ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಡಿಯಲ್ಲಿ ರಾಮಾಯಣ

Last Updated 7 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ವೇಣುಗೋಪಾಲಸ್ವಾಮಿ ಎಜುಕೇಷನ್ ಟ್ರಸ್ಟ್ ಮತ್ತು ಲಹರಿ ರೆಕಾರ್ಡಿಂಗ್ ಕಂಪೆನಿ: ಭಾನುವಾರ ಪೇಜಾವರ ಶ್ರೀಗಳಿಂದ `ಸಂಕ್ಷೇಪ ರಾಮಾಯಣ, ಮೊದಲನೇ ಸರ್ಗ, ಬಾಲಕಾಂಡ ವಾಲ್ಮೀಕಿ ರಾಮಾಯಣದ ಸೀಡಿ, ಡಿವಿಜಿಯವರ ಅಂತಃಪುರಗೀತೆಗಳು, ಮಹಾನ್ ವಾಗ್ಗೇಯಕಾರರಾದ ಮೈಸೂರು ವಾಸುದೇವಾಚಾರ್ಯರ ಕೃತಿಗಳ~ ಸೀಡಿ ಲೋಕಾರ್ಪಣೆ.

ವಾಲ್ಮೀಕಿ ರಾಮಾಯಣದ ಬಾಲಕಾಂಡದ ಪ್ರಥಮ ಸರ್ಗದ 100 ಶ್ಲೋಕಗಳಿಗೆ ಸಂಗೀತ ವಿದ್ವಾನ್ ಎಂ.ಜಿ. ವೆಂಕಟನಾರಾಯಣ ಅವರು ಮೊದಲ ಬಾರಿಗೆ 50 ರಾಗಗಳಲ್ಲಿ ಅಳವಡಿಸಿ, ಹಾಡಿದ್ದಾರೆ.

ಈ ಸೀಡಿಗಳನ್ನು ಆಧರಿಸಿ ಎಂ.ಜಿ. ವೆಂಕಟರಾಘವನ್ ಅವರ ಶಿಷ್ಯಂದಿರು, ವಿ.ನಾಗರಾಜ್, ಅಂಶುಮಾಲಾ, ರಾಧಾ, ಆರ್. ಶುೃತಿ ಮತ್ತು ಅನಘ, ಅಪೂರ್ವ ಪರ್‌ಫಾರ್ಮಿಂಗ್ ಆರ್ಟ್ಸ್ ಸಂಸ್ಥೆಯ ನಿರ್ದೇಶಕ ಕೆ.ಶ್ರೀನಿವಾಸನ್ ಮತ್ತು ತಂಡದಿಂದ ನೃತ್ಯ.

ಅತಿಥಿಗಳು: ಆರ್. ಅಶೋಕ್, ರವಿಸುಬ್ರಹ್ಮಣ್ಯ, ಪಿ.ಜಿ.ಆರ್. ಸಿಂಧ್ಯ.
ಸ್ಥಳ: ರವೀಂದ್ರ ಕಲಾ ಕ್ಷೇತ್ರ, ಜೆ.ಸಿ.ರಸ್ತೆ. ಸಂಜೆ 5.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT