ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದಲಿಂಗಪುರದಲ್ಲಿ ಷಷ್ಠಿ ಪೂಜೆ

Last Updated 19 ಡಿಸೆಂಬರ್ 2012, 8:44 IST
ಅಕ್ಷರ ಗಾತ್ರ

ಮೈಸೂರು: ನಗರದಲ್ಲಿ ಮಂಗಳವಾರ ಸುಬ್ರಹ್ಮಣ್ಯ ಷಷ್ಠಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ನಗರದ ಹೊರವಲ ಯದ ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ಸಹಸ್ರಾರು ಜನರು ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದರು.

ಮುಂಜಾನೆ 3 ಗಂಟೆಗೆ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನವನ್ನು ಭಕ್ತರ ದರ್ಶನಕ್ಕಾಗಿ ತೆರೆಯಲಾಗಿತ್ತು. ಬೆಳಿಗ್ಗೆ 5 ಗಂಟೆ ವೇಳೆಗೆ ಭಕ್ತರು ನೂರಾರು ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಬರತೊಡಗಿ ದರು. ದೇವಸ್ಥಾನದ ಸುತ್ತಮುತ್ತ ಇರುವ ಹುತ್ತಕ್ಕೆ ಹಾಲನ್ನು ತನಿ ಎರೆದು, ಹುತ್ತಕ್ಕೆ ಬೆಳ್ಳಿ ನಾಗರವನ್ನು ಹಾಕಿ ಭಕ್ತಿ ಮೆರೆ ದರು. ದೇವಸ್ಥಾನದ ಮುಂದೆ ತೇರನ್ನು ಎಳೆಯಲಾಯಿತು.

ದೇವಸ್ಥಾನದ ಸುತ್ತಮುತ್ತ ಬೆಳ್ಳಿ ನಾಗರ ಮತ್ತು ಪ್ಯಾಕೆಟ್ ಹಾಲನ್ನು ಮಾರಾಟ ಮಾಡುತ್ತಿದ್ದ ದೃಶ್ಯ ಕಂಡುಬಂತು. ಷಷ್ಠಿ ಹಿನ್ನೆಲೆಯಲ್ಲಿ ದೇವಸ್ಥಾನದ ಮುಂದೆ ಜಾತ್ರೆ ಜೋರಾಗಿ ನಡೆಯಿತು. ಬೆಂಗಳೂರು-ಮೈಸೂರು ರಸ್ತೆಯ ದೇವಸ್ಥಾನದ ಮುಂಭಾಗದ ಒಂದು ಬದಿಯಲ್ಲಿ ಭಕ್ತರು ಓಡಾಡಲು ಅವಕಾಶ ಮಾಡಿಕೊಟ್ಟರೆ, ಮತ್ತೊಂದು ಬದಿಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಬೆಂಗಳೂರು-ಮೈಸೂರು ಮಾರ್ಗವಾಗಿ ತೆರಳುವ ವಾಹನಗಳಿಗೆ ಬದಲಿ ಮಾರ್ಗ ವ್ಯವಸ್ಥೆ ಮಾಡಲಾಗಿತ್ತು.

ಸಂಚಾರಕ್ಕೆ ಅಡಚಣೆ: ಬೆಂಗಳೂರು-ಮೈಸೂರು ರಸ್ತೆಯಲ್ಲಿ ಷಷ್ಠಿ ಪ್ರಯುಕ್ತ ಸಹಸ್ರಾರು ಭಕ್ತರು ನೆರೆದಿದ್ದ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆಯಾಯಿತು.

ವ್ಯಾಪಾರ ಜೋರು: ಜಾತ್ರೆಯಲ್ಲಿ ವ್ಯಾಪಾರ ಜೋರಾಗಿ ನಡೆಯಿತು. ಪೂಜಾ ಸಾಮಗ್ರಿಗಳು, ಮಕ್ಕಳ ಆಟಿಕೆಗಳು, ತಂಪು ಪಾನೀಯ, ತಿಂಡಿ-ತಿನಿಸುಗಳ ವ್ಯಾಪಾರ ಜೋರಾಗಿ ನಡೆ ಯಿತು. ಅಲ್ಲಲ್ಲಿ ತಾತ್ಕಾಲಿಕ ಹೋಟೆಲ್ ತಲೆ ಎತ್ತಿದ್ದವು.

ಬನ್ನೂರು ರಸ್ತೆಯ ಗಿರಿಯಾಬೋವಿಪಾಳ್ಯದ ಖಾಲಿ ಜಾಗದಲ್ಲಿ ನಾಗರಹಾವು ಕಾಣಿಸಿಕೊಂಡು ಅಚ್ಚರಿ ಮೂಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT