ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುನಿತಾಗೆ ಐಸ್‌ಕ್ರೀಂ ಒಯ್ದ ನೌಕೆ..!

Last Updated 8 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಹ್ಯೂಸ್ಟನ್(ಪಿಟಿಐ): ಭಾರತೀಯ ಸಂಜಾತ ಅಮೆರಿಕ ಗಗನಯಾತ್ರಿ ಸುನೀತಾ ವಿಲಿಯಮ್ಸ ಸೇರಿದಂತೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್) ಇರುವ ಮೂವರು ಬಾಹ್ಯಾಕಾಶ ನಿವಾಸಿಗಳಿಗೆ ಈಗ ಹಬ್ಬ...!

`ಐಎಸ್‌ಎಸ್~ಗೆ ತೆರಳಿರುವ ಮೊದಲ ವಾಣಿಜ್ಯ ನೌಕೆ `ಡ್ರಾಗನ್~ ಬಾಹ್ಯಾಕಾಶ ನಿಲ್ದಾಣಕ್ಕೆ ಕೇವಲ ವೈಜ್ಞಾನಿಕ ಉಪಕರಣಗಳನ್ನು ಹೊತ್ತೊಯ್ದಿಲ್ಲ. ಗಗನಯಾತ್ರಿಗಳಿಗಾಗಿ ವಿಶೇಷ  ಐಸ್‌ಕ್ರೀಂ ಕೋನ್‌ಗಳನ್ನು ಸಹ ಅದು ಕೊಂಡೊಯ್ದಿದೆ.

`ಸ್ಪೇಸ್ ಎಕ್ಸ್~ ಕಂಪೆನಿ ಹಾಗೂ `ನಾಸಾ~ ನಡುವಿನ ಒಪ್ಪಂದದಂತೆ ಭಾನುವಾರ ರಾತ್ರಿ  `ಡ್ರಾಗನ್~ ಅನ್ನು ಕಕ್ಷೆಗೆ ಹಾರಿಬಿಡಲಾಯಿತು.`ಐಎಸ್‌ಎಸ್~ ನಿವಾಸಿಗಳು ವಿಡಿಯೋ ದೃಶ್ಯಾವಳಿಯ ಮೂಲಕ `ಡ್ರಾಗನ್~ ಉಡಾವಣೆಯನ್ನು ನೇರವಾಗಿ ವೀಕ್ಷಿಸಿದರು. ಆ ಸಮಯದಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಾಸ್ಮೇನಿಯಾದ ಮೇಲೆ 362 ಮೈಲಿಗಳ ಎತ್ತರದಲ್ಲಿ ತೇಲಾಡುತ್ತಿತ್ತು.

450 ಕೆ.ಜಿ. ತೂಕದ ಸಾಮಗ್ರಿಗಳನ್ನು ಹೊತ್ತಿರುವ `ಡ್ರಾಗನ್~ ಪ್ರಸ್ತುತ `ಐಎಸ್‌ಎಸ್~ನತ್ತ ಧಾವಿಸುತ್ತಿದ್ದು, ಶೀಘ್ರವೇ ಅದರ ಮೇಲೆ ಇಳಿಯಲಿದೆ. `ಸ್ಪೇಸ್ ಎಕ್ಸ್~ ಕಂಪೆನಿ ಹಾಗೂ `ನಾಸಾ~ ನಡುವೆ 2008ರಲ್ಲಿ ಆದ ಒಪ್ಪಂದದಂತೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ವೈಜ್ಞಾನಿಕ ಸಲಕರಣೆ, ಸಾಮಗ್ರಿಗಳನ್ನು ಕಳುಹಿಸಲು 12 ಅಂತರಿಕ್ಷ ನೌಕೆಗಳನ್ನು ಕಳುಹಿಸಲಾಗುತ್ತದೆ.

ಡ್ರಾಗನ್ ಈ ಸರಣಿಯಲ್ಲಿ ಮೊದಲನೆಯದಾಗಿದೆ. ಇಂತಹ ಪ್ರತಿ ಯಾನಕ್ಕಾಗಿ ನಾಸಾ `ಸ್ಪೇಸ್ ಎಕ್ಸ್~ಗೆ 160 ಕೋಟಿ ಡಾಲರ್ ಪಾವತಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT