ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಟಿಬ್ಯಾಂಕ್ ವಂಚನೆ :ಯಾರಿಗೆ ನಷ್ಟ?

Last Updated 4 ಜನವರಿ 2011, 12:30 IST
ಅಕ್ಷರ ಗಾತ್ರ

ಸರಿದು ಹೋದ 2010ರ ಸಾಲಿನ  ಹಣಕಾಸು ಹಗರಣಗಳ ಪಟ್ಟಿಗೆ ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ಬೆಳಕಿಗೆ ಬಂದಿರುವ ಸಿಟಿಬ್ಯಾಂಕ್‌ನ ಗುಡಗಾಂವ್ ಶಾಖೆಯ ಸಂಪರ್ಕಾಧಿಕಾರಿ ಶಿವರಾಜ್ ಪುರಿ  (Relationship officer) ಎಸಗಿರುವ ವಂಚನೆಯು ಹೊಸ ಸೇರ್ಪಡೆಯಾಗಿದೆ.

ಗೃಹ ನಿರ್ಮಾಣ ರಂಗದ  ದೊಡ್ಡ ಸಂಸ್ಥೆಗಳಿಗೆ ಗೃಹ ನಿರ್ಮಾಣ ಸಾಲ (ಕಾರ್ಪೋರೇಟ್ ಸಾಲ) ಮಂಜೂರು ಮಾಡಲು ಲಂಚ ನೀಡಿದ ಹಗರಣದಲ್ಲಿ ಎಲ್‌ಐಸಿ ಹೌಸಿಂಗ್ ಫೈನಾನ್ಸ್‌ನ ಮುಖ್ಯಸ್ಥ ಸೇರಿದಂತೆ, ರಾಷ್ಟ್ರೀಕೃತ ಮೂರು  ಬ್ಯಾಂಕ್‌ಗಳ ಅಧಿಕಾರಿಗಳು  ಭಾಗಿಯಾಗಿದ್ದರು.

ದೊಡ್ಡ ಮೊತ್ತದ ಗೃಹ ನಿರ್ಮಾಣ ಸಾಲದ ವ್ಯವಸ್ಥೆ ಮಾಡುತ್ತಿದ್ದ ಮುಂಬೈ ಮೂಲದ ಮನಿ ಮ್ಯಾಟರ್ಸ್ ಸಂಸ್ಥೆ ಈ ಹಗರಣದ ಕೇಂದ್ರ ಬಿಂದುವಾಗಿತ್ತು. ಈ ಸಂಸ್ಥೆಯು ಸಾಲ ಮಂಜೂರಾತಿಗೆ ಅಧಿಕಾರಿಗಳಿಗೆ ಲಂಚ ನೀಡಿದ ಮತ್ತು ನೀಡಲು ಪ್ರಯತ್ನಿಸಿದ ನಿದರ್ಶನಗಳು ಬೆಳಕಿಗೆ ಬಂದಿದ್ದವು. ಪ್ರತಿಯೊಂದು ವಹಿವಾಟಿನಲ್ಲಿ ್ಙ 50 ಲಕ್ಷದಷ್ಟು ಲಂಚ ಪಾವತಿಸಿದ ನಿದರ್ಶನಗಳಿದ್ದರೆ, ಒಟ್ಟಾರೆ ಈ ಹಗರಣದ ಮೊತ್ತವು  ್ಙ 1000 ಕೋಟಿಗಳಷ್ಟಿತ್ತು.

ಈಗ ಸಿಟಿಬ್ಯಾಂಕ್ ಶಾಖೆಯ ಸಂಪರ್ಕಾಧಿಕಾರಿ ಒಡ್ಡಿದ ಆಮಿಷಕ್ಕೆ ಸುಲಭವಾಗಿ ಬಲಿಯಾದ ಉದ್ದಿಮೆ ಸಂಸ್ಥೆಗಳು ಮತ್ತು ಸಿರಿವಂತ ಕುಳಗಳು ಕೋಟ್ಯಂತರ ರೂಪಾಯಿಗಳನ್ನು ಕಳೆದುಕೊಂಡಿರುವುದು ಹೊಸ  ಪ್ರಕರಣದ ಮುಖ್ಯ ತಿರುಳು.

ಸಿಟಿ ಬ್ಯಾಂಕ್‌ನಲ್ಲಿ ತಾನು ‘ಕಸ್ಟೋಡಿಯನ್ ಅಕೌಂಟ್’ (custodian account)ಗಳನ್ನು  ನಿರ್ವಹಿಸುತ್ತಿರುವುದಾಗಿ  ಹೇಳಿ ದೊಡ್ಡ ಉದ್ದಿಮೆ ಸಂಸ್ಥೆ ಮತ್ತು ಕಾರ್ಪೊರೇಟ್ ಸಂಸ್ಥೆಗಳನ್ನು ಸಂಪರ್ಕಿಸುತ್ತಿದ್ದ  ಶಿವರಾಜ್ ಪುರಿ, ಭಾರತೀಯ ಷೇರು ನಿಯಂತ್ರಣ ಮಂಡಳಿಯ (ಸೆಬಿ) ಹೆಸರಿನಲ್ಲಿ ಖೊಟ್ಟಿ ಸುತ್ತೋಲೆ ಸೃಷ್ಟಿಸಿ ಸಿರಿವಂತ ಕುಳಗಳಿಗೆ ಮಂಕುಬೂದಿ ಎರಚುವಲ್ಲಿ ಸಫಲನಾಗಿದ್ದಾನೆ.

ಬ್ಯಾಂಕ್ ಸಂಪರ್ಕಾಧಿಕಾರಿಯು ‘ಕಸ್ಟೋಡಿಯನ್ ಅಕೌಂಟ್’ ನಿರ್ವಹಿಸುವುದು ಎಂದರೆ, ಶ್ರೀಮಂತರ ಬಳಿಯಲ್ಲಿ ಇರುವ ದೊಡ್ಡ ಮೊತ್ತವನ್ನು ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡಲು ನೆರವಾಗುವುದು  ಮತ್ತು ಆ ಉಳಿತಾಯ ಖಾತೆ ನಿರ್ವಹಿಸುವ ಹೊಣೆಗಾರಿಕೆಯನ್ನು  ಗ್ರಾಹಕರ ಬದಲಿಗೆ ಸ್ವತಃ ತಾವೇ ನಿಭಾಯಿಸುವುದು ಎಂದರ್ಥ.

ತನಗೆ ಇಂತಹ ವಹಿವಾಟು ನಡೆಸಲು ಸಿಟಿಬ್ಯಾಂಕ್ ಮತ್ತು ‘ಸೆಬಿ’ ಅಧಿಕಾರ ನೀಡಿರುವುದರ ನಕಲಿ ದಾಖಲೆಗಳ ಮೂಲಕವೇ ಆತ ನಂಬಿಕೆ ಮೂಡಿಸುತ್ತಿದ್ದ. ಕೆಲ ಹೂಡಿಕೆ ಯೋಜನೆಗಳಲ್ಲಿ ಅದರಲ್ಲೂ ವಿಶೇಷವಾಗಿ ಠೇವಣಿಗಳಲ್ಲಿ ಶೇ 18ರಷ್ಟು ಆಕರ್ಷಕ ಬಡ್ಡಿ ನೀಡಲಾಗುವುದು ಎಂದೂ ಮಂಕುಬೂದಿ ಎರಚಿದ್ದ.

ಹೂಡಿಕೆದಾರರು ನಿರ್ದಿಷ್ಟ ಉಳಿತಾಯ ಯೋಜನೆ ಆಯ್ಕೆ ಮಾಡಿಕೊಳ್ಳುತ್ತಿದ್ದಂತೆ ಆತ, ಬ್ಯಾಂಕ್‌ನ ಹಲವಾರು ದಾಖಲೆ ಪತ್ರಗಳಿಗೆ ಹೂಡಿಕೆದಾರರ ಸಹಿ ಪಡೆಯುತ್ತಿದ್ದ. ಹೂಡಿಕೆದಾರರ ಹಣವನ್ನು ಅವರ ಆಯ್ಕೆಯ ಮ್ಯೂಚುವಲ್ ಫಂಡ್‌ಗಳಲ್ಲಿ ತೊಡಗಿಸುವುದಾಗಿ ಹೇಳುತ್ತಿದ್ದ. ಆದರೆ, ಹೀಗೆ ಹೇಳಿದಂತೆ ನಡೆದುಕೊಳ್ಳುತ್ತಿರಲಿಲ್ಲ. ಅದಕ್ಕೆ ಬದಲಾಗಿ ಆತ ತನ್ನ ಖಾತೆ ಮೂಲಕ ಈ ಹಣವನ್ನು ಬೇರೆ ಬೇರೆ ಯೋಜನೆಗಳಲ್ಲಿ ತೊಡಗಿಸುತ್ತಿದ್ದ. ಬಹುಪಾಲನ್ನು ಷೇರುಗಳಲ್ಲಿ ತೊಡಗಿಸುತ್ತಿದ್ದ.

ಹೂಡಿಕೆದಾರರಿಗೆ ಯಾವುದೇ ಅನುಮಾನ ಬರದಂತೆ ಪ್ರತಿ ತಿಂಗಳೂ ಆನ್‌ಲೈನ್‌ನಲ್ಲಿ ಮಾಸಿಕ ವಿವರ (statement) ರವಾನಿಸುತ್ತಿದ್ದ. ಹೀಗಾಗಿ ಈತ ಎಸಗುತ್ತಿದ್ದ ವಂಚನೆ ಬೆಳಕಿಗೆ ಬರಲು ಸಾಕಷ್ಟು ಸಮಯ ಹಿಡಿಯಿತು.

ತನ್ನ ಮೋಸದ ಜಾಲದ ಸುಳಿಗೆ ಬಲಿ ಬಿದ್ದವರಿಂದ ಪಡೆಯುವ ಚೆಕ್‌ಗಳನ್ನು ಪುರಿ, ಗ್ರಾಹಕರ ಜೊತೆ ಚರ್ಚಿಸಿದ ಯೋಜನೆಗಳ ಬದಲಿಗೆ ತನಗಿಷ್ಟವಾದ ಷೇರುಗಳಲ್ಲಿ ತೊಡಗಿಸಿ ಭಾರಿ ಪ್ರಮಾಣದ ಲಾಭ ಮಾಡಿಕೊಳ್ಳಲು ಹವಣಿಸಿದ್ದ.

‘ಸೆಬಿ’ ಅನುಮೋದಿಸಿದ್ದ ಗರಿಷ್ಠ ಬಡ್ಡಿ ದರಗಳ ಯೋಜನೆಗಳ ಬಗ್ಗೆ ಹಣ ಹೂಡಿಕೆ ಮಾಡಿದ ಗ್ರಾಹಕರಿಂದ ದೂರುಗಳು ಬಂದ ನಂತರವೇ ಎಚ್ಚೆತ್ತುಕೊಂಡ ಸಿಟಿಬ್ಯಾಂಕ್ ತನಿಖೆ ನಡೆಸಿದ ನಂತರವೇ ಈ ವಂಚನೆ ಪ್ರಕರಣ ಬೆಳಕಿಗೆ ಬಂದಿತು.

ಈಗ ಬೆಳಕಿಗೆ ಬಂದ ಸಿಟಿಬ್ಯಾಂಕ್ ಹೂಡಿಕೆ ಹಗರಣದಲ್ಲಿ  16 ಕಾರ್ಪೊರೇಟ್ ಸಂಸ್ಥೆಗಳ ಅಂದಾಜು ್ಙ 300 ಕೋಟಿಗಳಷ್ಟು ಮೊತ್ತ ವಂಚನೆಗೆ ಒಳಗಾಗಿರುವ ಶಂಕೆ ಇದೆ. ಉಳಿದ ್ಙ 100 ಕೋಟಿಗಳನ್ನು ಶ್ರೀಮಂತ ವ್ಯಕ್ತಿಗಳು ಹೂಡಿಕೆ ಮಾಡಿ ಕಳೆದುಕೊಂಡಿರುವ ಸಾಧ್ಯತೆ ಇದೆ.

ಹೀರೊ ಗ್ರೂಪ್‌ನ ನಾಲ್ಕು ಅಂಗಸಂಸ್ಥೆಗಳೂ ಹಣ ಕಳೆದುಕೊಂಡಿವೆ. ಕಾನೂನುಬದ್ಧ ರೀತಿಯಲ್ಲಿ (ಟ್ರೆಸರಿ ಆಪರೇಷನ್ಸ್) ತನ್ನ ಅಂಗಸಂಸ್ಥೆಗಳು ಹೂಡಿಕೆ ಮಾಡಿರುವುದಾಗಿ ಹೇಳಿಕೊಂಡಿರುವ ಹೀರೊ ಗ್ರೂಪ್, ಈ ಹಣ ಮರಳಿ ಪಡೆಯಲು ಸಿಟಿಬ್ಯಾಂಕ್ ಮತ್ತಿತರ ಸಂಸ್ಥೆಗಳ ಜತೆ ಮಾತುಕತೆ ನಡೆಸುತ್ತಿರುವುದಾಗಿ ಸ್ಪಷ್ಟಪಡಿಸಿದೆ.

ಗುಡಗಾಂವ್ ಶಾಖೆಯಲ್ಲಿ ನಡೆದ ಈ ಹಗರಣದ ಫಲವಾಗಿ ಸಿಟಿಬ್ಯಾಂಕ್ ವಂಚನೆಗೆ ಒಳಗಾದ ಮೊತ್ತವನ್ನು ಕಾರ್ಪೊರೇಟ್ ಮತ್ತು ಕೆಲವೇ ಕೆಲ ಶ್ರೀಮಂತ ಗ್ರಾಹಕರಿಗೆ ಮರಳಿ ಕೊಡುವುದು ಅನಿವಾರ್ಯವಾಗಲಿದೆ. ಬ್ಯಾಂಕ್‌ನ ಅನಧಿಕೃತ ನಡವಳಿಕೆ ಫಲವಾಗಿ ಗ್ರಾಹಕರಿಗೆ ಆಗುವ ಯಾವುದೇ ಬಗೆಯ ನಷ್ಟ ಭರ್ತಿ ಮಾಡಿಕೊಡುವುದು ಸಂಬಂಧಿತ ಬ್ಯಾಂಕ್‌ನ ಕರ್ತವ್ಯವಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಬ್ಯಾಂಕ್‌ನ ಸಂಪರ್ಕಾಧಿಕಾರಿ ನಡೆಸಿದ ಹಣದ ಅವ್ಯವಹಾರ ಕಾರಣಕ್ಕೆ ಹಣ ಕಳೆದುಕೊಂಡ ಗ್ರಾಹಕರಿಗೆ ಸಿಟಿಬ್ಯಾಂಕ್ ನಷ್ಟ ಭರ್ತಿ ಮಾಡಿಕೊಡಬೇಕಾಗುತ್ತದೆ.

ಹೀಗಾಗಿ ಇಲ್ಲಿ ಕಾರ್ಪೊರೇಟ್ ಸಂಸ್ಥೆಗಳು ಮತ್ತು ಶ್ರೀಮಂತ ಗ್ರಾಹಕರು ಕಳೆದುಕೊಂಡಿರುವ ಮೊತ್ತ ಮರಳಿ ಅವರ ಕೈಸೇರುವ ಸಾಧ್ಯತೆ ಹೆಚ್ಚಿಗೆ ಇದೆ. ವಂಚಕರು ಸಿಟಿಬ್ಯಾಂಕ್‌ನ ಯೋಜನೆಗಳಲ್ಲಿ ಈ ಹಣ ತೊಡಗಿಸಿಲ್ಲ. ಅಂತರ್‌ರಾಷ್ಟ್ರೀಯ ಮಟ್ಟದ ಪ್ರಮುಖ ಬ್ಯಾಂಕ್ ಆಗಿರುವ ಸಿಟಿಬ್ಯಾಂಕ್‌ನ ಭಾರತದ ವಹಿವಾಟು ಕಳೆದ ವರ್ಷ ್ಙ 860 ಕೋಟಿಗಳಷ್ಟು ನಿವ್ವಳ ಲಾಭ ತಂದಿದೆ. ಹಣಕಾಸು ಸೇವೆಗಳ ದೈತ್ಯ ಸಂಸ್ಥೆ ಸಿಟಿಗ್ರೂಪ್‌ನ ಬ್ಯಾಂಕಿಂಗ್ ಅಂಗವಾಗಿರುವ ಸಿಟಿಬ್ಯಾಂಕ್ 1812ರಲ್ಲಿ ನ್ಯೂಯಾರ್ಕ್‌ನಲ್ಲಿ ಮೊದಲ ಬಾರಿಗೆ ಅಸ್ತಿತ್ವಕ್ಕೆ ಬಂದಿತು. ಸದ್ಯಕ್ಕೆ ಅಮೆರಿಕದ ಮೂರನೇ ಅತಿದೊಡ್ಡ ಬ್ಯಾಂಕ್ ಆಗಿದೆ.

ಹಗರಣದಲ್ಲಿ ಬ್ಯಾಂಕ್ ಸಂಪರ್ಕಾಧಿಕಾರಿ ಪುರಿ ಒಬ್ಬನೇ ಭಾಗಿಯಾಗಿರುವ ಸಾಧ್ಯತೆಗಳುಕಡಿಮೆ. ಇನ್ನೂ ಕೆಲ ತಲೆಗಳು ಉರುಳಬಹುದಾಗಿದೆ. ಗ್ರಾಹಕರು ಮತ್ತು ಹೂಡಿಕೆದಾರರು ತಮ್ಮ ಬ್ಯಾಂಕ್ ಖಾತೆಗಳ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸದಿದ್ದರೆ ಇಂತಹ ಹಗರಣಗಳು ನಡೆಯುತ್ತಲೇ ಇರುತ್ತವೆ. ಗ್ರಾಹಕರು ತಮ್ಮೆಲ್ಲ ಬ್ಯಾಂಕ್ ವಹಿವಾಟಿನ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಬೇಕು ಎನ್ನುವುದನ್ನು ಈ ಹಗರಣ ಪಾಠ ಕಲಿಸಿದೆ ಎನ್ನಬಹುದು.

ದೇಶದಲ್ಲಿ ನಡೆದ ಬ್ಯಾಂಕ್ ಹಗರಣಗಳು...
-ಟಿಬ್ಯಾಂಕ್ ಸಂಪರ್ಕಾಧಿಕಾರಿಯು ಗ್ರಾಹಕರಿಗೆ ್ಙ 400 ಕೋಟಿಗಳವರೆಗೆ ವಂಚನೆ ಎಸಗಿರುವುದು.
-2010ರ ಸೆಪ್ಟೆಂಬದೇಶದಲ್ಲಿ ಇದುವರೆಗೆ ನಡೆದ ಬ್ಯಾಂಕ್ ಹಗರಣಗಳು...
-ಸಿಟಿಬ್ಯಾಂಕ್ ಸಂಪರ್ಕಾಧಿಕಾರಿಯು ಗ್ರಾಹಕರಿಗೆ ್ಙ 400 ಕೋಟಿಗಳವರೆಗೆ ವಂಚನೆ ಎಸಗಿರುವುದು.
-2010ರ ಸೆಪ್ಟೆಂಬರ್‌ನಲ್ಲಿ ನಡೆದ ಗೃಹ ಸಾಲ ಹಗರಣದಲ್ಲಿ ್ಙ 1000 ಕೋಟಿಗಳ ಅವ್ಯವಹಾರ ನಡೆದಿರುವುದನ್ನು ಸಿಬಿಐ ಪತ್ತೆ ಹಚ್ಚಿದೆ. ಈ ಹಗರಣದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಅಧಿಕಾರಿಗಳು ಭಾಗಿಯಾಗಿದ್ದಾರೆ.
-2008ರಲ್ಲಿ ಗ್ಲೋಬಲ್ ಟ್ರಸ್ಟ್ ಬ್ಯಾಂಕ್‌ನ ಉನ್ನತ ಅಧಿಕಾರಿಯೊಬ್ಬರು ್ಙ 47 ಕೋಟಿಗಳ ವಂಚನೆ ಎಸಗಿದ್ದರು.
-1992ರಲ್ಲಿ  ಯೂಕೊ ಬ್ಯಾಂಕ್‌ನ ಉನ್ನತ ಅಧಿಕಾರಿಯೊಬ್ಬರು ಹರ್ಷದ ಮೆಹ್ತಾನ ಷೇರು ಹಗರಣದಲ್ಲಿ  ್ಙ 50 ಕೋಟಿ ವಂಚನೆ ಎಸಗಿದ್ದರು.ಈ ಷೇರು ಹಗರಣದಲ್ಲಿ ಬ್ಯಾಂಕಿಂಗ್ ರಂಗದ್ಙ3542 ಕೋಟಿ ಹಣದ ಅವ್ಯವಹಾರ ನಡೆದಿತ್ತು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT