ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧಪ್ಪ, ಸ್ಮಿತಾ ಪ್ರಥಮ

Last Updated 23 ಜನವರಿ 2011, 19:30 IST
ಅಕ್ಷರ ಗಾತ್ರ

ಧಾರವಾಡ: ಬದಾಮಿಯ ಚಾಲುಕ್ಯ ಸ್ಪೋರ್ಟ್ಸ್ ಅಕಾಡೆಮಿಯ ಸಿದ್ಧಪ್ಪ ಶಿವನೂರ ಮತ್ತು ಮೈಸೂರಿನ ಎಸ್. ಸ್ಮಿತಾ ಭಾನುವಾರ ಬೆಳಿಗ್ಗೆ ಧಾರವಾಡ ಜಿಲ್ಲಾ ಉತ್ಸವದ ಅಂಗವಾಗಿ ನಡೆದ  ರಸ್ತೆ ಓಟದ ಮುಕ್ತ ಸ್ಪರ್ಧೆಯಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಪ್ರಥಮರಾದರು.

ಬೆಳಿಗ್ಗೆ ಕಲಾಭವನದಿಂದ ರಾಯಾಪುರದ ಇಸ್ಕಾನ್‌ವರೆಗೆ ನಡೆದ ಹತ್ತು ಕಿಲೋಮೀಟರ್ ಸ್ಪರ್ಧೆಯಲ್ಲಿ ಅನುಭವಿ ಓಟಗಾರ ಸಿದ್ಧಪ್ಪ ಶಿವನೂರ ಉಳಿದ ಅಥ್ಲೀಟ್‌ಗಳಿಗಿಂತ ಸಾಕಷ್ಟು ಅಂತರ ಕಾಯ್ದುಕೊಂಡು ಮೊದಲಿಗರಾದರು.

ಮಹಿಳೆಯರ ವಿಭಾಗದಲ್ಲಿ ಸ್ಮಿತಾ ತಮ್ಮ ಪ್ರತಿಸ್ಪರ್ಧಿಗಳಿಂದ ಸುಮಾರು ಒಂದೂವರೆ ಕಿಲೋಮೀಟರ್ ಅಂತರ ಕಾಯ್ದುಕೊಂಡು ಗುರಿ ಮುಟ್ಟಿದರು. ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆಯ ಸಹಯೋಗದಲ್ಲಿ ಈ ಸ್ಪರ್ಧೆ ನಡೆಯಿತು.

ಹಿರಿಯ ಅಥ್ಲೀಟ್ ಚಂದ್ರಶೇಖರ ಬಂಡಿ ಓಟಕ್ಕೆ ಚಾಲನೆ ನೀಡಿದರು. ಜಿಲ್ಲಾಧಿಕಾರಿ ದರ್ಪಣ್ ಜೈನ್, ಕ್ರೀಡಾಧಿಕಾರಿ ಬಸವರಾಜ ಹಡಪದ, ಅಥ್ಲೆಟಿಕ್ಸ್ ಸಂಸ್ಥೆಯ ಕೆ.ಎಸ್. ಭೀಮಣ್ಣವರ ಮತ್ತಿತರರು ಹಾಜರಿದ್ದರು.

ಫಲಿತಾಂಶಗಳು: ಪುರುಷರು: ಸಿದ್ಧಪ್ಪ ಶಿವನೂರು (ಚಾಲುಕ್ಯ ಅಕಾಡೆಮಿ ಬದಾಮಿ)-1, ಚನ್ನಪ್ಪಗೌಡ ಪಾಟೀಲ (ಚಾಲುಕ್ಯ ಅಕಾಡೆಮಿ ಬದಾಮಿ)-2, ಕೃಷ್ಣ ಸಂತಿ (ಭಾರತೀಯ ಕ್ರೀಡಾ ಪ್ರಾಧಿಕಾರ ಧಾರವಾಡ)-3, ಸಮೀರ್ ಕೇಜನೂರು (ಧಾರವಾಡ)-4, ಮಂಜುನಾಥ ಸುಳ್ಳದ (ಜೆಎಸ್‌ಎಸ್ ಕಾಲೇಜು ಧಾರವಾಡ)-5, ಅಪ್ಪಾಸಾಹೇಬ ಕಡಪಟ್ಟಿ (ಚಾಲುಕ್ಯ ಅಕಾಡೆಮಿ ಬದಾಮಿ)-6

ಮಹಿಳೆಯರು: ಸಿ. ಸ್ಮಿತಾ (ಮೈಸೂರು)- 1, ನಿಂಗಮ್ಮ ಎಚ್. ಪಾಟೀಲ (ಜೆಎಸ್‌ಎಸ್‌ಸಿ ಧಾರವಾಡ)-2, ಕಲ್ಲವ್ವ ಸಿಂಧೋಗಿ (ಜೆಎಸ್‌ಎಸ್ ಧಾರವಾಡ)-3, ನಿರ್ಮಲಾ ಬೇವಿನಮರದ (ಧಾರವಾಡ)-4, ಪ್ರೀತಿ ಮುನವಳ್ಳಿ (ಜೆಎಸ್‌ಎಸ್‌ಸಿ ಧಾರವಾಡ)-5, ರುಕ್ಮೀಣಿ ಕುರಾಡೆ (ಡಿವೈಎಸ್‌ಎಸ್ ಧಾರವಾಡ)-6.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT