ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ಜೊತೆ ಚಿಂತನೆ- ಶಂಕರಮೂರ್ತಿ

Last Updated 4 ಅಕ್ಟೋಬರ್ 2012, 18:30 IST
ಅಕ್ಷರ ಗಾತ್ರ

ಬೆಳಗಾವಿ: `ಇದೇ 11 ರಂದು ಲೋಕಾರ್ಪಣೆಗೊಳ್ಳಲಿರುವ ಸುವರ್ಣಸೌಧ ಕಟ್ಟಡಕ್ಕೆ `ಸುವರ್ಣ ವಿಧಾನಸೌಧ~ ಎಂದು ಹೆಸರಿಡಬೇಕು ಎಂಬ ಬೇಡಿಕೆಗಳು ಬಂದಿವೆ. ಈ ಕುರಿತು ಮುಖ್ಯಮಂತ್ರಿ ಜೊತೆಗೆ ಚರ್ಚಿಸುತ್ತೇನೆ~ ಎಂದು ವಿಧಾನ ಪರಿಷತ್  ಸಭಾಪತಿ ಡಿ.ಎಚ್.ಶಂಕರಮೂರ್ತಿ ಹೇಳಿದರು.

ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿ, `ದಾಖಲೆಯಲ್ಲಿ `ಸುವರ್ಣಸೌಧ~ ಎಂದು ನಮೂದಾಗಿದೆ. ಆದರೆ `ಸುವರ್ಣ ವಿಧಾನಸೌಧ~ ಎಂದು ಹೆಸರಿಡುವುದು ಸೂಕ್ತ ಎಂದರು.

8ರಂದು ಎಂಇಎಸ್ ಪ್ರತಿಭಟನೆ
ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಇದೇ 11ರಂದು ~ಸುವರ್ಣ ಸೌಧ~ ಉದ್ಘಾಟಿಸುವುದರ ವಿರುದ್ಧ ಧ್ವನಿ ಎತ್ತಲು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಸಜ್ಜಾಗಿದ್ದು ನಗರದಲ್ಲಿ ಸೋಮವಾರ (ಅ.8) ಪ್ರತಿಭಟನೆ ನಡೆಸಲಿದೆ.

ನಗರದಲ್ಲಿ ಸಭೆ ನಡೆಸಿದ ಎಂಇಎಸ್ ಹಾಗೂ ಮಹಾರಾಷ್ಟ್ರ ಪರ ಸಂಘಟನೆಗಳ ಮುಖಂಡರು, `ರಾಷ್ಟ್ರಪತಿ ಚುನಾವಣೆಯಲ್ಲಿ ಬೆಂಬಲ ವ್ಯಕ್ತಪಡಿಸಿದ ಶಿವಸೇನೆ ಸೇರಿದಂತೆ ಮಹಾರಾಷ್ಟ್ರದ ವಿವಿಧ ರಾಜಕೀಯ ಪಕ್ಷಗಳು, ಉದ್ಘಾಟನೆಗೆ ಬರಬಾರದು ಎಂದು ರಾಷ್ಟ್ರಪತಿ ಮೇಲೆ ಒತ್ತಡ ಹೇರಬೇಕು~ ಎಂದು ಒತ್ತಾಯಿಸಿದರು.
ಸಭೆಯಲ್ಲಿ ಎಂಇಎಸ್ ಮುಖಂಡರಾದ ಬಿ.ಐ.ಪಾಟೀಲ, ಶಿವಾಜಿ ಸುಂಟಕರ, ವಿಜಯ ಮೋರೆ, ವೈ.ಬಿ.ಚೌಗುಲೆ, ರೇಣು ಕಿಲ್ಲೇಕರ, ಟಿ.ಕೆ. ಪಾಟೀಲ, ಕಿರಣ ಸಾಯನಾಕ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT