ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ರಕ್ಷಣೆಗೆ ಸೇವಾದಳ : ಕಾಂಗ್ರೆಸ್ ಕಾತರ

Last Updated 1 ಫೆಬ್ರುವರಿ 2011, 17:00 IST
ಅಕ್ಷರ ಗಾತ್ರ

ಮೈಸೂರು: ‘ಯಡಿಯೂರಪ್ಪ ಅವರು ಜೀವ ಬೆದರಿಕೆ ಇದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ವಿಧಾನಸೌಧಕ್ಕೆ ಹೋದರೆ ಮನೆಗೆ ವಾಪಸ್ ಬರುವ ಭರವಸೆ ಇಲ್ಲ ಎಂದು ನೋವು ತೋಡಿಕೊಂಡಿದ್ದಾರೆ.  ಅವರು ಬಯಸಿದರೆ ಕಾಂಗ್ರೆಸ್ ಸೇವಾದಳವನ್ನು ರಕ್ಷಣೆಗೆ ಕಳುಹಿಸುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ  ಡಾ.ಜಿ.ಪರಮೇಶ್ವರ ವ್ಯಂಗ್ಯವಾಡಿದರು.

‘ರಾಜ್ಯದ ಮುಖ್ಯಮಂತ್ರಿ ಅವರೇ ತಮಗೆ ರಕ್ಷಣೆ ಇಲ್ಲವೆಂದು ಅವಲತ್ತುಕೊಂಡರೆ ಇನ್ನು ಸಾಮಾನ್ಯ  ಜನರ ಪಾಡೇನು? ಪೊಲೀಸ್ ಇಲಾಖೆ, ಗುಪ್ತಚರ ವಿಭಾಗ ಅವರ ಬಳಿಯೇ ಇದೆ. ಈ ರೀತಿ ಅಸಹಾಯಕತೆ  ವ್ಯಕ್ತಪಡಿಸುವುದು ಅವರಿಗೆ ಶೋಭೆ ತರುವುದಿಲ್ಲ. ಮುಖ್ಯಮಂತ್ರಿ ಸ್ಥಾನದಲ್ಲಿ ಒಂದು ನಿಮಿಷವೂ ಅವರು  ಇರಕೂಡದು. ಕೂಡಲೇ ರಾಜೀನಾಮೆ ನೀಡಬೇಕು’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಮುಖ್ಯಮಂತ್ರಿ ಅವರಿಗೆ ರಕ್ಷಣೆ ಇಲ್ಲದ ಮೇಲೆ ಅಂತಹವರ ಕೈಯಲ್ಲಿ ರಾಜ್ಯ ನಡೆಸಲು ಆಗುವುದಿಲ್ಲ.  ರಾಜ್ಯದ ಜನತೆಯ ರಕ್ಷಣೆ ಯಾರ ಹೊಣೆ? ರಾಜಧಾನಿಯಲ್ಲಿ ಐಟಿ-ಬಿಟಿಯಲ್ಲಿ ಉದ್ಯೋಗ ಮಾಡುತ್ತಿರುವ ಮಂದಿ ನಿತ್ಯ ಕೊಲೆ ಆಗುತ್ತಿದೆ. ಇವರನ್ನೆಲ್ಲ ರಕ್ಷಣೆ ಮಾಡುವವರು ಯಾರು?’ ಎಂದು ಕೇಳಿದರು.

‘ಬಿಜೆಪಿ ಅವರ ಬಳಿ ಆರ್‌ಎಸ್‌ಎಸ್ ದಂಡ ಇರಬಹುದು. ಆದರೆ ಕಾಂಗ್ರೆಸ್ ಸೇವಾದಳದಲ್ಲಿ ಲಾಠಿ ಇದೆ. ಬ್ರಿಟಿಷರ ಕಾಲದಿಂದಲೂ ಇದೇ ಲಾಠಿಯನ್ನು ಬಳಸುತ್ತಿದ್ದೇವೆ’ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ  ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT