ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿವಂತರ ಪಟ್ಟಿಯಲ್ಲಿ ಸೋನಿಯಾ ಇಲ್ಲ

Last Updated 3 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ಅಖಿಲ ಭಾರತ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಜಗತ್ತಿನ ಅತ್ಯಂತ ಸಿರಿವಂತ  ನಾಯಕರ ಪಟ್ಟಿ­ಯಲ್ಲಿ ಪ್ರಕಟಿಸಿದ್ದ ಅಮೆರಿಕದ ಸುದ್ದಿ ವೆಬ್‌ಸೈಟ್‌ ಈಗ ಅವರ ಹೆಸರನ್ನು ಪಟ್ಟಿಯಿಂದ ತೆಗೆದು­ಹಾಕಿದೆ.

‘ಇದೊಂದು ಅತ್ಯಂತ ಅಸಂಗತ ಹಾಗೂ ಹಾಸ್ಯಾಸ್ಪದ ಸುದ್ದಿ’ ಎಂದು ಕಾಂಗ್ರೆಸ್‌ ಪಕ್ಷ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಬೆನ್ನಲ್ಲೇ ವೆಬ್‌ಸೈಟ್‌ ಈ ಕ್ರಮ ಕೈಗೊಂಡಿದೆ.‘ಸೋನಿಯಾ ಮತ್ತು ಕತಾರ್‌ನ ಮಾಜಿ ದೊರೆ ಹಮೀದ್‌ ಅವರನ್ನು ಸಿರಿ­ವಂತರ ಪಟ್ಟಿ­-ಯಿಂದ ಕೈ­ಬಿಡ­ಲಾಗಿದೆ’ ಎಂದು ಹಫಿಂಗ್‌ಟನ್‌ ಪೋಸ್ಟ್‌ ವೆಬ್‌ಸೈಟ್‌ನ ಸಂಪಾದಕರು ಸ್ಪಷ್ಟಪಡಿಸಿ­ದ್ದಾರೆ.

ಅಲ್ಲದೇ, ತಪ್ಪು ಮಾಹಿತಿಯಿಂದ ಗೊಂದಲ­ವಾಗಿದ್ದಕ್ಕೆ ಸಂಪಾದಕರು ವಿಷಾದ ವ್ಯಕ್ತಪಡಿಸಿದ್ದಾರೆ.‘ಬೇರೊಂದು ವೆಬ್‌ಸೈಟ್‌ನಲ್ಲಿದ್ದ ಪಟ್ಟಿಯನ್ನು ಆಧರಿಸಿ ಈ ಪಟ್ಟಿ ಪ್ರಕಟಿ­ಸಲಾಗಿತ್ತು. ಅದರಲ್ಲಿದ್ದ ಆಸ್ತಿ ಮೌಲ್ಯ­ವನ್ನು ನಾವು ಖಚಿತಪಡಿಸಿ­ಕೊಂಡಿರಲಿಲ್ಲ’  ಎಂದು ಸಂಪಾದಕರು ತಿಳಿಸಿದ್ದಾರೆ.
ಆದರೆ ಮೊದಲಿಗೆ ಇದನ್ನು ಪ್ರಕಟಿ­ಸಿದ್ದ ವೆಬ್‌ಸೈಟ್‌ ಯಾವುದೆಂಬು­ದನ್ನು ಅವರು ಬಹಿರಂಗಪಡಿಸಿಲ್ಲ.

ಸೋನಿಯಾ ಅವರು 200 ಕೋಟಿ ಡಾಲರ್‌ (ಸುಮಾರು ₨ 12,400 ಕೋಟಿ) ಬೆಲೆಯ ಆಸ್ತಿಪಾಸ್ತಿಗೆ ಒಡತಿ­ಯಾಗಿದ್ದು, ಅವರು ಜಗತ್ತಿನ 12ನೇ ಸಿರಿವಂತ ನಾಯಕಿ ಎಂದು  ವೆಬ್‌ಸೈಟ್‌ 4 ದಿನದ ಹಿಂದೆ ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT