ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀನಿಯರ್ ಹಾಕಿ: ಜಿ ಗುಂಪಿನಲ್ಲಿ ಕರ್ನಾಟಕ

Last Updated 13 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್): ಭೋಪಾಲ್‌ನಲ್ಲಿ ಅಕ್ಟೋಬರ್ 14ರಿಂದ (ಇಂದಿನಿಂದ) 23ರ ವರೆಗೆ ಹಾಕಿ ಇಂಡಿಯಾ ಆಶ್ರಯದ ಮಹಿಳೆಯರ ರಾಷ್ಟ್ರೀಯ ಸೀನಿಯರ್ ಹಾಕಿ ಚಾಂಪಿಯನ್‌ಷಿಪ್ ನಡೆಯಲಿದ್ದು, ಕರ್ನಾಟಕ ತಂಡ `ಜಿ~ ಗುಂಪಿನಲ್ಲಿ ಸ್ಥಾನ ಪಡೆದಿದೆ.

ಹಾಲಿ ಚಾಂಪಿಯನ್ ಇಂಡಿಯನ್ ರೈಲ್ವೆಸ್ `ಎ~ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಈ ತಂಡಗಳ ಜೊತೆ ಮಹಾರಾಷ್ಟ್ರ ಹಾಗೂ ಕೇರಳ ತಂಡಗಳಿವೆ. `ಜಿ~ ಗುಂಪಿನಲ್ಲಿರುವ ಕರ್ನಾಟಕ ತಂಡದ ಜೊತೆಗೆ ಚಂಡಿಗಡ, ಉತ್ತರಖಂಡ ಮತ್ತು ಪುದುಚೇರಿ ತಂಡಗಳು ಸ್ಥಾನ ಪಡೆದಿವೆ.

ಲೀಗ್ ಕಮ್ ನೌಕ್‌ಔಟ್ ಮಾದರಿಯಲ್ಲಿ  ಪಂದ್ಯಗಳು ನಡೆಯಲಿವೆ. `ಸಿ~ ಗುಂಪಿನಲ್ಲಿ ಸ್ಥಾನ ಪಡೆದಿರುವ ಒಡಿಶಾ ಮತ್ತು ತಮಿಳುನಾಡು ಭಾನುವಾರ ಉದ್ಘಾಟನಾ ಪಂದ್ಯದಲ್ಲಿ ಪೈಪೋಟಿ ನಡೆಸಲಿವೆ. 
  
ಹಾಕಿ ಇಂಡಿಯಾದ ಆಯ್ಕೆ ಸಮಿತಿ ಸದಸ್ಯರು ಈ ವೇಳೆ ಹಾಜರಿರಲಿದ್ದಾರೆ. ಮುಂಬರುವ ತರಬೇತಿ ಶಿಬಿರ ಮತ್ತು ವಿಶ್ವ ಲೀಗ್ ರೌಂಡ್‌ಗೆ ತಂಡವನ್ನು ಆಯ್ಕೆ ಮಾಡಲು ಈ ಚಾಂಪಿಯನ್‌ಷಿಪ್ ಮಾನದಂಡವಾಗಿದೆ.

ಗುಂಪುಗಳು ಇಂತಿವೆ:
`ಎ~: ಇಂಡಿಯನ್ ರೈಲ್ವೆಸ್, ಮಹಾರಾಷ್ಟ್ರ, ಕೇರಳ. `ಬಿ~: ಹರಿಯಾಣ, ಮಣಿಪುರ, ಆಂಧ್ರಪ್ರದೇಶ, `ಸಿ~: ಹರಿಯಾಣ, ಮಣಿಪುರ, ತಮಿಳುನಾಡು ಹಾಕಿ ಭೋಪಾಲ್. `ಡಿ~: ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಭಾರತೀಯ ವಿಶ್ವವಿದ್ಯಾಲಯಗಳು. `ಈ~: ಮಧ್ಯ ಪ್ರದೇಶ ಹಾಕಿ ಸಂಸ್ಥೆ, ಛತ್ತೀಸಗಡ, ಗುಜರಾತ್. `ಎಫ್~: ಜಾರ್ಖಂಡ್, ಬಿಹಾರ್. ಅಸ್ಸಾಂ. `ಜಿ~: ಕರ್ನಾಟಕ, ಚಂಡಿಗಡ, ಉತ್ತರಾಖಂಡ, ಪುದುಚೇರಿ. `ಎಚ್~: ಉತ್ತರ ಪ್ರದೇಶ, ತ್ರಿಪುರ, ಬಂಗಾಳ, ದೆಹಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT