ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುದೀರ್ಘ ಚರ್ಚಾಗೋಷ್ಠಿ: ಗಿನ್ನಿಸ್ ದಾಖಲೆ

Last Updated 14 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಕಠ್ಮಂಡು (ಪಿಟಿಐ): ನೇಪಾಳದ ಟಿವಿ ವಾಹಿನಿಯೊಂದರ ನಿರೂಪಕರು 62 ತಾಸುಗಳ ಕಾಲ ಚರ್ಚಾಗೋಷ್ಠಿ ನಡೆಸಿ ಗಿನ್ನಿಸ್ ದಾಖಲೆ ಸೃಷ್ಟಿಸಿದಾರೆ. ವಿಶ್ವದಲ್ಲಿ ಇಷ್ಟು ಸುದೀರ್ಘ ಕಾಲ ಚರ್ಚಾಗೋಷ್ಠಿ ಹಿಂದೆಂದೂ ನಡೆದಿರಲಿಲ್ಲ ಎಂದು ಕಾರ್ಯಕ್ರಮದ ಆಯೋಜಕರು ಭಾನುವಾರ ಹೇಳಿದ್ದಾರೆ.

ಅಮೆರಿಕದಲ್ಲಿ ಒಂದು ದಶಕದಿಂದ ನೆಲೆಸಿರುವ ರಾಬಿ ಲಮಿಚ್ಚಾನೆ ಅವರು `ಬುದ್ಧ ಹುಟ್ಟಿದ್ದು ನೇಪಾಳದಲ್ಲಿ' ಎಂಬ ಚರ್ಚಾಗೋಷ್ಠಿಯನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮವು ನೇಪಾಳಿ ಭಾಷೆಯಲ್ಲಿದ್ದು, ಇಂಗ್ಲಿಷ್ ಅಡಿ ಟಿಪ್ಪಣಿಯೊಂದಿಗೆ `ನ್ಯೂಸ್24 ಸ್ಟುಡಿಯೊ' ವಾಹಿನಿ ಮತ್ತು ಅದರ ವೆಬ್‌ಸೈಟ್‌ಗಳಲ್ಲಿ 62 ತಾಸು 12 ನಿಮಿಷಗಳ ಕಾಲ ಪ್ರಸಾರವಾಗಿದೆ.

ಈ ಕಾರ್ಯಕ್ರಮವು ಈ ಹಿಂದಿನ ಗಿನ್ನಿಸ್ ವಿಶ್ವದಾಖಲೆಯನ್ನು ಅಳಿಸಿ ಹಾಕಿದೆ. ಉಕ್ರೇನ್‌ನ ನಿರೂಪಕರಿಬ್ಬರು 2011ರಲ್ಲಿ 52 ತಾಸುಗಳ ಕಾಲ ನಡೆಸಿಕೊಟ್ಟಿದ್ದು ಗಿನ್ನಿಸ್ ವಿಶ್ವದಾಖಲೆಯಲ್ಲಿ ದಾಖಲಾಗಿತ್ತು. ಲಮಿಚ್ಚಾನೆ ಅವರು ನಡೆಸಿಕೊಟ್ಟ ಚರ್ಚಾಗೋಷ್ಠಿಯಲ್ಲಿ 100ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT