ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಪಿಎಲ್ ಕ್ರಿಕೆಟ್: ಜೈನ್ ಕಾಲೇಜ್‌ಗೆ ಗೆಲುವು

Last Updated 20 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಾನೈನ್ ಅಬ್ಬಾಸ್ (51) ಹಾಗೂ ಕರುಣ್ ನಾಯರ್ (48) ಅವರ ಬ್ಯಾಟಿಂಗ್ ನೆರವಿನಿಂದ ಶ್ರೀ ಭಗವಾನ್ ಮಹಾವೀರ ಜೈನ್ ಕಾಲೇಜ್ (ಎಸ್‌ಬಿಎಂಜೆಸಿ) ತಂಡದವರು ಜೈನ್ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಇಲ್ಲಿ ನಡೆಯುತ್ತಿರುವ ಚೊಚ್ಚಲ ಕಾಲೇಜ್ ಪ್ರೀಮಿಯರ್ ಲೀಗ್ (ಸಿಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಬಾಲ್ಡ್‌ವಿನ್ ಮೆಥೊಡಿಸ್ಟ್ ಕಾಲೇಜ್ ಎದುರು ಜಯ ಸಾಧಿಸಿದರು. 

ಇಲ್ಲಿನ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜಿನ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಎಸ್‌ಬಿಎಂಜೆಸಿ ನೀಡಿದ 180 ರನ್‌ಗಳ ಗುರಿಗೆ ಉತ್ತರವಾಗಿ ಬಾಲ್ಡ್‌ವಿನ್ ತಂಡ 12 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 97 ರನ್ ಮಾತ್ರ ಗಳಿಸಿತು. ಮಳೆಯ ಕಾರಣ ಪಂದ್ಯವನ್ನು 12 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು.

ಸಂಕ್ಷಿಪ್ತ ಸ್ಕೋರ್: ಎಸ್‌ಬಿಎಂಜೆಸಿ: 12 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 179 (ಕಾನೈನ್ ಅಬ್ಬಾಸ್ 51, ಕರುಣ್ ನಾಯರ್ 48; ಶೆರ್ವಿನ್ 41ಕ್ಕೆ2); ಬಾಲ್ಡ್‌ವಿನ್: 12 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 97 (ಕ್ಲಿಂಟ್ ಕಾರ್ಲಟನ್ 36; ಶಶಿಧರ್ 3ಕ್ಕೆ2,  ಭಾವೇಶ್ 6ಕ್ಕೆ2, ಕರುಣ್ 14ಕ್ಕೆ2). ಫಲಿತಾಂಶ: ಎಸ್‌ಬಿಎಂಜೆಸಿ ತಂಡಕ್ಕೆ 82 ರನ್ ಗೆಲುವು.

ಅಲ್ ಅಮೀನ್: 8 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 79 (ಯಾಸೀನ್ 34ಕ್ಕೆ1); ಎಸ್‌ಜೆಸಿಸಿ: 8 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 80 (ಆಶೀಶ್ ಔಟಾಗದೆ 59, ಅಭಿಜಿತ್ 11ಕ್ಕೆ3, ಪ್ರಗತ್ 21ಕ್ಕೆ2). ಫಲಿತಾಂಶ: ಎಸ್‌ಜೆಸಿಸಿ ತಂಡಕ್ಕೆ 9 ವಿಕೆಟ್ ಗೆಲುವು.

ಸುರಾನಾ ಕಾಲೇಜ್: 8 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 97 (ಹೇಮಂತ್ ಔಟಾಗದೆ ಔಟಾಗದೆ 42, ಆಕಾಶ್ 25; ರಘು 8ಕ್ಕೆ2, ಸುಜಯ್ 22ಕ್ಕೆ1); ಜೆಎಸ್‌ಎಸ್: 8 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 96. ಫಲಿತಾಂಶ: ಸುರಾನಾ ಕಾಲೇಜ್‌ಗೆ ಒಂದು ರನ್ ಜಯ.

ಟಿಟಿಎಲ್ ಕಾಲೇಜ್ (ಮೈಸೂರು): 12 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 114 (ಸೋಮಶೇಖರ್ 53; ಚೇತನ್ 20ಕ್ಕೆ4); ಆರ್.ವಿ.ಕಾಲೇಜ್: 12 ಓವರ್‌ಗಳಲ್ಲಿ 60 (ಸಲಾಲುದ್ದೀನ್ 12ಕ್ಕೆ4, ಉತ್ತಮರಾಜ್ 10ಕ್ಕೆ4):

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT