ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬ್ಬಂದಿ ನೇಮಕ ಸಮಸ್ಯೆ

Last Updated 19 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಉನ್ನತ ಶೈಕ್ಷಣಿಕ ವಿದ್ಯಾರ್ಹತೆಯ ಮತ್ತು ಹುದ್ದೆಗೆ ಸೂಕ್ತ ಅಭ್ಯರ್ಥಿ ಆಯ್ಕೆ-ನೇಮಕ ಕೆಲಸ ಭಾರತದ ಕಂಪೆನಿಗಳಿಗೆ ಸದದ್ಯ ಬಲು ಕಷ್ಟದ್ದಾಗಿದೆ. ಈ ಸಮಸ್ಯೆ ಮತ್ತೂ 3 ವರ್ಷಗಳವರೆಗೆ ಇರಲಿದೆ ಎಂದಿದೆ ~ರ‌್ಯಾಂಡ್‌ಸ್ಟ್ಯಾಡ್ ಇಂಡಿಯಾ~ ಎಂಬ ಸಮೀಕ್ಷಾ ಸಂಸ್ಥೆ.

ವಿಶ್ವದ 32 ದೇಶಗಳಲ್ಲಿನ ಸಮೀಕ್ಷೆ ವೇಳೆ, ತಮಗೆ ಅಗತ್ಯವಾದಂಥ `ಅರ್ಹ~ ಅಭ್ಯರ್ಥಿ ಆಯ್ಕೆ ಮಾಡಿಕೊಳ್ಳುವಲ್ಲಿ ದೊಡ್ಡ ಸವಾಲು ಎದುರಿಸುವಂತಾಗಿದೆ ಎಂದು ಶೇ 65ರಷ್ಟು ಭಾರತೀಯ ಕಂಪೆನಿಗಳು ಪ್ರತಿಕ್ರಿಯಿಸಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಈ ಸಮಸ್ಯೆ ಶೇ 48ರಷ್ಟಿದೆ. ಇದಕ್ಕೆ ಹೋಲಿಸಿದರೆ ಭಾರತದ ಸ್ಥಿತಿ ಕಳವಳಕಾರಿ ಎಂದು `ರ‌್ಯಾಂಡ್‌ಸ್ಟ್ಯಾಡ್~ ಮುಖ್ಯಸ್ಥ ಇ.ಬಾಲಾಜಿ ಹೇಳಿದ್ದಾರೆ.

ಭಾರತದಲ್ಲಿ ಶೇ 55ಉದ್ಯೋಗಿಗಳು ಹುದ್ದೆಗೆ ಅಗತ್ಯಕ್ಕಿಂತ ಹೆಚ್ಚಿನ ಹಾಗೂ  ಶೇ 33ರಷ್ಟು ನೌಕರರು ಅಗತ್ಯಕ್ಕಿಂತ ಕಡಿಮೆ ಶೈಕ್ಷಣಿಕ ಅರ್ಹತೆ ಹೊಂದಿದ್ದಾರೆ ಎಂದು ಈ ಅಧ್ಯಯನ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT