ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಯಾ: ಆತ್ಮಹತ್ಯಾ ಬಾಂಬ್ ದಾಳಿಗೆ 40 ಬಲಿ

Last Updated 10 ಮೇ 2012, 10:50 IST
ಅಕ್ಷರ ಗಾತ್ರ

ಡಮಾಸ್ಕಸ್ (ಪಿಟಿಐ): ಸಿರಿಯಾದ ಮುಖ್ಯಪಟ್ಟಣವಾದ ಡಮಾಸ್ಕಸ್‌ನಲ್ಲಿ ಗುರುವಾರ ಇಬ್ಬರು ಆತ್ಮಹತ್ಯಾ ಬಾಂಬರ್‌ಗಳು ನಡೆಸಿದ ದಾಳಿಯಲ್ಲಿ 40 ಮಂದಿ ಮೃತಪಟ್ಟು, 170ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ ಎಂದು ಸರ್ಕಾರಿ ದೂರದರ್ಶನದಲ್ಲಿ ಅಧಿಕಾರಿಯೊಬ್ಬರು ಹೇಳಿದರು.

ಸೇನಾ ಗುಪ್ತಚರ ದಳದ ಸಿಬ್ಬಂದಿಗಳ ಸಂಕೀರ್ಣವನ್ನೇ ಗುರಿಯಾಗಿರಿಸಿಕೊಂಡು ಬೆಳ್ಳಿಗೆ 7.50ರ ಸುಮಾರಿಗೆ ವಾಹನವೊಂದರಲ್ಲಿ ಬಂದ ಇಬ್ಬರು ಆತ್ಮಹತ್ಯಾ ಬಾಂಬರ್‌ಗಳು ಕಾಂಪೌಂಡ್‌ಗೆ ವಾಹನ ಗುದ್ದಿಸಿ ತಮ್ಮನ್ನು ಸ್ಫೋಟಿಸಿಕೊಂಡ ಪರಿಣಾಮ ಹತ್ತಿರದಲ್ಲಿದ್ದ ವಾಹನಗಳು ಬೆಂಕಿಗೆ ಆಹುತಿಯಾದವು.

ಈ ವೇಳೆ ಕೆಲಸಕ್ಕಾಗಿ ತೆರಳುತ್ತಿದ್ದ ನೌಕರರು ಸ್ಫೋಟಕ್ಕೆ ಬಲಿಯಾದರು. ಘಟನೆ ನಡೆದ ಸ್ಥಳದಲ್ಲಿನ ಕಟ್ಟಡ  ಹೊರಭಾಗದ ಗೊಡೆ ಕುಸಿದು ಇತರೆ ಭಾಗ ಶಿಥಿಲಗೊಂಡರೆ, ಹೊರಗೆ  ಹೊತ್ತಿ ಉರಿಯುತ್ತ ನಿಂತಿದ್ದ ವಾಹನಗಳು ಸ್ಫೋಟದ ಭೀಕರತೆಗೆ ಸಾಕ್ಷಿಯಾಗಿದ್ದವು.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಿರಿಯಾದಲ್ಲಿರುವ ವಿಶ್ವಸಂಸ್ಥೆಯ ವೀಕ್ಷಕರ ತಂಡದ ಮುಖ್ಯಸ್ಥ ಮೇಜರ್ ಜನರಲ್ ರಾಬರ್ಟ್ ಮೂಡ್ ಅವರು ಇದು `ಭಯಂಕರವಾದ ಹಿಂಸಾಚಾರ~ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT