ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಧಾನ್ಯ ಮೇಳ

Last Updated 23 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ರಾಗಿ, ನವಣೆ, ಸಾಮೆ, ಸಜ್ಜೆ, ಹಾರಕ, ಕೊರಲು, ಊದಲು, ಜೋಳದಂತಹ ಪೌಷ್ಟಿಕಾಂಶಭರಿತ ಸಿರಿಧಾನ್ಯಗಳಿಗೆ ಇತರ ಯಾವ ಧಾನ್ಯಗಳೂ ಸಾಟಿಯಾಗಲಾರವು. ಆಹಾರ ತಜ್ಞರ ಪ್ರಕಾರ ಸಿರಿಧಾನ್ಯಗಳು, ಅಕ್ಕಿ ಮತ್ತು ಗೋಧಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರೋಟಿನ್, ವಿಟಮಿನ್ ಹಾಗೂ ಖನಿಜಾಂಶ ಹೊಂದಿವೆ. ಹಲವು ರೋಗಗಳಿಗೆ ಈ ಧಾನ್ಯಗಳು ಔಷಧವಾಗುತ್ತವೆ. ಮಧುಮೇಹ ಹಾಗೂ ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸಿರಿಧಾನ್ಯಗಳಂತೂ ಉತ್ತಮ ಆಹಾರ.

ಮರೆಯಾಗುತ್ತಿರುವ ಕಿರುಧಾನ್ಯಗಳನ್ನು ಮರಳಿ ಮಾರುಕಟ್ಟೆಗೆ ತರಲು ಇದೇ ೨೮ರಿಂದ ೩೦ರವರೆಗೆ ದಾವಣಗೆರೆಯ ತೋಗಟವೀರ ಸಮುದಾಯ ಭವನದಲ್ಲಿ ‘ಸಿರಿಧಾನ್ಯ ಮೇಳ’ ಏರ್ಪಡಿಸಲಾಗಿದೆ. ಈ ಮೇಳದಲ್ಲಿ ಕರ್ನಾಟಕದ ವಿವಿಧ ಭಾಗಗಳ ಸಿರಿಧಾನ್ಯ ಸಂರಕ್ಷಕರು, ಸ್ವಸಹಾಯ ಗುಂಪುಗಳ ಸದಸ್ಯರು ಭಾಗವಹಿಸಲಿದ್ದಾರೆ.

ಅಪರೂಪದ ಸಿರಿಧಾನ್ಯ ತಳಿಗಳ ಪ್ರದರ್ಶನ, ಅವುಗಳಿಂದ ತಯಾರಿಸಿದ ಆಹಾರ ಪದಾರ್ಥಗಳ (ರಾಗಿ ಬಿಸ್ಕೆಟ್, ನವಣೆ ಅಪ್ಪಳ, ನವಣೆ ಉಂಡೆ ಮತ್ತು ವಿವಿಧ ತಿನಿಸುಗಳ) ಮಾರಾಟವಿರುತ್ತದೆ. ಆಹಾರ ತಜ್ಞರಿಂದ ವಿಶೇಷ ಉಪನ್ಯಾಸ, ಚರ್ಚೆ ಹಾಗೂ ಸಂವಾದ ಕಾರ್ಯಕ್ರಮಗಳು ನಡೆಯಲಿವೆ. ಮಾಹಿತಿಗೆ: ೯೯೭೨೦೮೮೯೨೯ / ೯೯೪೫೩೮೨೨೦೯.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT