ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಪ್ರಭಾತದ ದಿಕ್ಕೇ ದಿಕ್ಕು ತಪ್ಪಿದೆ

Last Updated 4 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಕಡೂರಿನ ಶಾರದಮ್ಮ ಕೆ.ಬಿ. ಅವರ ಪತ್ರಕ್ಕೊಂದು (ವಾ.ವಾ. ಡಿ.3) ಪೂರಕ ಪ್ರತಿಕ್ರಿಯೆ. ಪ್ರಕೃತಿ ವಿಕೋಪ (ಪ್ರಳಯಗಿಳಯ ಇತ್ಯಾದಿ), ರಾಜ ಕಾರಣದ ಆಗುಹೋಗುಗಳ ಬಗ್ಗೆ ಭವಿಷ್ಯ ಹೇಳುವ ಸ್ವಾಮಿಗಳು ಅರ್ಥಾತ್ ಭವಿಷ್ಯಕಾರರ, ಕೆಲವು ಮಾಧ್ಯಮಗಳ ದಿಕ್ಕು ತಪ್ಪಿಸುವ ವಿನೂತನ ಹೇಳಿಕೆ -ವರಸೆ -ಪ್ರಕಟಣೆ- ಪ್ರಸಾರಗಳನ್ನು ನೋಡಿದರೆ, ನನಗೆ ಅಂಬರೀಷ್‌ ಅಭಿನಯದ ‘ನ್ಯೂಡೆಲ್ಲಿ’ ಚಲನಚಿತ್ರ ನೆನಪಿಗೆ ಬರುತ್ತದೆ.

ಇಂಥ ಅರಾಜಕ, ಅವಾಸ್ತವ, ಅವೈಜ್ಞಾನಿಕ ಭವಿಷ್ಯ- ವಿಶ್ಲೇಷಣೆಗಳನ್ನು ನಂಬುವ ಜನರ ಬಗ್ಗೆಯೂ ಅನುಕಂಪ ಹುಟ್ಟುತ್ತದೆ. ಇಂಥ ದ್ದನ್ನೆಲ್ಲ ಹುಟ್ಟುಹಾಕುತ್ತಲೇ ಅಂಥದ್ದರ ಕಾರ್ಯಾ ಚರಣೆಯಲ್ಲೂ ಈ ಇವರೆಲ್ಲ ಭಾಗಿಯಾಗುತ್ತಿ ದ್ದಾರೋ ಎಂಬುದು ನನ್ನ ಅನುಮಾನ.

ಆಧುನಿಕತೆ ಬೆಳೆದಂತೆ, ಸಾಕ್ಷರತೆ ಹೆಚ್ಚಾದಂತೆ ಇಂಥ ನಂಬುಗೆ ಗಳು ಮೇರೆ ಮೀರಿ ವಿಸ್ತರಿಸಿಕೊಳ್ಳುವುದನ್ನು ನೋಡಿ ದರೆ ಭವಿಷ್ಯದ ಬಗೆಗೆ ಭಯ ಹುಟ್ಟುತ್ತದೆ. ಇನ್ನು, ವಾಸ್ತು ಪುರಾಣಗಳಂತೂ ಕನ್ನಡದ ಯಾವ ಚಾನೆಲ್ ಒತ್ತಿದರೂ ಬೆಳಗಿನ ಲವಲವಿಕೆಯನ್ನೇ ನಾಶ ಮಾಡುತ್ತಿವೆ. ಸುಪ್ರಭಾತದ ದಿಕ್ಕೇ ದಿಕ್ಕು ತಪ್ಪಿದೆ.

ಒಂದು ಸುಂದರ ಬೆಳಗನ್ನು, ಒಂದು ನೆಮ್ಮದಿ ಯ ಇರುಳನ್ನೂ ಚೆಂದ ಕಳೆಯಲು ಬಿಡದ ಈ ಹೊಸ ಪರಂಪರೆ ಬಹುಜನರ ಸಮಾಧಾನ- ಸುಖವನ್ನೇ ತಿಂದು ಹಾಕಿರುವುದು ದುರಂತದ ಸೂಚನೆಯೇ ಎಂದು ದಿಗಿಲಾಗುತ್ತಿದೆ.

ಇಂಥದನ್ನು ನಿರ್ಮೂಲನ ಮಾಡಬೇಕೆಂಬ ವಾಸ್ತವ ವಾದಿ, ಪ್ರಗತಿಪರ ಚಿಂತಕರ, ಬರಹಗಾರರ ಕೂಗು ಅರಣ್ಯ ರೋದನ ವಾಗಿಯೇ ಉಳಿದಿದೆ. ಇದನ್ನು ಮಟ್ಟ ಹಾಕಲು ಮತ್ತೆ ಹೊಸ ನೆತ್ತರ ಗುಂಪೊಂದು ಸಜ್ಜಾಗಬೇಕಾಗಿ ರುವುದು ಇಂದಿನ ತುರ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT