ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಪಿಎಂ ಕಾರ್ಯದರ್ಶಿಯಾಗಿ ಶ್ರೀರಾಮರೆಡ್ಡಿ

Last Updated 11 ಜನವರಿ 2012, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಸಿಪಿಎಂ ರಾಜ್ಯ ಘಟಕದ ನೂತನ ಕಾರ್ಯದರ್ಶಿಯಾಗಿ ಜಿ.ವಿ.ಶ್ರೀರಾಮರೆಡ್ಡಿ ಆಯ್ಕೆ ಯಾಗಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಬುಧವಾರ ಕೊನೆಗೊಂಡ ಸಿಪಿಎಂ 20ನೇ ರಾಜ್ಯ ಸಮ್ಮೇಳನದಲ್ಲಿ ನೂತನ ಕಾರ್ಯದರ್ಶಿಯನ್ನಾಗಿ ಜಿ.ವಿ.ಶ್ರೀರಾಮರೆಡ್ಡಿ ಅವರನ್ನು ಆಯ್ಕೆ ಮಾಡಲಾಯಿತು. ಸಿಪಿಎಂ ಪಾಲಿಟ್‌ಬ್ಯೂರೊ ಸದಸ್ಯರಾದ ಕೆ.ವರದರಾಜನ್, ಎಸ್.ರಾಮಚಂದ್ರನ್ ಪಿಳ್ಳೆ    ಉಪಸ್ಥಿತಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.

ಬಾಗೇಪಲ್ಲಿಯಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿರುವ ಶ್ರೀರಾಮರೆಡ್ಡಿ ಈಗ ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿಯಾಗಿದ್ದರು. ಭಾರತ ವಿದ್ಯಾರ್ಥಿ ಒಕ್ಕೂಟ (ಎಸ್‌ಎಫ್‌ಐ) ಸಂಸ್ಥಾಪಕರಲ್ಲಿ ಒಬ್ಬರಾಗಿರುವ ಅವರು ಭ್ರಷ್ಟ್ರಾಚಾರ ವಿರೋಧಿ ಹೋರಾಟ ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿ ದ್ದಾರೆ. ಪಕ್ಷದ ನೂತನ ರಾಜ್ಯ ಸಮಿತಿ ಸದಸ್ಯರಾಗಿ 33 ಮಂದಿ ಆಯ್ಕೆಯಾಗಿದ್ದಾರೆ.

ವಿ.ಜೆ.ಕೆ.ನಾಯರ್, ಜಿ.ಎನ್.ನಾಗರಾಜ್, ಕೆ.ಆರ್.ಶ್ರೀಯಾನ್, ನಿತ್ಯಾನಂದಸ್ವಾಮಿ, ಮಾರುತಿ ಮಾನ್ಪಡೆ, ಜಿ.ಸಿ.ಬಯ್ಯಾರೆಡ್ಡಿ, ಎಸ್.ವೈ.ಗುರುಶಾಂತ, ಬಿ.ಮಾಧವ, ಎಸ್.ಪ್ರಸನ್ನಕುಮಾರ್, ಕೆ.ನೀಲಾ, ಜಿ.ವಿ.ಶ್ರೀರಾಮರೆಡ್ಡಿ, ಕೆ.ಶಂಕರ್, ಕೆ.ಪ್ರಕಾಶ್, ಯು.ಬಸವರಾಜ್, ಭೀಮಸಿ ಕಲಾದಗಿ, ಕೆ.ಎಸ್.ವಿಮಲಾ, ಎಸ್.ವರಲಕ್ಷ್ಮಿ, ಶಾಂತರಾಮನಾಯಕ, ಬಾಲಕೃಷ್ಣಶೆಟ್ಟಿ, ಮೀನಾಕ್ಷಿ ಸುಂದರಂ, ಜೆ.ಬಾಲಕೃಷ್ಣಶೆಟ್ಟಿ, ಸಯ್ಯದ್ ಮುಜೀಬ್, ಕೆ.ಎನ್. ಉಮೇಶ್, ಅಮಾನುಲ್ಲಾ ಖಾನ್, ಗಾಂಧಿನಗರ ನಾರಾಯಣಸ್ವಾಮಿ, ಪುಟ್ಟಮಾದು, ಜಿ.ಅರ್ಜುನನ್, ಕೆ.ಎಸ್. ಲಕ್ಷ್ಮಿ, ವಸಂತ ಆಚಾರಿ, ಎಂ.ಪಿ.ಮುನಿವೆಂಕಟಪ್ಪ, ಸಿದ್ದಗಂಗಪ್ಪ, ಮಹಾಬಲ ವಡೇರಹೋಬಳಿ ಮತ್ತು ಆರ್.ಎಸ್. ಬಸವರಾಜು ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT