ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀತಾಫಲ ಈ ಬಾರಿ ಬಲು ದುಬಾರಿ...!?

Last Updated 11 ಅಕ್ಟೋಬರ್ 2011, 8:00 IST
ಅಕ್ಷರ ಗಾತ್ರ

ಚಿಟಗುಪ್ಪಾ: ವರ್ಷದಂತೆ ಈ ಬಾರಿ ಸೀತಾಫಲ್ ಹಣ್ಣು ಏಲ್ಲೆಂದರಲ್ಲಿ ಕೊಂಡುಕೊಳ್ಳಲು ಸಿಗುತ್ತಿಲ್ಲ ಅಲ್ಲೊಂದು ಇಲ್ಲೊಂದು ಎಂಬಂತೆ ಬೆರಳೆಣಿಕೆಯಂತೆ ಸೀತಾಫಲ್ ಹಣ್ಣು ಮಾರುವ ಮಹಿಳೆಯರು ಕಾಣುತ್ತಿದ್ದಾರೆ.

ಈ ಬಾರಿಯ ಮಳೆಯ ಪ್ರಮಾಣ ಕಡಿಮೆ ಆಗಿದ್ದರಿಂದ ಸೀತಾಫಲ್ ಗಿಡಗಳಿಗೆ ಕಾಯಿ ತೀರ ಕಡಿಮೆ ಪ್ರಮಾಣದಲ್ಲಿ ಬೆಳೆದಿರುವುದೇ ಮಾರುಕಟ್ಟೆಯಲ್ಲಿ ಹಣ್ಣು ದುಬಾರಿ ಬೆಲೆಗೆ ಮಾರಾಟ ವಾಗುತ್ತಿರುವುದಕ್ಕೆ ಕಾರಣವಾಗಿದೆ.

ಚಿಟಗುಪ್ಪಾ ಹತ್ತಿರದ ವಿವಿಧ ಹಳ್ಳಿಗಳಿಂದ ಪ್ರತಿ ವರ್ಷ ಸೀತಾಫಲ್ ಹಣ್ಣು ಮಾರಾಟಮಾಡಲು ನೂರಾರು ಮಹಿಳೆಯರು ದಿನಾಲೂ ಬುಟ್ಟಿ ತುಂಬಿಕೊಂಡು ತಾಜಾ ಹಣ್ಣುಗಳು ತರುತ್ತಿದ್ದರು. ಈ ಬಾರಿ ಮಾತ್ರ ಹಣ್ಣು ಮಾರಾಟ ಮಾಡುವವರ ಸಂಖ್ಯೆ ತೀರ ಕಡಿಮೆ ಆಗಿದೆ.

ಸೋಮವಾರದ ಸಂತೆಯಲ್ಲಿ ಮಾರಾಟಮಾಡಲು ಬಂದಿದ್ದ ನಾಲ್ಕೈದು ಮಹಿಳೆಯರ ಬುಟ್ಟಿಯಲ್ಲಿದ್ದ ಸೀತಾಫಲ್ ಹಣ್ಣು ಕೊಂಡುಕೊಳ್ಳಲು ಜನ ಮುಗಿಬಿದ್ದಿದ್ದರು.

ಬೆಲೆ ಮಾತ್ರ ಹೆಚ್ಚಾಗಿತ್ತು. ಒಂದು ಕಾಯಿ ಕನಿಷ್ಠ 6 ರಿಂದ 8 ರೂ. ವರೆಗೂ ಮಾರಾಟ ಮಾಡಲಾಗಿದೆ. ತಿನ್ನುವ ಜನಕ್ಕೆ ದುಬಾರಿ ಬೆಲೆ ಯ ಬಿಸಿ ತಟ್ಟಿದ್ದರಿಂದ ಬರೀ ಕಾಯಿ ನೋಡಿ ಸಂತೋಷ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಅಕ್ಕಪಕ್ಕದ ಗ್ರಾಮಗಳಲ್ಲಿಯೂ ಸೀತಾಫಲ್ ಹಣ್ಣು ಮಾರಾಟ ಮಾಡಲು ಬರುವ ಮಹಿಳೆಯರು ಕೊಂಡುಕೊಳ್ಳುವವರ ಜೊತೆ ಬೆಲೆಯ ವಿಷಯದಲ್ಲಿ ಕಿರಿಕಿರಿ ಮಾಡುತ್ತ ಮಾರಾಟ ಮಾಡುತ್ತಿದ್ದಾರೆ.
ಹಣ್ಣು ಕಡಿಮೆ ಬೆಲೆ ಹೆಚ್ಚು ಆಗಿದ್ದರಿಂದ ಮಾರುವುದಕ್ಕು ಕೊಂಡುಕೊಳ್ಳುವುದಕ್ಕೂ ಕಷ್ಟವಾಗುತ್ತಿದೆ ಎಂದು ಹಣ್ಣು ಮಾರಾಟಮಾಡುವ ರಮಾಬಾಯಿ ತಿಳಿಸುತ್ತಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT