ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಗಮ ಚುನಾವಣೆಗೆ ಕಟ್ಟುನಿಟ್ಟಿನ ಆದೇಶ

Last Updated 24 ಏಪ್ರಿಲ್ 2013, 8:39 IST
ಅಕ್ಷರ ಗಾತ್ರ

ಬಾದಾಮಿ: ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣೆ ಸಮಯದಲ್ಲಿ ಯಾವುದೇ ಅಕ್ರಮ ಚಟುವಟಿಕೆ ನಡೆಯದಂತೆ ಸೂಕ್ತ ಕ್ರಮವನ್ನು ಕೈಕೊಳ್ಳಲು ಅಧಿ ಕಾರಿಗಳಿಗೆ ನಿರ್ದೇಶನ ಕೊಡಲಾಗಿದೆ ಎಂದು ಸಹಾಯಕ ಚುನಾವಣಾ ಅಧಿಕಾರಿ ತಹಶೀಲ್ದಾರ್ ಅಜೀಜ್ ದೇಸಾಯಿ ಹೇಳಿದರು.
ಇಲ್ಲಿನ ಮಿನಿ ವಿಧಾನಸೌಧದಲ್ಲಿ ಅವರು ಪತ್ರಿಕಾಗೋಷ್ಠಿಯಲ್ಲಿ ವಿಧಾನ ಸಭಾ ಚುನಾವಣೆ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದರು.

ಬಾದಾಮಿ ವಿಧಾನಸಭಾ ಮತಕ್ಷೇತ್ರಕ್ಕೆ ಚುನಾವಣಾ ವೀಕ್ಷಕರಾಗಿ ಪಿ.ಡೆನಿಯಲ್ ಆಗಮಿಸಿದ್ದಾರೆ. ಚುನಾವಣೆಗೆ ಸಂಬಂಧಿಸಿದ ಯಾವುದೇ ದೂರನ್ನು ಸಾರ್ವಜನಿಕರು ಮೊಬೈಲ್ ಸಂಖ್ಯೆ 8762171487ಕ್ಕೆ ಕರೆ ಮಾಡಬಹುದು.ಇಲ್ಲವೇ ಸಂಜೆ 5ರಿಂದ 6ಗಂಟೆಯವರೆಗೆ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದ ಕೊಠಡಿ ಸಂಖ್ಯೆ 1ರಲ್ಲಿ ಖುದ್ದಾಗಿ ಭೇಟಿಯಾಬಹುದು ಎಂದು ತಿಳಿಸಿದರು.

ಚುನಾವಣೆಯ ಖರ್ಚು ವೆಚ್ಚಕ್ಕೆ ಸಂಬಂಧಿಸಿದ ದೂರುಗಳನ್ನು ವೀಕ್ಷಕ ರಾದ ನೋಡಲ್ ಅಧಿಕಾರಿ ಅರುಣ ಗೋಯಲ್ ಮೊಬೈಲ್ ಸಂಖ್ಯೆ 9448979621ಇವರನ್ನು ಸಂಪರ್ಕಿಸ ಬಹುದು. ಮಾದರಿ ನೀತಿ ಸಂಹಿತೆ ಕುರಿತು ನೋಡಲ್ ಅಧಿಕಾರಿಗಳಾದ  ಕೆ.ವಿ. ನಾಯಕ- 9449863558 ಮತ್ತು ಚುನಾವಣಾ ನಿರ್ವಾಚನಾ ಅಧಿಕಾರಿ ದೊಡ್ಡಬಸವರಾಜ- 9448001887 ಇವರನ್ನು ಸಂಪರ್ಕಿಸಬಹುದು ಎಂದು ಹೇಳಿದರು. ಬಾದಾಮಿ ವಿಧಾನಸಭಾ ಮತಕ್ಷೇತ್ರ ದಲ್ಲಿ ಒಟ್ಟು 239 ಮತಗಟ್ಟೆಗಳಲ್ಲಿ 73ಸೂಕ್ಷ್ಮ ,47 ಅತೀಸೂಕ್ಷ್ಮ  ಮತ್ತು 119 ಸಾಮಾನ್ಯ ಮತಗಟ್ಟೆಗಳನ್ನು ಗುರು ತಿಸಲಾಗಿದೆ. ಚುನಾವಣಾ ಕಾರ್ಯಕ್ಕೆ 1226 ಸಿಬ್ಬಂದಿಯನ್ನು ನೇಮಿಸ ಲಾಗಿದೆ. ಪುರಷ ಮತದಾರರು- 98121, ಮಹಿಳಾ ಮತದಾರರು 95227 ಮತ್ತು 6ಜನ ಮಂಗಳ ಮುಖಿಯರು ಸೇರಿದಂತೆ  ಒಟ್ಟು 1,93,354 ಮತದಾರರು ಇದ್ದಾರೆ ಎಂದರು.

ಚುನಾವಣೆಯಲ್ಲಿ ಸಾರಾಯಿ ಮತ್ತು ನಗದು ಹಣ ಸಾಗಾಟ ಮಾಡುವವರ ಮೇಲೆ ನಿಗಾ ಇಡಲು ಕುಳಗೇರಿ ಹೋಬಳಿ, ಗುಳೇದಗುಡ್ಡ ಮತ್ತು ಬಾದಾಮಿಯಲ್ಲಿ ಚೆಕ್ ಪೋಸ್ಟ್‌ಗಳನ್ನು ರಚಿಸಲಾಗಿದೆ. ಇಲ್ಲಿ 24 ಗಂಟೆಕಾಲ ಪೊಲೀಸ್ ಅಧಿಕಾರಿಗಳು ಮತ್ತು ಮತ್ತು ಸಿಬ್ಬಂದಿ ಕಟ್ಟೆಚ್ಚರ ವಹಿಸಿ ಪ್ರತಿಯೊಂದು ವಾಹನವನ್ನು ತಪಾಸಣೆ ಮಾಡುವರು ಎಂದು ತಿಳಿಸಿದರು.

ಎಂಎಸ್‌ಐಎಲ್ ನಲ್ಲಿ ಕಳೆದ ವರ್ಷ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಎಷ್ಟು ಮದ್ಯ ಮಾರಾಟ ಆಗಿತ್ತೋ ಅಷ್ಟೇ ಮದ್ಯ ಮಾರಾಟವಾಗಬೇಕು ಎಂದು ಆದೇಶಿಸಿದೆ.ಅಧಿಕ ಮಾರಾಟ ಮಾಡಿದರೆ ಸೂಕ್ತ ಕ್ರಮವನ್ನು ಕೈಕೊಳ್ಳಲಾಗುವದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT