ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀರೆಯ ಬೆಲೆ ಅರ್ಧ ಲಕ್ಷ!

Last Updated 22 ಜುಲೈ 2012, 5:00 IST
ಅಕ್ಷರ ಗಾತ್ರ

ಭಾರತೀಯ ಸಂಸ್ಕೃತಿ, ಸಂಪ್ರಾದಾಯದಲ್ಲಿ ಸೀರೆಗೆ ಉನ್ನತ ಸ್ಥಾನ. ಭಾರತೀಯ ಮಹಿಳೆಯರಂತೂ ಸೀರೆಗೆ ನೀಡುವ ಮಹತ್ವ ವರ್ಣಿಸಲು ಅಸಾಧ್ಯ. ಭಾರತದಲ್ಲಿ ಉತ್ಪಾದನೆಯಾಗುವ ಉತ್ಕೃಷ್ಟ ಗುಣಮಟ್ಟದ ವಿವಿಧ ವಿನ್ಯಾಸ, ವೈಶಿಷ್ಟ್ಯತೆಯ ಸೀರೆಗಳು ವಿದೇಶಿ ಲಲನೆಯರ ಗಮನವೂ ಸೆಳದಿವೆ.

ಅಂತಹ ವೈಶಿಷ್ಟ್ಯ ಪೂರ್ಣ ಸೀರೆಗಳ ಪ್ರದರ್ಶನ ಮತ್ತು ಮಾರಾಟದಲ್ಲಿ ದೇಶದಲ್ಲಿಯೆ ಎತ್ತಿದ ಕೈಯಾದ ರಾಜ್ಯ ಸರ್ಕಾರಿ ಸ್ವಾಮ್ಯದ ಕೆಎಸ್‌ಐಸಿಯು, ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಗಂಗಾವತಿಯಲ್ಲಿ `ಮೈಸೂರು ಸಿಲ್ಸ್ ಸೀರೆಗಳ ಪ್ರದರ್ಶನ~ ಏರ್ಪಡಿಸಿದೆ.

ಸೀರೆ ಕೊಳ್ಳಲು ಹೋದ ಮಹಿಳೆಯರನ್ನು ಅಪ್ಪಟ ಮೈಸೂರು ರೇಷ್ಮೆಯ ನೂಲಿನಿಂದ ತಯಾರಿಸಿದ ನೂರಾರು ಸೀರೆಗಳು ಸೂಜಿಗಲ್ಲಿನಂತೆ ಮನ ಸೆಳೆಯುತ್ತಿವೆ. ಆದರೆ ಸೀರೆ ಕೊಳ್ಳಲು ಮುಂದಾಗುವ ಮಹಿಳೆಯರು ಬೆಲೆ ಕೇಳಿಯೇ ಒಂದು ಕ್ಷಣ ದಂಗಾವುದಂತ್ತು ಸತ್ಯ.

ಅರ್ಧ ಲಕ್ಷಕ್ಕೂ ಹೆಚ್ಚು: ಗಂಗಾವತಿಯ ಸರೋಜಮ್ಮ ಕಲ್ಯಾಣ ಮಂಟಪದಲ್ಲಿ ಪ್ರದರ್ಶನ ಆಗುತ್ತಿರುವ ಕೆಎಸ್‌ಐಸಿ ರೇಷ್ಮೆ ಸೀರೆಗಳ ಪೈಕಿ ಕಡುಗೆಂಪು ಬಣ್ಣದಲ್ಲಿ ನೇಯ್ದ ಆಕರ್ಷಕ ಕ್ರೇಪ್‌ರೇಷ್ಮೆ (550/52ರ) ವಿನ್ಯಾಸ ಸೀರೆಯ ಮೌಲ್ಯ 70,400 ರೂಪಾಯಿ.

ಮತ್ತೊಂದು ಹಳದಿ ಬಣ್ಣದ ಮೈಸೂರು ಜರಿಜಾಟ್ ಎಂಬ ಕಸೂತಿಯ ಎಂಬ್ರಾಯಡರಿ ಸೀರೆಯ ಮೌಲ್ಯ 68,700 ರೂಪಾಯಿ. ಪ್ರದರ್ಶನದಲ್ಲಿ ಕನಿಷ್ಠ ಒಂಬತ್ತು ಸಾವಿರದಿಂದ ಮೊದಲ್ಗೊಂಡು ಗರಿಷ್ಠ 70 ಸಾವಿರ ಮೊತ್ತದವರೆಗಿನ ಸೀರೆಗಳಿವೆ.

ಬೆಲೆಗೆ ಕಾರಣ ಏನು: ಉತ್ಕೃಷ್ಠ ಗುಣಮಟ್ಟದ ಮೈಸೂರು ರೇಷ್ಮೆ ಉಪಯೋಗಿಸಿದ್ದಲ್ಲದೆ ಪ್ರತಿ ಸೀರೆಯಲ್ಲೂ 0.65ರಷ್ಟು ಬಂಗಾರ, 0.65 ಪ್ರಮಾಣದ ಬೆಳ್ಳಿ ಬಳಸಿ ಸೀರೆಯ ಅಂಚು (ಬಾರ್ಡರ್) ವಿನ್ಯಾಸಗೊಳಿಸಿರುವುದು ಸೀರೆಯ ಬೆಲೆ ಹೆಚ್ಚಳಕ್ಕೆ ಕಾರಣ ಎಂದು ಸಂಘಟಕರು ಹೇಳುತ್ತಾರೆ.

ಮಹಿಳೆಯರು ಹೆಚ್ಚು ಇಷ್ಟಪಡುವ ಮೆಜಂಟಾ, ಬಾಟಲ್‌ಗ್ರೀನ್, ಕಾಪರ್ ಸಲ್ಫೇಟ್, ಅನಿಯನ್ ಪಿಂಕ್, ಪರ್ಪಲ್, ರಾಯಲ್ ಬ್ಲೂ, ನಾವೆ ಮೊದಲಾದ ಬಣ್ಣಗಳ ನೂರಕ್ಕೂ ಅಧಿಕ ವಿನ್ಯಾಸದ ಸೀರೆಗಳು ಪ್ರದರ್ಶನಗೊಳ್ಳುವೆ.

ಭೇಟಿ ನೀಡಬಹುದು:  ಈ ಮೊದಲು ಕೇವಲ ಬೆಂಗಳೂರು, ಮೈಸೂರು, ಗುಲ್ಬರ್ಗ, ಶಿವಮೊಗ್ಗದಂತ ದೊಡ್ಡ ದೊಡ್ಡ ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದ್ದ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಈಗ ಗಂಗಾವತಿಯಂತ ಸಣ್ಣ ನಗರಕ್ಕೂ ಕಾಲಿರಿಸಿದೆ.

ಮೂರು ಲಕ್ಷ ರೂಪಾಯಿಗಿಂತಲೂ ಅಧಿಕ ಮೌಲ್ಯದ ಸೀರೆಗಳೂ ಕೆಎಸ್‌ಐಸಿಯ ದಾಸ್ತಾನಿನಲ್ಲಿವೆ.  ಅಪರೂಪಕ್ಕೂಮ್ಮೆ ನಗರಕ್ಕೆ ಬಂದಿರುವ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನಕ್ಕೆ ಖರೀದಿಗಲ್ಲದಿದ್ದರೂ ದುಬಾರಿಯ ಸೀರೆಗಳನ್ನು ನೋಡಲಾದರೂ ಒಮ್ಮೆ ಭೇಟಿ ನೀಡಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT