ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಐ ಕೋರ್ಟ್‌ ಆರಂಭಕ್ಕೆ ಸುಪ್ರೀಂ ಗಡುವು

Last Updated 10 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರಾಜಕಾರಣಿಗಳು ಮತ್ತು ಅಧಿಕಾರಿ­ಗಳ ವಿರುದ್ಧದ ಭ್ರಷ್ಟಾ­ಚಾರ ಪ್ರಕರಣಗಳ ತ್ವರಿತ ವಿಚಾರಣೆ­­ಗಾಗಿ   ನಾಲ್ಕು ತಿಂಗಳ ಗಡುವಿನೊಳಗೆ ದೇಶದಾ­ದ್ಯಂತ 22 ಸಿಬಿಐ ನ್ಯಾಯಾಲಯ ಸ್ಥಾಪಿಸಿ ಕಾರ್ಯಾರಂಭ ­ಮಾಡಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್‌ ಹೇಳಿದೆ.

ಈ ಗಡುವಿನೊಳಗೆ ಸಿಬಿಐ ನ್ಯಾಯಾಲಯಗಳು ಕಾರ್ಯಾರಂಭ­ವಾಗದಿದ್ದರೆ ಮುಖ್ಯ ಕಾರ್ಯದರ್ಶಿಗಳ ವಿರುದ್ಧ ನ್ಯಾಯಾಲಯ ನಿಂದನೆ ಪ್ರಕರಣ ದಾಖಲಿಸ­ಲಾಗುವುದು ಎಂಬ ಎಚ್ಚರಿಕೆ­ಯನ್ನೂ ಸುಪ್ರೀಂಕೋರ್ಟ್‌ ನೀಡಿದೆ. ಭ್ರಷ್ಟಾಚಾರ ಪ್ರಕರಣಗಳನ್ನು ವೇಗವಾಗಿ ಮತ್ತು ತ್ವರಿತ­ವಾಗಿ ವಿಲೇ­ವಾರಿ ಮಾಡಲು ಈ ಸಿಬಿಐ ನ್ಯಾಯಾಲ­ಯಗಳು ಅಗತ್ಯ ಎಂದು ನ್ಯಾಯಮೂರ್ತಿ­ಗಳಾದ ಜಿ.ಎಸ್‌.ಸಿಂಘ್ವಿ ಮತ್ತು ಸಿ. ನಾಗಪ್ಪನ್‌ ಅವರನ್ನೊಳಗೊಂಡ ಪೀಠ ಹೇಳಿದೆ.

‘ಎಲ್ಲಾ ಸಿಬಿಐ ನ್ಯಾಯಾಲಯಗಳು ಕಾರ್ಯನಿರ್ವಹಿಸುಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳು­ತ್ತವೆ ಎಂಬ ನಿರೀಕ್ಷೆ ನಮ್ಮದು’ ಎಂದು ಪೀಠ ಹೇಳಿದೆ. ಮತ್ತೆ ಮತ್ತೆ ಆದೇಶ ನೀಡಿದರೂ ಸಾಕಷ್ಟು ಸಂಖ್ಯೆಯಲ್ಲಿ ವಿಶೇಷ ಸಿಬಿಐ ನ್ಯಾಯಾಲಯಗಳನ್ನು  ಸ್ಥಾಪಿಸುವಲ್ಲಿ ವಿಫಲವಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಕೋರ್ಟ್‌ ಹಿಂದೆಯೂ ಅತೃಪ್ತಿ ವ್ಯಕ್ತಪಡಿಸಿತ್ತು.

ಎರಡು ತಿಂಗಳೊಳಗೆ ದೇಶದಾದ್ಯಂತ 22 ವಿಶೇಷ ಸಿಬಿಐ ನ್ಯಾಯಾಲಯ­ಗಳನ್ನು ಸ್ಥಾಪಿಸುವಂತೆ ಜನವರಿ 30ರಂದು ಸುಪ್ರೀಂಕೋರ್ಟ್‌ ನಿರ್ದೇಶನ  ನೀಡಿತ್ತು. ಸಂಬಂಧಪಟ್ಟ ಪ್ರಾಧಿಕಾರಗಳು ಈ ಬಗ್ಗೆ ನೀಡಿದ್ದ ಕಾರಣಗಳು ಮತ್ತು ವಿವರಣೆಗಳು ತೃಪ್ತಿಕರವಲ್ಲ ಎಂದೂ ಕೋರ್ಟ್‌ ಆ ಸಂದರ್ಭದಲ್ಲಿ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT