ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಧಾರಿತ ಮಿಗ್-29 ಯಶಸ್ವಿ ಪರೀಕ್ಷೆ

Last Updated 8 ಫೆಬ್ರುವರಿ 2011, 16:45 IST
ಅಕ್ಷರ ಗಾತ್ರ

ಮಾಸ್ಕೊ (ಪಿಟಿಐ): ಭಾರತೀಯ ವಾಯುಪಡೆಯ ಸುಧಾರಿತ  ಮಿಗ್-29 ಯುದ್ಧವಿಮಾನದ ಪರೀಕ್ಷಾರ್ಥ ಹಾರಾಟ ಇಲ್ಲಿನ ಝುಕೋವ್‌ಸ್ಕಿ ವಾಯುನೆಲೆಯಲ್ಲಿ ಯಶಸ್ವಿಯಾಗಿ ನಡೆದಿದೆ.
ವಿಮಾನದ ತಯಾರಕ ಸಂಸ್ಥೆಯಾದ ರಷ್ಯದ ಆರ್‌ಎಸಿ ಮಿಗ್ ಕಾರ್ಪೊರೇಷನ್  ಈ ಪ್ರಥಮ ಹಾರಾಟವನ್ನು ನಡೆಸಿ ಯಶಸ್ವಿಯಾಗಿದೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ. ಕಣ್ಣಿಗೆ ಕಾಣಿಸದಷ್ಟು ದೂರದಲ್ಲಿರುವ ವೈರಿಗಳನ್ನು ಗುರುತಿಸುವಂತಹ ಅತ್ಯಾಧುನಿಕ ಫಜಾಟ್ರಾನ್ ಝುಕ್-ಎಂ ರಾಡಾರ್ ಅಳವಡಿಕೆ ಸಹಿತ ಯುದ್ಧವಿಮಾನದಲ್ಲಿ ಸುಧಾರಣೆ ತರಲಾಗಿದೆ. ಒಟ್ಟು 69 ಮಿಗ್-29 ವಿಮಾನಗಳನ್ನು 900 ದಶಲಕ್ಷ ಡಾಲರ್ ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲಾಗುತ್ತಿದ್ದು, ಆರು ಯುದ್ಧವಿಮಾನಗಳನ್ನು ರಷ್ಯದಲ್ಲಿ ಮೇಲ್ದರ್ಜೆಗೆ ಏರಿಸಿದರೆ, ಉಳಿದವುಗಳನ್ನು ಭಾರತದಲ್ಲಿ ಎಚ್‌ಎಎಲ್ ಮೇಲ್ದರ್ಜೆಗೆ ಏರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT