ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀರೆ-ರವಿಕೆಗಳ `ಪೂರ್ವೋತ್ಸವ'

Last Updated 14 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಯಂತ್ರಗಳಿಂದ ನೇಯ್ದ ಸೀರೆಗಳ ಭರಾಟೆಯಲ್ಲಿ ಸಾಂಪ್ರದಾಯಿಕ ಕೈಮಗ್ಗ ಸೀರೆಗಳು ಈಗ ಅಪರೂಪವಾಗಿವೆ. ಕೈಮಗ್ಗದ ಸೀರೆಗಳಿಗೆ ಅಂದು ಬಳಸುತ್ತಿದ್ದ ವಿಲಾಸಿ ರವಿಕೆಗಳೂ ಈಗ ಅಪರೂಪವೇ ಸರಿ. ಇಂಥ ಸಂದರ್ಭದಲ್ಲಿ ವಿಜಯಲಕ್ಷ್ಮಿ ಎಕ್ಸ್‌ಪ್ರೆಷನ್ಸ್ ಹಾಗೂ ಶೈನಾ ಬುಟಿಕ್ ಆಶ್ರಯದಲ್ಲಿ ಪುರಾತನ ಸೀರೆ ಹಾಗೂ ರವಿಕೆಗಳ ಎರಡು ದಿನಗಳ ಪ್ರದರ್ಶನ `ಪೂರ್ವೋತ್ಸವ' ಆಯೋಜಿಸಲಾಗಿದೆ.

`ಕೊರವೈ ಸೀರೆ' ಎಂದೇ ಪ್ರಸಿದ್ಧವಾಗಿರುವ ಅಪರೂಪ ವಿನ್ಯಾಸವುಳ್ಳ ಕೈಮಗ್ಗದ ರೇಷ್ಮೆ, ಹತ್ತಿ, ವಿಭಿನ್ನ ಬಗೆಯ ನೇಯ್ಗೆಯ ಸೀರೆಗಳು ಈ ಪ್ರದರ್ಶನದಲ್ಲಿವೆ. ಜತೆಗೆ ಬಗೆಬಗೆಯ ವಿನ್ಯಾಸದ `ವಿಕ್ಟೋರಿಯಾ ಶೈಲಿ'ಯ ರವಿಕೆಗಳು ಪ್ರದರ್ಶನದ ಆಕರ್ಷಣೆಯಲ್ಲೊಂದು. ರಾ ಸಿಲ್ಕ್, ವೆಲ್ವೆಟ್, ನೆಟ್ ಹಾಗೂ ಬನಾರಸ್ ಬ್ರೊಕೆಡ್‌ಗಳನ್ನು ಬಳಸಿ ತಯಾರಿಸಲಾದ ರವಿಕೆಗಳು ಇಲ್ಲಿ ಲಭ್ಯ. ಕೇವಲ ಸೀರೆಗಳಿಗೆ ಮಾತ್ರವಲ್ಲದೇ ರಾಜ ಮಹಾರಾಜರ ಕಾಲದಲ್ಲಿ ಮಹಿಳೆಯರು ತೊಡುತ್ತಿದ್ದ ವಿಲಾಸಿ ರವಿಕೆಗಳಿಗೆ ಆಧುನಿಕ ಸ್ಪರ್ಶ ನೀಡಿ `ಶೈನಾ ಬೊಟಿಕ್'ನ ಶೈಲಜಾ ಅನಂತ್ ಹಾಗೂ ಸಂಗೀತಾ ಅನಂತ್ ಎಂಬ ತಾಯಿ-ಮಗಳು ವಿನ್ಯಾಸ ಮಾಡಿದ್ದಾರೆ.

`ಗತಿಸಿದ ಕಾಲವನ್ನು ಮತ್ತೆ ಪ್ರದರ್ಶಿಸಿ ಸಂಭ್ರಮಿಸುವುದೇ ಈ `ಪೂರ್ವೋತ್ಸವ'ದ ಮುಖ್ಯ ಉದ್ದೇಶ. ಹೀಗಾಗಿ ಅಂದು ಬಳಸುತ್ತಿದ್ದ ಗಾಢ ಬಣ್ಣದ ಬಾರ್ಡರ್ ಸೀರೆಗಳು ಅವುಗಳಿಗೆ ಬಗೆಬಗೆಯ ರವಿಕೆಗಳನ್ನು ಈ ಬಾರಿ ಪ್ರದರ್ಶನಕ್ಕೆಂದೇ ವಿನ್ಯಾಸ ಮಾಡಲಾಗಿದೆ.

ಸೀರೆ ಖರೀದಿಸುವವರು ಸೀರೆಯೊಂದಿಗಿರುವ ರವಿಕೆ ಹೊಲಿಸಿ ಕಾದು ಹಾಕಿಕೊಳ್ಳುವಷ್ಟು ತಾಳ್ಮೆ ಇರದು. ಇಂಥವರಿಗಾಗಿಯೇ ಆಯಾಯ ಸೀರೆಗಳಿಗೆ ಸರಿ ಹೊಂದುವ ಕಾಂಟ್ರಾಸ್ಟ್ ರವಿಕೆಗಳು ಇಲ್ಲಿ ಸಿದ್ಧವಾಗಿವೆ. ಇಲ್ಲಿರುವುದು 250-300 ಸೀರೆಗಳ ಸೀಮಿತ ಸಂಗ್ರಹ. ಜತಗೆ ರವಿಕೆಗಳೂ. ಸೀರೆಗಳ ಬೆಲೆ ಐದರಿಂದ ಐವತ್ತು ಸಾವಿರ ರೂಪಾಯಿಗಳಾದರೆ, ರವಿಕೆಗಳು ಮೂರು ಸಾವಿರ ರೂಪಾಯಿ ಮೇಲ್ಪಟ್ಟವುಗಳಾಗಿವೆ' ಎಂದು ಸಂಗಿತಾ ತಿಳಿಸಿದರು.

ಇಂದೇ ಕೊನೆಯಾಗುವ ಈ ಪ್ರದರ್ಶನ ನಡೆಯುವ ಸ್ಥಳ: ರೈನ್‌ಟ್ರೀ, ನಂ. 4, ಸ್ಯಾಂಕೀ ರಸ್ತೆ, ವಿಂಡ್ಸರ್ ಮ್ಯಾನರ್ ಎದುರು. ಸಮಯ: ಬೆಳಿಗ್ಗೆ 10.30ರಿಂದ ಸಂಜೆ 6.30.

ಪ್ರದರ್ಶನದ ನಂತರ ಈ ಸಂಗ್ರಹಗಳು ಜೆಪಿ ನಗರ 2ನೇ ಹಂತದ 22ನೇ ಮುಖ್ಯ ರಸ್ತೆ, 12ನೇ ಅಡ್ಡ ರಸ್ತೆಯಲ್ಲಿರುವ ಶೈನಾ ಬುಟಿಕ್ ಮಳಿಗೆಯಲ್ಲಿ ಲಭ್ಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT