ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಗರೇಟ್ ಕಳ್ಳ ಸಾಗಾಣಿಕೆ ಆರೋಪ, ಏರ್ ಇಂಡಿಯಾ ಸಿಬ್ಬಂದಿ ಬಂಧನ

Last Updated 3 ಜೂನ್ 2013, 11:20 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಏರ್ ಇಂಡಿಯಾ ವಿಮಾನದ ಸಿಬ್ಬಂದಿ ಒಬ್ಬರನ್ನು 50 ಸಿಗರೇಟ್ ಪೆಟ್ಟಿಗೆಗಳನ್ನು ಕಳ್ಳಸಾಗಾಣಿಕೆ ಮಾಡಿದ ಆರೋಪದ ಮೇಲೆ ಲಂಡನ್ ಪೊಲೀಸರು ಬಂಧಿಸಿದ ಘಟನೆ ತಡವಾಗಿ ವರದಿಯಾಗಿದೆ.

ಘಟನೆ ಕಳೆದ ಶುಕ್ರವಾರ ಸಂಭವಿಸಿದ್ದು, ಏರ್ ಇಂಡಿಯಾದ ಮುಂಬೈ-ಲಂಡನ್ ವಿಮಾನದ ಸಿಬ್ಬಂದಿ ಭಾವಿಕ್ ಷಾ ಎಂಬುವವರು 50 ಸಿಗರೇಟ್ ಪೆಟ್ಟಿಗೆಗಳನ್ನು ಕಳ್ಳಸಾಗಾಣಿಕೆ ಮಾಡಿದ ಆರೋಪದಡಿ ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಇವರರನ್ನು ಏರ್ ಇಂಡಿಯಾ ಅಮಾನತು ಮಾಡಿದೆ.

ಘಟನೆ ವಿವರ :
ಕಳೆದ ಶುಕ್ರವಾರ ಮುಂಬೈನಿಂದ ಲಂಡನ್‌ನ ಏತ್ ರೋ ವಿಮಾನನಿಲ್ದಾಣಕ್ಕೆ ಬಂದ ಏರ್ ಇಂಡಿಯಾ ವಿಮಾನದಲ್ಲಿನ ಸಿಬ್ಬಂದಿ ಹೋಟೆಲ್‌ಗೆ ಹೋಗುತ್ತಿದ್ದ ವೇಳೆ ಪೊಲೀಸರು ತಪಾಸಣೆ ನಡೆಸಿದಾಗ ಚೀಲವೊಂದರಲ್ಲಿ 50 ಸಿಗರೇಟ್ ಪ್ಯಾಕ್‌ಗಳು ದೊರೆತವು. ಚೀಲ ಯಾರಿಗೆ ಸೇರಿದ್ದು ಎಂಬುದೇ ಗೊತ್ತಾಗಲಿಲ್ಲ.

ಆಗ ವಿಮಾನದಲ್ಲಿದ್ದ ಎಲ್ಲಾ ಸಿಬ್ಬಂದಿ ಅವರನ್ನು ಸುಮಾರು ನಾಲ್ಕು ಗಂಟೆಗಳ ಕಾಲ ತಡೆದು ನಿಲ್ಲಿಸಿ ಪ್ರಶ್ನಿಸಲಾಯಿತು. ಆಗ ಚೀಲವು ಭಾವಿಕ್ ಷಾ ಅವರಿಗೆ ಸೇರಿದ್ದು ಎಂಬುದು ತಿಳಿದ ನಂತರ ಉಳಿದವರುನ್ನು ಬಿಟ್ಟು ಷಾ ಅವರನ್ನು ಬಂಧಿಸಲಾಯಿತು. ಸದ್ಯ ಇವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT