ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಗಮ ಸಂಗೀತ ಸುದಿನ

Last Updated 10 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಅಖಿಲ ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟವು ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ `ಸುಗಮ ಸಂಗೀತ ಸುದಿನ~ ಕಾರ್ಯಕ್ರಮ ಆಯೋಜಿಸಿತ್ತು.

ನಂತರ ಬಿ.ಆರ್. ಲಕ್ಷ್ಮಣರಾವ್ ರಚನೆಯ ಕವಿತೆಗಳ ಗಾಯನ ಪ್ರಸ್ತುತಿ ಇತ್ತು. ಡಾ. ವೆಂಕಟೇಶಮೂರ್ತಿ ಮಾತನಾಡಿ ಬಿಎಂಶ್ರೀ, ಬೇಂದ್ರೆ, ನರಸಿಂಹಸ್ವಾಮಿ ಇವರ ನಂತರ ಕವಿತೆಗಳಲ್ಲಿ ಪ್ರೀತಿಯನ್ನು ವಸ್ತು ವಿಷಯವನ್ನಾಗಿಸಿಕೊಂಡ ಕವಿ ಲಕ್ಷ್ಮಣರಾವ್ ಎಂದರು. ಆದರೆ ಅವರ ಜಾಡಿನಲ್ಲಿ ಸಾಗದೆ ವಿಭಿನ್ನವಾಗಿ ಆಲೋಚಿಸುವ ಪರಿ ಅವರ ಸಾಹಿತ್ಯ ಕೃಷಿಯಲ್ಲಿದೆ ಎಂದು ಅಭಿಪ್ರಾಯಪಟ್ಟರು.

ವಿಜಯ ಹಾವನೂರು, ಆನಂದ ಮಾದಲಗೆರೆ, ಶಮಿತಾ ಮಲ್ನಾಡ್, ಗೀತಾ ಸತ್ಯಮೂರ್ತಿ, ಮೃತ್ಯುಂಜಯ ದೊಡ್ಡವಾಡ, ನರಹರಿ ದೀಕ್ಷಿತ್, ಜೋಸೆಫ್ ಹೆರಾನಿಮಾಸ್ ಅವರು ಬಿಆರ್‌ಎಲ್ ರಚಿತ ಕವಿತೆಗನ್ನು ಸುಶ್ರಾವ್ಯವಾಗಿ ಹಾಡಿ ಕೇಳುಗರಿಗೆ ಮುದ ನೀಡಿದರು.

ನವನೀತ ಕೃಷ್ಣ (ಕೀಬೋರ್ಡ್), ಪ್ರಕಾಶ್ ಹೆಗಡೆ (ಕೊಳಲು), ಪ್ರೀತಂ ಹಳಿಬಂಡಿ (ತಬಲಾ), ಕೃಷ್ಣ (ರಿದಂಪ್ಯಾಡ್) ವಾದ್ಯ ಸಹಕಾರ ನೀಡಿದರು.

ಜನ್ಮದಿನದ ನಿಮಿತ್ತ ಲಕ್ಷ್ಮಣರಾವ್ ಲಕ್ಷ್ಮಣರಾವ್ ಅವರನ್ನು ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು. ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷ ವೈ.ಕೆ.ಮುದ್ದುಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT