ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಮಲತಾ ಚಿನ್ನದಾಸೆ

Last Updated 21 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನಟಿ ಸುಮಲತಾ ಅಂಬರೀಷ್ ಅವರಿಗೆ ಚಿನ್ನ ಕೇವಲ ಆಭರಣವಷ್ಟೇ ಅಲ್ಲ, ಅದು ಸಂಸ್ಕೃತಿಯ ಲಾಂಛನ. ಹೆಣ್ಣಿನ ಭಾವನೆಗಳನ್ನು ಜೀವಂತವಾಗಿ ಇರಿಸುವ ನೆನಪುಗಳ ರಾಯಭಾರಿ. ಕಷ್ಟಕ್ಕಾಗುವ ಸ್ನೇಹಿತ. ಹೆಣ್ಣಿನ ಅಂದವನ್ನು ಇಮ್ಮಡಿಗೊಳಿಸುವ ಜಾದೂಗಾರ.

“ಹೋದಲ್ಲೆಲ್ಲಾ ಚಿನ್ನ ಖರೀದಿಸುವ ಆಭರಣ ಪ್ರಿಯೆ ನಾನು. ಅದರಲ್ಲೂ, `ಜ್ಯುವೆಲ್ಸ್ ಆಫ್ ಇಂಡಿಯಾ~ ಏರ್ಪಡಿಸುವ ಪ್ರದರ್ಶನವೆಂದರೆ ನನಗೆ ಅಚ್ಚುಮೆಚ್ಚು” ಎನ್ನುವ ಸುಮಲತಾ ಈ ಬಾರಿ ನಡೆಯಲಿರುವ `ಜ್ಯುವೆಲ್ಸ್ ಆಫ್ ಇಂಡಿಯಾ~ ಪ್ರದರ್ಶನದ ರಾಯಭಾರಿ. ನಟನೆ ಹಾಗೂ ಸಹಜ ಚೆಲುವಿನಿಂದಲೇ ಪ್ರೇಕ್ಷಕರನ್ನು ಮೋಡಿ ಮಾಡಿದ ಮುದ್ದು ಮೊಗದ ನಟಿ ಸುಮಲತಾ ಅವರು `ಮೆಟ್ರೋ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

`ಜ್ಯುವೆಲ್ಸ್ ಆಫ್ ಇಂಡಿಯಾ~ ರಾಯಭಾರಿ ಆಗಬೇಕು ಅಂತ ಅನಿಸಿದ್ದು...

ಹೈದರಾಬಾದ್, ಚೆನ್ನೈ ಹೀಗೆ ದೇಶದ ಹಲವೆಡೆ ನಡೆವ ಆಭರಣ ಪ್ರದರ್ಶನವನ್ನು ನಾನು ನೋಡಿದ್ದೇನೆ. ಆದರೆ, ಜ್ಯುವೆಲ್ಸ್ ಆಫ್ ಇಂಡಿಯಾ ಪ್ರದರ್ಶನ ಮಾಡಿದಷ್ಟು ಮೋಡಿಯನ್ನು ಇತರೆ ಯಾವ ಮೇಳಗಳೂ ಮಾಡಲಿಲ್ಲ.

ಜ್ಯುವೆಲ್ಸ್ ಆಫ್ ಇಂಡಿಯಾ ಏರ್ಪಡಿಸುತ್ತಿದ್ದ ಮೊದಲ ಪ್ರದರ್ಶನದಿಂದಲೂ ನೋಡುತ್ತಾ ಬಂದಿದ್ದೇನೆ. ಪ್ರದರ್ಶನದಲ್ಲಿ ನೋಡಿದ ಆಭರಣಗಳು, ಅದರ ವಿನ್ಯಾಸ ನನಗೆ ತುಂಬಾ ಹಿಡಿಸುತ್ತಿತ್ತು. ಹಾಗಾಗಿ ರಾಯಭಾರಿಯಾಗಲು ಒಪ್ಪಿಕೊಂಡೆ. 
ರಾಯಭಾರಿ ಆದ ನಂತರ ಏನನ್ನಿಸುತ್ತಿದೆ...
(ನಗು) ಐ ಫೀಲ್ ಗುಡ್.

ಚಿನ್ನ ಅಂದರೆ...

ಭಾರತೀಯ ಪರಂಪರೆಯಲ್ಲಿ ಆಭರಣಗಳಿಗೆ ವಿಶೇಷ ಸ್ಥಾನವಿದೆ. ಚಿನ್ನವನ್ನು ಲಕ್ಷ್ಮಿ ಎಂದು ಭಾವಿಸುವ ದೈವಿಕ ಮನೋಭಾವ ಇಂದಿಗೂ ಭಾರತೀಯ ಹೆಣ್ಣುಮಕ್ಕಳಲ್ಲಿ ಇದೆ. ನಮ್ಮಲ್ಲಿ ಆಭರಣವನ್ನು ಅಲಂಕಾರಕ್ಕಷ್ಟೆ ಬಳಸುವುದಿಲ್ಲ. ಮನೆಯಲ್ಲಿ ಚಿನ್ನವಿದ್ದರೆ ಕಷ್ಟ ಕಾಲದಲ್ಲಿ ನೆರವಾಗುತ್ತದೆ ಎಂಬ ಮುಂದಾಲೋಚನೆಯಿಂದಲೂ ಮಹಿಳೆಯರು ಚಿನ್ನ ಖರೀದಿ ಮಾಡುತ್ತಾರೆ.

ಪ್ರದರ್ಶನದ ಬಗ್ಗೆ...

ಆಧುನಿಕ ಮಹಿಳೆಯರು ಉತ್ಕೃಷ್ಟವಾಗಿರುವ ಚಿನ್ನ ಖರೀದಿ ಮಾಡಲು ಬಯಸುತ್ತಾರೆ. ಆಕೆಗೆ ಇಷ್ಟವಾದ ಆಭರಣ ಒಂದೇ ಅಂಗಡಿಯಲ್ಲಿ ಸಿಗುವುದಿಲ್ಲ. ಆಗ ಮತ್ತೊಂದು ಮಳಿಗೆಗೆ ಎಡತಾಕಬೇಕು.

ಆದರೆ, ಈ ಪ್ರದರ್ಶನದಲ್ಲಿ ಒಂದೇ ಸೂರಿನಡಿಯಲ್ಲಿ ನೂರಕ್ಕೂ ಅಧಿಕ ಬಗೆಯ ವಿನ್ಯಾಸದ ಆಭರಣಗಳು ಸಿಗಲಿವೆ. ಮಹಿಳೆಯರು ಆಭರಣ ಕೊಳ್ಳುವಾಗ ಯಾವ ವಿನ್ಯಾಸ ಹೆಚ್ಚು ಆಕರ್ಷಕವಾಗಿದೆ ಎಂದು ಹೋಲಿಕೆ ಮಾಡಿಕೊಳ್ಳಬಹುದು.

ಚಿನ್ನಕ್ಕೂ ಹೆಣ್ಣಿಗೂ ಇರುವ ನಂಟು...

ಹೆಣ್ಣು ಹುಟ್ಟಿನಿಂದಲೇ ಚಿನ್ನದ ಒಡನಾಟದೊಂದಿಗೆ ಬದುಕು ಆರಂಭಿಸುತ್ತಾಳೆ. ಚಿನ್ನ ಸಂಸ್ಕೃತಿಯ ಪ್ರತೀಕ. ನಮ್ಮ ಹಿರಿಯರು ಹಾಕುತ್ತಿದ್ದ ಆಕರ್ಷಕ ವಿನ್ಯಾಸದ ಚಿನ್ನದ ಆಭರಣಗಳು ಕಾಲಾಂತರದಲ್ಲಿ ಕಿರಿಯರಿಗೆ ದೊರೆಯುತ್ತವೆ. ಹೀಗಾಗಿ ಚಿನ್ನದ ಮೂಲಕ ನಮ್ಮ ಚಿನ್ನದಂತಹ ನೆನಪುಗಳು ಮರುಕಳಿಸುತ್ತವೆ. ಪ್ರತಿ ಮಹಿಳೆ ಚಿನ್ನದ ವ್ಯಾಮೋಹಿ. ನಾನು ಅದಕ್ಕೆ ಹೊರತಾದವಳಲ್ಲ.

ನಿಮಗೆ ತುಂಬಾ ಇಷ್ಟವಾದ ವಿನ್ಯಾಸ...


ಸಾಂಪ್ರದಾಯಿಕ ಆಭರಣಗಳು ತುಂಬಾ ಇಷ್ಟ. ನನ್ನಲ್ಲಿ ಇರುವ ಆಭರಣಗಳಲ್ಲಿ ಹೆಚ್ಚಿನವು ಇದೇ ಮಾದರಿಯವು. ನನ್ನ ಗೆಳತಿಯರು, ಸಂಬಂಧಿಕರು ನನ್ನ ಆಭರಣ ಸಂಗ್ರಹ ಅಭಿರುಚಿ ನೋಡಿ `ಎಲ್ಲಿ ಕೊಂಡುಕೊಂಡೆ~? ಎಂದು ಬೆರಗಿನಿಂದ ಕೇಳುತ್ತಾರೆ. ಹೋಲ್ಡಿಂಗ್ಸ್‌ನಲ್ಲಿ ರಾರಾಜಿಸುತ್ತಿರುವ ನವರತನ್ ಜ್ಯುವೆಲರ್ಸ್‌ನ ವಿನ್ಯಾಸದ ಬಗ್ಗೆ ಜನರಿಂದ ಮೆಚ್ಚುಗೆಯ ಮಾತುಗಳು ಕೇಳಿ ಬಂದಿವೆ.

ಯಾವ ಸಿನಿಮಾದಲ್ಲಿ ನಟಿಸುತ್ತಿದ್ದೀರಾ...


ವಿರಾಟ್

ನಿಮ್ಮ ಜೀವನದಲ್ಲಿ ಎದುರಾದ ಅತ್ಯಂತ ಕಠಿಣ ಸಮಯ...

ವಿಷ್ಣು ಸರ್ ನಮ್ಮಿಂದ ದೂರವಾದ ದಿನ. 

`ಜ್ಯುವೆಲ್ಸ್ ಆಫ್ ಇಂಡಿಯಾ~ ರಾಯಭಾರಿಯಾಗಿ ನಿಮ್ಮ  ಸಂದೇಶ...

ವೆರೈಟಿ ಇಷ್ಟಪಡುವ ಆಭರಣ ಪ್ರಿಯ ಮಹಿಳೆಯರಿಗೆ ಈ ಪ್ರದರ್ಶನ ತುಂಬಾ ಇಷ್ಟವಾಗುತ್ತದೆ. ಪ್ರದರ್ಶನದಲ್ಲಿ ಭಾಗವಹಿಸಿ ನಿಮ್ಮಿಷ್ಟದ ಆಭರಣಗಳನ್ನು ಕೊಳ್ಳಿ.
ಅಂದಹಾಗೆ, ಆಭರಣ ಪ್ರಿಯರಿಗೆ ದೇಶದ ಎಲ್ಲ ಬಗೆಯ ಆಭರಣ ಸಂಗ್ರಹವನ್ನು ಒಂದೇ ಸೂರಿನಡಿಯಲ್ಲಿ ದೊರಕಿಸಿಕೊಡುವ ಜ್ಯುವೆಲ್ಸ್ ಆಫ್ ಇಂಡಿಯಾ ಆಭರಣ ಪ್ರದರ್ಶನ ಇದೇ ಅ.27ರಿಂದ 29ರವರೆಗೆ ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಗ್ರೌಂಡ್‌ನಲ್ಲಿ ನಡೆಯಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT