ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಟು ಕಾಯ್ದಿರಿಸುವಿಕೆ ಬದಲಾವಣೆ

ರೈಲ್ವೆ ಮಂಡಳಿಗೆ ಪ್ರಯಾಣಿಕರ ಸೌಲಭ್ಯ ಸಮಿತಿ ಶಿಫಾರಸು
Last Updated 7 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಯಾಣಿಕರ ಸೀಟು ಕಾಯ್ದಿರಿಸುವ ವ್ಯವಸ್ಥೆ­­ಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ರೈಲ್ವೆ ಮಂಡಳಿಗೆ ಶಿಫಾರಸು ಮಾಡಲಾಗಿದೆ. 200ಕ್ಕಿಂತ ಹೆಚ್ಚು ಪ್ರಯಾಣಿಕರು ನಿರೀ­ಕ್ಷಣಾ ಪಟ್ಟಿಯಲ್ಲಿದ್ದರೆ ಹೆಚ್ಚುವರಿ ಬೋಗಿ­­ಗಳನ್ನು ಅಳವಡಿಸುವಂತೆ ಕೋರ­ಲಾ­ಗಿದೆ ಎಂದು ರೈಲ್ವೆ ಪ್ರಯಾಣಿಕರ ಸೌಲಭ್ಯಗಳ ಸಮಿತಿ ಅಧ್ಯಕ್ಷ ಚಲವಾದಿ ನಾರಾಯಣಸ್ವಾಮಿ ತಿಳಿಸಿದರು.

ಪ್ರಸ್ತುತ 600ರಿಂದ 700 ಪ್ರಯಾ­ಣಿ­ಕರ ನಿರೀಕ್ಷಣಾ ಪಟ್ಟಿ ಪ್ರಕಟಿಸ­ಲಾಗು­ತ್ತಿದೆ. ಇದರಿಂದ ಪ್ರಯಾಣಿಕರಿಗೆ ತೊಂದ­ರೆ­­ಯಾಗುತ್ತಿದೆ. ಕೊನೆಯ ಕ್ಷಣ­ದವರೆಗೂ ಸೀಟು ದೊರೆಯುವ ಆಶಾ­ಭಾವ ಹೊಂದಿರುತ್ತಾರೆ. ಆದ್ದರಿಂದ, 300ಕ್ಕಿಂತ ಹೆಚ್ಚು ಪ್ರಯಾಣಿಕರ ನಿರೀಕ್ಷಣಾ ಪಟ್ಟಿ ಪ್ರಕಟಿಸದಂತೆ ಶಿಫಾ­ರಸು ಮಾಡಲಾಗಿದೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಉತ್ತರ ಭಾರತದಲ್ಲಿ ಟಿಕೆಟ್‌ ಇಲ್ಲದೆ ಪ್ರಯಾಣ ಮಾಡುವವರ ಸಂಖ್ಯೆಯೇ ಹೆಚ್ಚು. ಕಾನೂನು ಪಾಲಿಸದ ಪರಿ­ಣಾಮ ಗಲಾಟೆಗಳು ನಡೆಯು­ತ್ತಿವೆ. ಆದ್ದರಿಂದ, ಈ ರೀತಿಯ ಕೆಲವು ಬದ­ಲಾವಣೆಗಳನ್ನು ತರಲು ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು. ರೈಲಿನಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವುದು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ.

ಕಳ್ಳತನ ಪ್ರಕರಣ­ಗಳು ನಡೆದರೆ ರೈಲ್ವೆ ಪೊಲೀಸ್‌ ಪಡೆ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀ­­ಸ­ರನ್ನು ಜಂಟಿಯಾಗಿ ಜವಾಬ್ದಾ­ರ­­ರನ್ನಾಗಿ ಮಾಡ­ಲಾ­ಗುವುದು. ರಾತ್ರಿ ವೇಳೆ ಕಳ್ಳ­ತನ ಪ್ರಕರಣಗಳು ಹೆಚ್ಚುತ್ತಿ­ರು­ವುದ­ರಿಂದ ಪ್ರಯಾಣಿಕರು ಕೇವಲ ಹಗಲು ಹೊತ್ತಿನಲ್ಲಿ ಮಾತ್ರ ಪ್ರಯಾಣಿ­ಸು­ವ ಪರಿಸ್ಥಿತಿ ಉಂಟಾಗಿದೆ. ರಾತ್ರಿ ಪ್ರಯಾಣ ಮಾಡುವವರ ಸಂಖ್ಯೆ­ಯಲ್ಲೂ ಇಳಿಮುಖವಾಗಿದೆ ಎಂದರು.

ದರಪಟ್ಟಿ ಪ್ರದರ್ಶನ ಕಡ್ಡಾಯ: ರೈಲ್ವೆ ನಿಲ್ದಾಣಗಳಲ್ಲಿ ಕೂಲಿಕಾರ್ಮಿಕರು ತಮ್ಮ ಕೊರಳಲ್ಲಿ ದರಪಟ್ಟಿ ಕಡ್ಡಾ­­­ಯ­ವಾಗಿ ಪ್ರದರ್ಶನ ಮಾಡ­ಬೇಕು ಎಂದು ನಾರಾಯಣಸ್ವಾಮಿ ತಿಳಿಸಿದರು. ರೈಲ್ವೆ ಇಲಾಖೆ ನಿಗದಿಪಡಿಸಿದ ದರ­ಗಳಂತೆ ಪ್ರಯಾಣಿಕರು ಹಣ ನೀಡ­­ಬೇಕು. ಆದರೆ, ಬಹುತೇಕ ಸ್ಥಳಗಳಲ್ಲಿ ಕೂಲಿ­ಕಾರ್ಮಿಕರು ಹೆಚ್ಚು ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರು­ಗಳು ಬಂದಿವೆ. ಆದ್ದರಿಂದ ಈ ನಿಯಮ­ವನ್ನು ಜಾರಿಗೊಳಿಸಲಾಗಿದೆ ಎಂದರು.

ಕಳಪೆ ಊಟ–ತಿಂಡಿ: ಊಟ ಮತ್ತು ತಿಂಡಿ ಹಾಗೂ ಸ್ವಚ್ಛತೆ ಕೊರತೆ ಬಗ್ಗೆ ಪ್ರಯಾಣಿಕರಿಂದ ಸಾಕಷ್ಟು ದೂರು­ಗಳು ಬಂದಿವೆ. ರೈಲಿನಲ್ಲಿ ಊಟ–ತಿಂಡಿ ವ್ಯವಸ್ಥೆ ಬಹಳ ಕೆಟ್ಟದಾಗಿದೆ. ಪ್ರಸ್ತುತ ಊಟ, ತಿಂಡಿ ಪೂರೈಸುವುದನ್ನು ಹೊರಗುತ್ತಿಗೆ­ಗೆ ನೀಡಲಾಗಿದೆ. ಇನ್ನು ಮುಂದೆ ಊಟ­­ತಿಂಡಿ ಕಳಪೆಯಾಗಿದ್ದರೆ ವಿಚಾ­ರಣೆ ಮಾಡಿ ಪರವಾನಗಿ ರದ್ದು­­­ಪ­ಡಿ­ಸ­­ಲಾ­ಗುವುದು ಎಂದು ತಿಳಿಸಿದರು.

ರೈಲಿನಲ್ಲಿನ ಶೌಚಾಲಯಗಳನ್ನು ಸಂಪೂರ್ಣವಾಗಿ ಯಂತ್ರಗಳ ಮೂಲ­ಕವೇ ಸ್ವಚ್ಛಗೊಳಿಸಲಾಗುವುದು. ಈಗಾ­­­ಗಲೇ ಕೇಂದ್ರ ಸರ್ಕಾರ ಮಲ ಹೊರುವ ಪದ್ಧತಿ ನಿಷೇಧಿಸಿ ಮಸೂದೆ ಜಾರಿಗೊ­ಳಿಸಿದೆ. ಆದ್ದರಿಂದ ಶೌಚಾಲಯಗಳ ಸ್ವಚ್ಛತೆ ಕಾರ್ಯಕ್ಕೆ ಕಾರ್ಮಿಕರನ್ನು ಬಳ­ಸು­ವುದಿಲ್ಲ ಎಂದು ತಿಳಿಸಿದರು. ಪ್ರಯಾಣಿಕರ ಸೌಲಭ್ಯಗಳ ಸಮಿತಿ­ಯಲ್ಲಿ ಆರು ಸದಸ್ಯರಿದ್ದು, ಎರಡು ವರ್ಷ ಕಾಲಾವಧಿ ಇದೆ. ಅಧಿಕಾರ ವಹಿಸಿಕೊಂಡ 120 ದಿನಗಳಲ್ಲಿ 80 ದಿನಗಳನ್ನು ಪ್ರವಾಸದಲ್ಲಿ ಕಳೆದಿದ್ದು, 12 ರಾಜ್ಯಗಳಲ್ಲಿ ಪ್ರವಾಸ ಕೈಗೊಳ್ಳ­ಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT