ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬ್ಬಂದಿ ಅತಂತ್ರ; ತಪ್ಪದ ಗ್ರಾಹಕರ ಪರದಾಟ

Last Updated 23 ಮೇ 2012, 7:50 IST
ಅಕ್ಷರ ಗಾತ್ರ

ಮೂಡಿಗೆರೆ: ಪಟ್ಟಣದ ಹೃದಯ ಭಾಗದಲ್ಲಿರುವ ಮೆಸ್ಕಾಂ ಕಚೇರಿ  ಕುಸಿಯುವ ಹಂತದಲ್ಲಿದ್ದು, ಸಿಬ್ಬಂದಿ ಜೀವ ಬಿಗಿಯಾಗಿ ಹಿಡಿದು ಕಾರ್ಯ ನಿರ್ವಹಿಸಬೇಕಾದ ಪರಿಸ್ಥಿತಿ ತಲೆದೋರಿದೆ.

ಸುಮಾರು 1963- 64 ನೇ ಸಾಲಿನಲ್ಲಿ ನಿರ್ಮಾಣವಾಗಿರುವ ಮೆಸ್ಕಾಂ ಕಚೇರಿಯ ಮೇಲ್ಛಾವಣಿ ಕಳಚಿ ಬಿದ್ದಿದ್ದು, ಕಬ್ಬಿಣದ ಸಲಾಕೆ ಗಳು ಕಾಣಿಸುತ್ತಿವೆ. ಮಳೆಗಾಲ ಪ್ರಾರಂಭವಾದರೆ ಎಲ್ಲಾ ಕೊಠಡಿಗಳು ಸೋರಲು ಪ್ರಾರಂಭಿಸುತ್ತವೆ. ಕಾರ್ಯನಿರ್ವಹಿಸುತ್ತಿರುವ ಗಣಕಯಂತ್ರಗಳು ಹಾಗು ದಾಖಲೆಗಳನ್ನು ಮಳೆ ನೀರಿನಿಂದ ಕಾಪಾಡಿಕೊಳ್ಳುವುದೇ ಇಲ್ಲಿನ ಸಿಬ್ಬಂದಿಗೆ ಸವಾಲಾಗಿದೆ.

ಕಚೇರಿಯಲ್ಲಿ ವಿಶ್ರಾಂತಿ ಗೃಹಗಳಾಗಲೀ, ಶೌಚಾಲಯಗಳಿಲ್ಲದಿರುವುದರಿಂದ ಕೆಲಸಗಳಿ ಗಾಗಿ ಆಗಮಿಸುವ ಸಾರ್ವಜನಿಕರಿಗೆ  ಹಾಗು  ಗುತ್ತಿಗೆದಾರರಿಗೆ ಮತ್ತುಮಹಿಳಾ  ಸಿಬ್ಬಂದಿಗೆ ವಿಶ್ರಮಿಸಿಕೊಳ್ಳಲು  ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಲ್‌ಲ್ ಪಾವತಿಗಾಗಿ ಹತ್ತಾರು ಕಿ.ಮೀ ನಿಂದ ಬಂದಿರುವರಿಗೆ  ಕುಳಿತು ಕೊಳ್ಳಲು ಜಾಗವಿಲ್ಲ. ವರ್ಷದಲ್ಲಿ ಹಲವಾರು ಬಾರಿ ದರ ಏರಿಸುವ ಸರ್ಕಾರ ಕನಿಷ್ಠ ಸೌಲಭ್ಯಗಳನ್ನಾರೂ ಮಾಡಬೇಕು ಎಂದು ಬಿಲ್‌ಲ್ ಪಾವತಿಗೆ ಬಂದಿದ್ದ ಮಹಿಳೆಯೊಬ್ಬರು ಪ್ರಶ್ನಿಸಿದರು.

ವಸತಿಗೃಹಗಳು ಖಾಲಿ: ಪಟ್ಟಣದ್ಲ್ಲಲಿ ಇಲಾಖೆಗೆ ಸೇರಿದ, ಮೆಸ್ಕಾಂನ ಹತ್ತು, ಕೆಪಿಟಿಸಿಎಲ್‌ನ ಹತ್ತು ವಸತಿಗೃಹಗಳಿದ್ದು, ಕೇವಲ ಒಂಬತ್ತು ನಿವಾಸಗಳಲ್ಲಿ ಮಾತ್ರ ಸಿಬ್ಬಂದಿ ವಾಸವಾಗಿದ್ದಾರೆ.

ಉಳಿದ ವಸತಿ ಗೃಹಗಳು ಕುಸಿಯುವ ಹಂತದಲ್ಲಿರುವುದರಿಂದ ಇಲಾಖೆ  ವಸತಿ ಗೃಹದ ನೌಕರರನ್ನು ವಸತಿ ಗೃಹಗಳಿಂದ ತೆರವುಗೊಳಿಸಿದೆ. ಸಿಬ್ಬಂದಿ ವಸತಿ ಗೃಹಗಳನ್ನು ತೆರವುಗೊಳಿಸಿ ವರ್ಷಗಳೆ ಕಳೆದರೂ, ದುರಸ್ತಿಗೊಳಿಸದೇ ಇರುವುದರಿಂದ ಸಿಬ್ಬಂದಿ ದುಬಾರಿ ವೆಚ್ಚದ ಬಾಡಿಗೆ ಮನೆಗಳಲ್ಲಿ ವಾಸ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಸಿಬ್ಬಂದಿ ಕೊರತೆ : ಸುಮಾರು 95 ಕಿಲೋ ಮೀಟರ್ ವಿಸ್ತಿರ್ಣ  ಹೊಂದಿರುವ  ಮೆಸ್ಕಾಂನ ಮೂಡಿಗೆರೆ ಘಟಕದಲ್ಲಿ ಶೇಕಡಾ 80 ರಷ್ಟು ಹುದ್ದೆಗಳು ಖಾಲಿಯಿದ್ದು, ಅದರಲ್ಲಿ ಲೈನ್‌ಮನ್‌ಗಳ ಸಂಖ್ಯೆಯೇ ಹೆಚ್ಚು. ಶೇ 20 ರಷ್ಟಿರುವ ಸಿಬ್ಬಂದಿಯೇ ಎಲ್ಲಾ ಕಾರ್ಯಗಳನ್ನು ನಿರ್ವಹಿಸ ಬೇಕಾಗಿರುವುದರಿಂದ ತಾಲ್ಲೂಕಿನ ವಿದ್ಯುತ್ ಸಮಸ್ಯೆ ಬಗೆಹರಿಸಲಾಗದ ಕಗ್ಗಂಟಾಗಿ ಉಳಿದಿವೆ. ಮಲೆನಾಡಿನಲ್ಲಿ ಜಂಗಲ್ ಸಮಸ್ಯೆಯಿದ್ದು, ಬೇಸಿಗೆ ಕಾಲದಲ್ಲಿ ಸರಿಯಾಗಿ ನಿರ್ವಹಿಸದಿದ್ದರೆ ಮಳೆಗಾಲದಲ್ಲಿ ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್ ಮರಿಚೀಕೆಯಾಗುತ್ತದೆ.

`ಮಳೆಗಾಲ ಶುರುವಾದರೆ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವುದೇ ನರಕ ಸದೃಶ್ಯವಾ ಗುತ್ತದೆ. ಮಲೆನಾಡಿನಲ್ಲಿ ಕಾರ್ಯಭಾರ ಜಾಸ್ತಿ ಎಂಬ ಕಾರಣಕ್ಕಾಗಿ ಯಾವ ಸಿಬ್ಬಂದಿ ಇಲ್ಲಿ ಕಾರ್ಯ ನಿರ್ವಹಿಸಲು ಇಷ್ಟ ಪಡುವುದಿಲ್ಲ ವಾದ್ದರಿಂದ ಸಿಬ್ಬಂದಿ ಕೊರತೆ ಎಂಬುದು ಇಲ್ಲಿ ಮಾಮೂಲಾಗಿದೆ. ಸಮರ್ಪಕ ಸಿಬ್ಬಂದಿ ವ್ಯವಸ್ಥೆಯಿಲ್ಲದೇ ತಾಲ್ಲೂಕಿಗೆ ವಿದ್ಯುತ್ ಪೂರೈಕೆ ಮಾಡುವುದು ಕಷ್ಟವಾಗುತ್ತಿದೆ~ ಎಂಬುದು ಹೆಸರನ್ನು ಹೇಳಲು ಇಚ್ಛಿಸದ ನೌಕರರೊಬ್ಬರ ಅಳಲು. 

 ನೌಕರರ ಸಮಸ್ಯೆಯಿಂದಾಗಿ ಕಾಮಗಾರಿಗಳು ನಿಧಾನ ಗತಿಯಲ್ಲಿ ಸಾಗುತ್ತಿವೆ. ಸಿಬ್ಬಂದಿ ನೇಮಕಕ್ಕೆ ಒತ್ತು ನೀಡಬೇಕು ಎಂಬುದು ಗುತ್ತಿಗೆದಾರರ ಆಗ್ರಹ.

 ಪ್ರಸ್ತುತ 40 ರಿಂದ 50 ಲಕ್ಷದಷ್ಟು ಮಾಸಿಕ ವಹಿವಾಟು ನಡೆಸುತ್ತಿರುವ ಮೆಸ್ಕಾಂ ಮೂಡಿಗೆರೆ ಘಟಕವು ಕಚೇರಿ ಹಾಗು ಸಿಬ್ಬಂದಿ ಸೂಕ್ತ ವ್ಯವಸ್ಥೆಯಿಲ್ಲದೇ, ಅಮೂಲ್ಯವಾದ ದುಬಾರಿ ವಿದ್ಯುತ್ತನ್ನು ಸಮರ್ಪಕವಾಗಿ ವಿತರಿಸಲು ಸಾಧ್ಯ ವಾಗದೇ ಜನರ ಆಕ್ರೋಶಕ್ಕೆ ಕಾರಣವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT