ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಡು ಬಿಸಿಲ ಮಧ್ಯೆ ಅಭ್ಯರ್ಥಿ ಮೆರವಣಿಗೆ, ನಾಮಪತ್ರ ಸಲ್ಲಿಕೆ

Last Updated 18 ಏಪ್ರಿಲ್ 2013, 10:26 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಪಟ್ಟಣದಲ್ಲಿ ಬುಧವಾರ ಸಲ್ಲಿಕೆಯಾದ 14 ನಾಮಪತ್ರಗಳ ಪೈಕಿ ಬಿಎಎಸ್‌ಪಿ ಹೊರತು ಪಡಿಸಿದಂತೆ ಉಳಿದ 11 ಮಂದಿ ಪಕ್ಷೇತರ ಅಭ್ಯರ್ಥಿಗಳು ಎನ್ನುವುದು ವಿಶೇಷ.

ಒಟ್ಟು 33 ಮಂದಿ ಅಭ್ಯರ್ಥಿಗಳು ನಾಮಪತ್ರಗಳು ಸಲ್ಲಿಸಿದ್ದಾರೆ.  13ರಂದು 12, 15ರಂದು 8, 16ರಂದು 1 ಸಲ್ಲಿಕೆಯಾಗಿದ್ದವು. 17ರಂದು 14 ನಾಮಪತ್ರಗಳು ಸಲ್ಲಿಕೆಯಾಗಿವೆ.

ಇವುಗಳಲ್ಲಿ ಬೆಂಗಳೂರಿನ ಎಸ್.ಎನ್.ಸುಬ್ಬಾರೆಡ್ಡಿ ಹೆಸರಿನಲ್ಲಿ 3, ಚಿಂತಾಮಣಿ ತಾಲ್ಲೂಕಿನ ಸಾಲಮಾಕಲಪಲ್ಲಿ ಗ್ರಾಮದ ಎಸ್.ಎನ್.ಸುಬ್ಬಾರೆಡ್ಡಿ ಹೆಸರಿನಲ್ಲಿ 2, ಜಿ.ವಿ.ಶ್ರೀರಾಮರೆಡ್ಡಿ-1, ಹರಿನಾಥರೆಡ್ಡಿ ಪತ್ನಿ ಶ್ಯಾಮಲ ಹೆಸರಿನಲ್ಲಿ 1, ಜಾವೇದ್ ಹೆಸರಿನಲ್ಲಿ 1 ನಾಮಪತ್ರಗಳು ಸಲ್ಲಿಸಲಾಗಿದೆ ಎಂದು ಚುನಾವಣೆ ಅಧಿಕಾರಿ ನಾಗರಾಜಶೆಟ್ಟಿ ತಿಳಿಸಿದ್ದಾರೆ.

ಎಸ್.ಎನ್.ಸುಬ್ಬಾರೆಡ್ಡಿ ನಾಮಪತ್ರ ಸಲ್ಲಿಕೆ: ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಎಸ್.ಎನ್.ಸುಬ್ಬಾರೆಡ್ಡಿ ಬುಧವಾರ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದರು.

ಇದಕ್ಕೂ ಮುನ್ನ ಪಟ್ಟಣದ ನ್ಯಾಷನಲ್ ಕಾಲೇಜಿನಿಂದ ಹೊರಟ ಸಾವಿರಾರು ಬೆಂಬಲಿಗರು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮೆರವಣಿಗೆ ನಡೆಸಿದರು. ದಾರಿಯುದ್ದಕ್ಕೂ ಪಟಾಕಿ ಸಿಡಿಸಿದರು. ಬಾಗೇಪಲ್ಲಿ ಹಾಗೂ ಗುಡಿಬಂಡೆ ತಾಲ್ಲೂಕಿನ ವಿವಿಧ ಗ್ರಾಮೀಣ ಪ್ರದೇಶದ ಬೆಂಬಲಿಗರು ಬಾವುಟಗಳು ಹಿಡಿದು ಮೆರವಣಿಗೆಯಲ್ಲಿ ಸಂಚರಿಸಿದರು. ಸುಡು ಬಿಸಿಲಿಗೆ ಬಾವುಟಗಳು ತಲೆಗೆ ರುಮಾಲಿನಂತೆ ಸುತ್ತಿಕೊಂಡಿದ್ದರು. ನಂತರ ಪತ್ನಿ ಶೀಲಾ, ಮುಖಂಡರಾದ ಚಿಕ್ಕನರಸಿಂಹಯ್ಯ, ಶ್ರೀನಿವಾಸರೆಡ್ಡಿ, ನಾರಾಯಣಸ್ವಾಮಿ, ಅಮರನಾಥರೆಡ್ಡಿ ಜತೆ ತೆರಳಿ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.

ಗುಂಪುಗಳನ್ನು ಚದುರಿಸಲು ಸಿಆರ್‌ಪಿ ಯೋಧರು ಹಾಗೂ ಪೊಲೀಸರು ಲಾಠಿ ಬೀಸಿ ಗುಂಪುಗಳನ್ನು ಚದುರಿಸಿದರು. ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀನಿವಾಸಮೂರ್ತಿ ಹಾಗೂ ಶಿವಕುಮಾರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಇತ್ತು.

ನಂತರ ನಡೆದ ಸಭೆಯಲ್ಲಿ ಮಾತನಾಡಿದ ಸುಬ್ಬಾರೆಡ್ಡಿ `ತೀರಾ ಹಿಂದುಳಿದ ಕ್ಷೇತ್ರದಲ್ಲಿ ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ಹಾಲಿ, ಮಾಜಿ ಶಾಸಕರು, ಸಂಸದರು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಮುಖಂಡರಾದ ಗೂಳೂರು ರಮೇಶ್ ಬಾಬು, ಪಿಎಲ್‌ಡಿ ಬ್ಯಾಂಕು ಅಧ್ಯಕ್ಷ ನರಸಿಂಹಪ್ಪ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಅಶ್ವತ್ಥಪ್ಪ, ರಾಮಾಂಜಿನೇಯರೆಡ್ಡಿ, ಲಕ್ಷ್ಮೀನಾರಾಯಣ, ಕೃಷ್ಣೇಗೌಡ, ಪಿ.ಆರ್.ಚಲಂ, ನಾಗರಾಜು, ದ್ವಾರಕೀನಾಯ್ಡು, ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್, ಮುನಿಸ್ವಾಮಿ, ಬಿ.ವಿ.ವೆಂಕಟರವಣ, ಲಕ್ಷ್ಮೀನಾರಾಯಣರೆಡ್ಡಿ, ಆ.ನ.ಮೂರ್ತಿ, ಕರವೇ ಚಂದ್ರಶೇಖರ್ ಇದ್ದರು.

ಶಿಡ್ಲಘಟ್ಟ: 12 ನಾಮಪತ್ರ
ಶಿಡ್ಲಘಟ್ಟ: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬುಧವಾರ ಕಡೆಯ ದಿನವಾಗಿದ್ದು ಕಾಂಗ್ರೆಸ್, ಬಿಜೆಪಿ, ಬಿಎಸ್‌ಪಿ, ಜೆಡಿಯು ಹಾಗೂ ಪಕ್ಷೇತರರು ಸೇರಿದಂತೆ 12 ನಾಮಪತ್ರಗಳು ಸಲ್ಲಿಕೆಯಾದವು. ಒಟ್ಟಾರೆಯಾಗಿ ಸಲ್ಲಿಕೆಯಾದ ನಾಮಪತ್ರಗಳು 19ಕ್ಕೆ ಏರಿವೆ.

ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರೊಂದಿಗೆ ಪಟ್ಟಣದ ಬಸ್‌ನಿಲ್ದಾಣದ ಬಳಿಯಿಂದ ಮೆರವಣಿಗೆಯಲ್ಲಿ  ವಿ.ಮುನಿಯಪ್ಪ ಆಗಮಿಸಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸಿದರು. ಕಾಂಗ್ರೆಸ್‌ನ ವಿ.ಮುನಿಯಪ್ಪ ಪರ ಸೂಚಕರಾಗಿ ಅವರ ಪುತ್ರ ಎಂ.ಶಶಿಧರ್ ನಾಮಪತ್ರ ಸಲ್ಲಿಸಿದರು.

ಬಿಜೆಪಿ ಪಕ್ಷದಿಂದ ಜೆ.ವಿ.ಸದಾಶಿವ ನಾಮಪತ್ರ ಸಲ್ಲಿಸಿದರು. ಜೆಡಿಎಸ್ ಪಕ್ಷದಿಂದ ಎಂ.ರಾಜಣ್ಣ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದರು. ಬಿಎಸ್‌ಪಿ ಪಕ್ಷದಿಂದ ಧನರಾಜ್ ನಾಮಪತ್ರವನ್ನು ಸಲ್ಲಿಸಿದರು. ಜೆಡಿಯು ಪಕ್ಷದಿಂದ ಶಿಡ್ಲಘಟ್ಟದ ಸಾದಿಕ್‌ಪಾಷಾ ಎರಡನೇ ಬಾರಿ ನಾಮಪತ್ರವನ್ನು ಸಲ್ಲಿಸಿದರು. ಕೆಜೆಪಿ ಅಭ್ಯರ್ಥಿ ಪರ ಸೂಚಕರಾಗಿ ನಂದೀಶ್ ಸಹ 2ನೇ ಬಾರಿ ನಾಮಪತ್ರ ಸಲ್ಲಿಸಿದರು. ಪಕ್ಷೇತರರಾಗಿ ಕೊತ್ತನೂರು ಕೆ.ಕೆಂಪಮ್ಮ, ಕೊತ್ತನೂರು ತೇಜಸ್ವರೂಪರೆಡ್ಡಿ, ವೀರಾಪುರ ವಿ.ಮುನಿಯಪ್ಪ, ಬೈರಗಾನಹಳ್ಳಿ ಗೋವಿಂದಪ್ಪ ಮತ್ತು ಗೆಜ್ಜಿಗಾನಹಳ್ಳಿ ಜಿ.ಎ.ರಾಜಣ್ಣ ನಾಮಪತ್ರ ಸಲ್ಲಿಸಿದರು.

ಮತದಾರರಲ್ಲಿ ಗೊಂದಲ ಉಂಟುಮಾಡಲು ಕಾಂಗ್ರೆಸ್‌ನ ವಿ.ಮುನಿಯಪ್ಪನರವರ ಹೆಸರನ್ನೇ ಹೋಲುವ ವೀರಾಪುರದ ನಿವಾಸಿ ವಿ.ಮುನಿಯಪ್ಪ ಎಂಬುವವರು ಹಾಗೂ ಜೆ.ಡಿ.ಎಸ್ ಅಭ್ಯರ್ಥಿ ರಾಜಣ್ಣರವರ ಹೆಸರನ್ನು ಹೋಲುವ ಜಿ.ಎ.ರಾಜಣ್ಣ  ಎಂಬುವವರು  ಪಕ್ಷೇತರರಾಗಿ ತಮ್ಮ ನಾಮಪತ್ರಗಳನ್ನು ಸಲ್ಲಿಸಿರುವುದು ವಿಶೇಷವಾಗಿತ್ತು.

ಕರ್ತವ್ಯಕ್ಕೆ ಜಮ್ಮು ಅಧಿಕಾರಿ
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಚುನಾವಣೆ ವೀಕ್ಷಕರನ್ನಾಗಿ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಗೃಹ ಇಲಾಖೆ  ಹಿರಿಯ ಅಧಿಕಾರಿ ಸೋನಿಯಾ ಯಂಗ್ ಗೋಲ್ಡ್  ಅವರನ್ನು ಚುನಾವಣಾ ಆಯೋಗ ನೇಮಕ ಮಾಡಿದೆ. ಬುಧವಾರ ಅಧಿಕಾರ ಸ್ವೀಕರಿಸಿ, ಕರ್ತವ್ಯ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT