿರೋಧಿ ನೀತಿ ಬಿಡಬೇಕು ಎಂದು ಆಗ್ರಹಿಸಿದರು.

ಎಬಿವಿಪಿ ಜಿಲ್ಲಾ ಸಹ ಸಂಚಾಲಕ ವಿಜಯ ಸೌದಿಕರ್ ಇತರರು ದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT