ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಮೆಂಟ್ ಬೇಡಿಕೆ,ಬೆಲೆ ಅಧಿಕ: ಎಸಿಸಿ

Last Updated 15 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದಲ್ಲಿನ ಸಿಮೆಂಟ್ ಬೇಡಿಕೆ ಆರೋಗ್ಯಕರ ಮಟ್ಟದಲ್ಲಿ, ಅಂದರೆ ಶೇ 10ರಷ್ಟು ಹೆಚ್ಚಲಿದೆ. ಜತೆಗೆ ಸಿಮೆಂಟ್ ಧಾರಣೆಯೂ ಏರಿಕೆ ಕಾಣಲಿದೆ ಎಂದು ಎಸಿಸಿ ಸಿಮೆಂಟ್ ಕಂಪೆನಿ ಭವಿಷ್ಯ ನುಡಿದಿದೆ.

ದೇಶದಲ್ಲಿನ ಸಿಮೆಂಟ್ ಕಂಪೆನಿಗಳು ಉತ್ಪಾದನಾ ಸಾಮರ್ಥ್ಯವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳದೇ ಇರುವುದರಿಂದಲೂ, ಕಚ್ಚಾ ಪದಾರ್ಥಗಳು ದುಬಾರಿಯಾಗಿದ್ದರಿಂದಲೂ ಸಿಮೆಂಟ್ ಬೆಲೆಯಲ್ಲಿ ಗಣನೀಯ ಏರಿಕೆ ಆಗಲಿದೆ ಎಂದು ಎಸಿಸಿ ಹೇಳಿದೆ.

2010ರಲ್ಲಿ ದೇಶದಲ್ಲಿನ ಸಿಮೆಂಟ್ ಬೇಡಿಕೆ ಶೇ 6ರಷ್ಟಿದ್ದಿತು. ನಂತರದ ದಿನಗಳಲ್ಲಿ ನಿರ್ಮಾಣ ಕ್ಷೇತ್ರದಲ್ಲಿನ ಚಟುವಟಿಕೆ ಹೆಚ್ಚಿದ್ದರಿಂದ ಪ್ರಸಕ್ತ ಸಾಲಿನಲ್ಲಿ ಸಿಮೆಂಟ್‌ಗೆ ಬೇಡಿಕೆ ಹೆಚ್ಚುವುದು ನಿಶ್ಚಿತ ಎಂದಿದೆ ಎಸಿಸಿ.
2011ರಲ್ಲಿ 2.37 ಕೋಟಿ ಟನ್ ಸಿಮೆಂಟ್ ಮಾರಾಟ ಮಾಡಿದ್ದ ಎಸಿಸಿ ಕಂಪೆನಿ. ಹಿಂದಿನ ವರ್ಷಕ್ಕಿಂತ ಶೇ 11.5ರಷ್ಟು ಏರಿಕೆ ದಾಖಲಿಸಿದ್ದಿತು.

2011ರಲ್ಲಿ 3 ಕೋಟಿ ಟನ್ ಉತ್ಪಾದನೆ ಸಾಮರ್ಥ್ಯ ಹೆಚ್ಚುವರಿಯಾಗಿ ಸೇರ್ಪಡೆಯಾಗಿದ್ದರಿಂದ ಹಿಂದಿನ ವರ್ಷ ದೇಶದ ಎಲ್ಲಾ ಸಿಮೆಂಟ್ ಕಂಪೆನಿಗಳ ಒಟ್ಟಾರೆ ಉತ್ಪಾದನೆ ಸಾಮರ್ಥ್ಯ ವಾರ್ಷಿಕ 32 ಕೋಟಿ ಟನ್‌ನಷ್ಟಾಗಿದ್ದಿತು. 

 ಈಗ 2012ರಲ್ಲಿ 2.50 ಕೋಟಿ ಟನ್ ಸಿಮೆಂಟ್ ಉತ್ಪಾದನೆ ಸಾಮರ್ಥ್ಯವೂ ಸೇರಿಕೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT