ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮೋತ್ಸವ ಲಾಂಛನ ಬಿಡುಗಡೆ

Last Updated 18 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಚಲನಚಿತ್ರ ಅಕಾಡೆಮಿ ಮತ್ತು ರಾಜ್ಯ ವಾರ್ತಾ ಇಲಾಖೆ ಆಶ್ರಯದಲ್ಲಿ ಡಿಸೆಂಬರ್ 15ರಿಂದ 22ರ ವರೆಗೆ ನಡೆಯಲಿರುವ ನಾಲ್ಕನೆಯ `ಬೆಂಗಳೂರು ಅಂತರ ರಾಷ್ಟ್ರೀಯ ಸಿನಿಮೋತ್ಸವ~ದ ಲಾಂಛನ ವನ್ನು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಮಂಗಳವಾರ ಅನಾವ ರಣಗೊಳಿಸಿದರು.

ನಂತರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, `ಬಹುಸಂಸ್ಕೃತಿಯ ನಗರಿ ಬೆಂಗಳೂರಿನ ನಾಗರಿಕರಿಗೆ ಜಗ ತ್ತಿನ ಶ್ರೇಷ್ಠ ಚಲನಚಿತ್ರಗಳನ್ನು ವೀಕ್ಷಿ ಸುವ ಅವಕಾಶ ಕಲ್ಪಿಸುವುದು ಈ ಸಿನಿಮೋತ್ಸವದ ಆಶಯ~ ಎಂದು ತಿಳಿಸಿದರು.

ಸಿನಿಮೋತ್ಸವದ ಆಯೋಜನೆಗಾಗಿ ಸರ್ಕಾರ 2.5 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಅಂತರ ರಾಷ್ಟ್ರೀಯ, ಏಷ್ಯಾ, ಭಾರತೀಯ ಮತ್ತು ಕನ್ನಡ ಸಿನಿಮಾಗಳಿಗೆ ಪ್ರತ್ಯೇಕ ವಾಗಿ ಸ್ಪರ್ಧೆ ನಡೆಸಲಾಗುವುದು.

ಇದರಲ್ಲಿ ಪ್ರಥಮ ಬಹುಮಾನ ಪಡೆದ ಚಿತ್ರಕ್ಕೆ ಚಿನ್ನದ ಗಂಡಭೇರುಂಡ ಮತ್ತು ದ್ವಿತೀಯ ಬಹುಮಾನ ಪಡೆದ ಚಿತ್ರಕ್ಕೆ ಬೆಳ್ಳಿಯ ಗಂಡಭೇರುಂಡ ಪಾರಿ ತೋಷಕ ನೀಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT