ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಪ್ರೀಂ ನಿಲುವಿಗೆ ಬಿಜೆಪಿ ಸಂತಸ

Last Updated 12 ಸೆಪ್ಟೆಂಬರ್ 2011, 18:45 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ):  2002ರ ಗುಜರಾತ್ ಹಿಂಸಾಚಾರ ಘಟನೆಯಲ್ಲಿ ಮೋದಿ ಸರ್ಕಾರದ ನಿರ್ಲಕ್ಷ್ಯದ ಕುರಿತು ಮ್ಯಾಜಿಸ್ಟ್ರೇಟ್ ನ್ಯಾಯಾಲಯವೇ ತೀರ್ಮಾನ ಕೈಗೊಳ್ಳಲಿ ಎನ್ನುವ ಸುಪ್ರೀಂ ಕೋರ್ಟ್‌ನ ಸೂಚನೆ ಬಿಜೆಪಿಗೆ ಸಮಾಧಾನ ತಂದಿದೆ ಎಂದು ಪಕ್ಷದ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಹೇಳಿದ್ದಾರೆ.

ದೇವರು ದೊಡ್ಡವನು- ಮೋದಿ (ಅಹಮದಾಬಾದ್ ವರದಿ): ಸುಪ್ರೀಂ ಕೋರ್ಟಿನ ನಿಲುವಿನಿಂದ ತಮಗೆ ನಿರಾಳವಾಗಿದೆ. ದೇವರು ದೊಡ್ಡವನು ಎಂದು ಮುಖ್ಯಮಂತ್ರಿ ನರೇಂದ್ರ ಮೋದಿ ಟ್ವಿಟರ್‌ನಲ್ಲಿ ಬರೆದಿದ್ದಾರೆ.

`ಇತ್ಯರ್ಥಕ್ಕೆ ಮುನ್ನವೇ ಬಿಜೆಪಿ ಪ್ರತಿಕ್ರಿಯೆ~ (ನವದೆಹಲಿ ವರದಿ): ಗುಜರಾತ್ ಗಲಭೆ ಪ್ರಕರಣದಲ್ಲಿ  ಸುಪ್ರೀಂ ಕೋರ್ಟಿನ ನಿಲುವಿನಿಂದ ಪ್ರಕರಣ ಪೂರ್ಣ ಇತ್ಯರ್ಥವಾಗಿಲ್ಲ. ಆದರೆ ಬಿಜೆಪಿ ತಮ್ಮ ಜಯವೆಂದು ಪ್ರತಿಕ್ರಿಯೆ ನೀಡುತ್ತಿದೆ ಎಂದು ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.

`ಮೋದಿ ನಿರ್ದೋಷಿ ಎಂದಿಲ್ಲ~ (ನವದೆಹಲಿ ವರದಿ): ಗುಜರಾತ್ ಗಲಭೆ ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯವೇ ತೀರ್ಮಾನಿಸಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದ ಮಾತ್ರಕ್ಕೆ ಮುಖ್ಯಮಂತ್ರಿ ನರೇಂದ್ರ ಮೋದಿ ನಿರ್ದೋಷಿ ಎಂದು ಹೇಳಿಲ್ಲ ಎಂದು ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದೆ.

ನಿರಾಸೆಯಾಗಿದೆ- ಝಾಕಿಯಾ (ಅಹಮದಾಬಾದ್ ವರದಿ): ಗಲಭೆ ನಿಯಂತ್ರಿಸಲು ನರೇಂದ್ರ ಮೋದಿ ವಿಫಲವಾದ ಘಟನೆಯ ಬಗ್ಗೆ ವಿಚಾರಣೆ ನಡೆಸಿ ತೀರ್ಮಾನಿಸಲು ಮ್ಯಾಜಿಸ್ಟ್ರೇಟ್ ಕೋರ್ಟ್ ವಹಿಸಿರುವ ಕ್ರಮದಿಂದ ತಮಗೆ ನಿರಾಸೆಯಾಗಿದೆ ಎಂದು ಈ ಬಗ್ಗೆ ಅರ್ಜಿ ಸಲ್ಲಿಸಿದ್ದ ಝಾಕಿಯಾ ಜಾಫ್ರಿ ಹೇಳಿದ್ದಾರೆ.
ಆದರೂ ತಮಗೆ ಸುಪ್ರೀಂ ಕೋರ್ಟ್ ಮೇಲೆ ನಂಬಿಕೆ ಇದ್ದು, ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT