ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿ ಧಾನ್ಯ ಮೇಳ

Last Updated 4 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಆಹಾರ ಹೊಟ್ಟೆ ತುಂಬುವುದಕ್ಕೆ ಮಾತ್ರವಲ್ಲ, ಅದು ಮನಸ್ಸೆಂಬ ‘ನಾಯಕನನ್ನು’ ಸದಾ ಚಟುವಟಿಕೆಯಿಂದ ಇಡುವುದಕ್ಕೂ ಅಗತ್ಯ. ಮನಸ್ಸೊಂದು ಸಮಾಧಾನದಿಂದ ಇದ್ದರೆ ದೇಹದ ಉಳಿದೆಲ್ಲ ಕೆಲಸ ಸುಗಮವಾಗಿ ಸಾಗುತ್ತಿರುತ್ತದೆ. ಹೀಗೆ ಉದರಕ್ಕೂ ಮಧುರವಾಗಿ, ಆರೋಗ್ಯಕ್ಕೂ ಸಿಹಿಯಾಗಬೇಕಾದರೆ ಆರೋಗ್ಯ ಪೂರ್ಣ, ಸತ್ವಯುತ ಆಹಾರ ಸೇವಿಸಬೇಕು.

ನಾವು ಸೇವಿಸುವ ಆಹಾರ ರುಚಿಯಾಗೂ ಇರಬೇಕು. ಹಸಿವನ್ನೂ ನೀಗಿಸಬೇಕು. ಪ್ರೋಟಿನ್, ವಿಟಮಿನ್‌ಗಳಂತಹ ಪೌಷ್ಠಿಕಾಂಶಗಳನ್ನು ದೇಹಕ್ಕೆ ನೀಡಬೇಕು. ಜೊತೆಗೆ ನಮ್ಮ ದೇಹದೊಳಗಿನ ಪಚನ ಕ್ರಿಯೆಗೆ ಸಹಕಾರ ನೀಡಿ, ಆರೋಗ್ಯವರ್ಧಕವಾಗಿ ಕೆಲಸ ಮಾಡಬೇಕು. ಇಷ್ಟೆಲ್ಲ ಪ್ರಕ್ರಿಯೆಗಳು ನಿತ್ಯ ನಿರಂತರವಾಗಿ ನಡೆಯಬೇಕೆಂದರೆ ನಮ್ಮ ಆಹಾರದಲ್ಲಿ ವೈವಿಧ್ಯವಿರಬೇಕು.

ಸಿರಿಧಾನ್ಯ ಮೇಳ: ಇಂಥ ಆಹಾರ ವೈವಿಧ್ಯವನ್ನು ಪರಿಚಯಿಸುವ ‘ಸಿರಿಧಾನ್ಯ ಮೇಳ’ ಎಂಬ ವಿಶಿಷ್ಟ ಕಾರ್ಯಕ್ರಮವೊಂದು ಗಾಂಧಿಭವನದಲ್ಲಿ ಶನಿವಾರ ಮತ್ತು ಭಾನುವಾರ ನಡೆಯಲಿದೆ.

ಸಹಜ ಸಮೃದ್ಧ, ಪ್ರಿಸ್ಟೀನ್ ಆರ್ಗಾನಿಕ್ ಹಾಗೂ ಕೃಷಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪೋಷಕಾಂಶಗಳ ಖಜಾನೆ ಎಂದೇ ಹೆಸರಾದ ರಾಗಿ, ನವಣೆ, ಸಾಮೆ, ಸಜ್ಜೆ, ಆರಕ, ಕೊರಲು, ಬರಗುವಿನಂತಹ ಸಿರಿಧಾನ್ಯ ಪ್ರದರ್ಶಿಸಲಾಗುತ್ತದೆ. ಅವುಗಳ ಔಷಧೀಯ ಗುಣ, ಪೋಷಕಾಂಶ, ರುಚಿ, ಇತ್ಯಾದಿಗಳ ಬಗ್ಗೆ ಮಾಹಿತಿ ವಿನಿಮಯವಾಗುತ್ತದೆ.

ಮಧುಮೇಹಿಗಳು ಸೇವಿಸುವ ರಾಗಿ, ಸಿರಿಧಾನ್ಯ ಮಿಶ್ರಣದ ಬಿಸ್ಕತ್ತು, ಹಸುಗೂಸುಗಳಿಗೆ ಉಣಿಸುವ ಮಿಲೆಟ್ ಬೇಬಿ ಫುಡ್, ರಾಗಿ ಬ್ರೆಕ್‌ಫಾಸ್ಟ್ ಬಿಗಿನಿಂಗ್, ಮಿಲೆಟ್ ಮಿಕ್ಸ್‌ನಂತಹ ನಂತಹ ಸಿದ್ಧ ಆಹಾರ ಮೇಳದಲ್ಲಿ ಇರುತ್ತದೆ. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಸಿರಿಧಾನ್ಯ ರೈತರು ಖಾದ್ಯ ತಯಾರಿಸುತ್ತಾರೆ.

ಗ್ರಾಹಕರಿಗೆ ಅರಿವು
ಕೆಲವು ತಜ್ಞರು ಸಿರಿಧಾನ್ಯಗಳ ಔಷಧೀಯ ಹಾಗೂ ಪೌಷ್ಟಿಕಾಂಶ ‘ಗುಣಗಾನ’ ಮಾಡುತ್ತಾರೆ. ಹೊಸದಾಗಿ ವೃತ್ತಿ ಆರಂಭಿಸಿರುವ ಡಯಟೀಷಿಯನ್, ಆಹಾರ ತಜ್ಞರು, ಪೋಷಕಾಂಶ ತಜ್ಞರಿಗೆ ಈ ಧಾನ್ಯಗಳ ಮಹತ್ವ ತಿಳಿಸುವ ಪ್ರಯತ್ನ ಮೇಳದಲ್ಲಿ ನಡೆಯಲಿದೆ. ಈ ಸಂಬಂಧ ಡಯಟೀಷಿಯನ್ ಅಸೋಷಿಯನ್ ಹಾಗೂ ಇನ್ನಿತರ ಆರೋಗ್ಯ ಸಂಘಟನೆಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇವೆ ಎನ್ನುತ್ತಾರೆ. ಸಿರಿಧಾನ್ಯಗಳ ಆಹಾರ ತಯಾರಕ ಹಾಗೂ ಪೋಷಕಾಂಶ ತಜ್ಞ ಟಿ.ಸಿ.ರಘು.

ಈ ಕಾರ್ಯಕ್ರಮ ಕೇವಲ ಆಹಾರಕ್ಕಷ್ಟೇ ಸಂಬಂಧಿಸಿದ್ದಲ್ಲ. ಬದಲಾಗಿ ಸಿರಿಧಾನ್ಯ ಬಳಸುವ ಮೂಲಕ ಹೇಗೆ ‘ಪರಿಸರ ಸಂರಕ್ಷಿಸಬಹುದು ಎಂದು’ ಮಾಹಿತಿ ನೀಡಲಾಗುತ್ತದೆ. ಮಿಲೆಟ್ ಮೇಳದಲ್ಲಿ ವಯಸ್ಸಿನ ಭೇದವಿಲ್ಲದೆ ಭಾಗವಹಿಸಬಹುದು.ಸ್ಥಳ: ಗಾಂಧಿ ಭವನ, ಶಿವಾನಂದ ವೃತ್ತಸಮಯ: ಬೆಳಿಗ್ಗೆ 10 ರಿಂದ ಸಂಜೆ 6ರವರೆಗೆ  ಮಾಹಿತಿಗೆ: 97312 75656, 99864 53324.                                                             g

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT