ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಯಾದಲ್ಲಿ 68 ನಾಗರಿಕರ ಹತ್ಯೆ; ಕದನ ವಿರಾಮಕ್ಕೆ ಬೆಂಬಲ

Last Updated 22 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಡಮಾಸ್ಕಸ್, ಸಿರಿಯಾ (ಎಎಫ್‌ಪಿ): ಇಡ್ಲಿಬ್ ಪ್ರಾಂತ್ಯದ ಹಾಮ್ಸ ನಗರ ಮತ್ತು ಗ್ರಾಮವೊಂದರ ಮೇಲೆ ಕ್ಷಿಪ್ರ ದಾಳಿ ನಡೆಸಿದ ಸರ್ಕಾರಿ ವಿರೋಧಿ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿದ ಸೇನಾಪಡೆಗಳು 68 ನಾಗರಿಕರನ್ನು ಹತ್ಯೆ ಮಾಡಿದೆ.
 
ಈ ನಡುವೆ ಮಾನವೀಯ ಕದನ ವಿರಾಮ ಪ್ರಸ್ತಾಪಿಸಿರುವ ರೆಡ್‌ಕ್ರಾಸ್‌ಗೆ ಅಮೆರಿಕ ಬೆಂಬಲ ವ್ಯಕ್ತಪಡಿಸಿದೆ.
ಇಲ್ಲಿನ ಪರಿಸ್ಥಿತಿ ವರದಿ ಮಾಡಲು ಬಂದಿದ್ದ ಬ್ರಿಟನ್‌ನ `ಸಂಡೆ ಟೈಮ್ಸ~ ಪತ್ರಿಕೆಯ ವರದಿಗಾರ್ತಿ ಮೇರಿ ಕೊಲ್ವಿನ್ ಮತ್ತು ಫ್ರಾನ್ಸ್‌ನ ಛಾಯಾಚಿತ್ರಗ್ರಾಹಕ ರೆಮಿ ಒಬ್ಲೆಕ್ ಅವರು ಸಾವನ್ನಪ್ಪಿದ್ದಾರೆ.

ಅವರು ಉಳಿದುಕೊಂಡಿದ್ದ ಮನೆ ಮೇಲೆ ಆಕಸ್ಮಿಕ ಷೆಲ್ ದಾಳಿ ನಡೆದುದರಿಂದ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT