ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಕ್ಷಿತ ಬ್ರೌಸಿಂಗ್‌ಗೆ `ಕೊಲ್ಯೂಷನ್'

Last Updated 30 ಜುಲೈ 2013, 19:59 IST
ಅಕ್ಷರ ಗಾತ್ರ

ಅಂತರ್ಜಾಲಕ್ಕೆ ಅಡಿ ಇಟ್ಟರೆ ಸಾಕು, ಅಲ್ಲಿ ನಿಮ್ಮ ಪ್ರತಿ ಹೆಜ್ಜೆಯನ್ನೂ ಎಣಿಸುವವರಿದ್ದಾರೆ. ನಿಮ್ಮ ಆಸಕ್ತಿ-ಅಭಿರುಚಿಗಳು, ನೀವು ಹೆಚ್ಚಾಗಿ ಜಾಲಾಡುವ ವಿಷಯಗಳು ಸೇರಿದಂತೆ ಅನೇಕ ಚಟುವಟಿಕೆಗಳ ಮೇಲೆ ನಿಗಾ ವಹಿಸುವವರಿದ್ದಾರೆ.  ನಿಮ್ಮ ಮುಂದಿನ ಪ್ರತಿ ಭೇಟಿಯಲ್ಲೂ ಅವರೂ ಇಣುಕುತ್ತಾರೆ. ಸರ್ಚ್ ಮಾಡುವ ನಿಮ್ಮ ಸ್ವಭಾವ ಅರಿತು ಅದನ್ನು ಜಾಹಿರಾತು ಉದ್ದೇಶಕ್ಕೆ ಬಳಸಿಕೊಳ್ಳುತ್ತಾರೆ. ಈ ಕುರಿತು ನಿಮಗೆ ಪುಟ್ಟ ಸುಳಿವು ಕೂಡ ಲಭಿಸುವುದಿಲ್ಲ. ಇದನ್ನು ತಡೆಯಲು ಮತ್ತು ಸುರಕ್ಷಿತ ಬ್ರೌಸಿಂಗ್‌ಗೆ `ಕೊಲ್ಯೂಷನ್' ಎಂಬ ಆ್ಯಪ್(ಬ್ರೌಸರ್ ಆ್ಯಡ್ ಆನ್) ಇದೆ.

ಸಾಮಾನ್ಯವಾಗಿ ಇಂಟರ್‌ನೆಟ್‌ನಲ್ಲಿ ಮಾಹಿತಿ ಅರಸುವ ಪ್ರತಿ ವ್ಯಕ್ತಿ ಇಂಟರ್ನೆಟ್ ಎಕ್ಸ್‌ಪ್ಲೊರರ್, ಮೊಜಿಲ್ಲಾ ಫೈರ್‌ಫಾಕ್ಸ್, ಕ್ರೋಮ್ ಅಥವಾ ಸಫಾರಿಯಂತಹ ಬ್ರೌಸರ್ ಬಳಸುತ್ತಾರೆ. ಆನ್‌ಲೈನ್ ಜಗತ್ತಿನ ಪ್ರವೇಶಕ್ಕಿರುವ ಹೆದ್ದಾರಿ ಈ ಬ್ರೌಸರ್. ಇಲ್ಲಿಂದಲೇ ಆರಂಭವಾಗುತ್ತದೆ ನಮ್ಮ ಮಾಹಿತಿ ಸೋರಿಕೆ ಪ್ರಕ್ರಿಯೆ.

ಉದಾಹರಣೆಗೆ ನೀವು ಅಂತರ್ಜಾಲದಲ್ಲಿ ಒಂದು ಕೈಗಡಿಯಾರ ಖರೀದಿಗೆ ಮುಂದಾಗುತ್ತೀರಿ ಎಂದಿಟ್ಟುಕೊಳ್ಳಿ. ಗೂಗಲ್, ಬಿಂಗ್‌ನಂತಹ ಯಾವುದೇ ಸರ್ಚ್ ಎಂಜಿನ್‌ಗಳ ಮೂಲಕ `ರಿಸ್ಟ್ ವಾಚ್'ಗೆ ಸಂಬಂಧಿಸಿದ ಮಾಹಿತಿ ಕಲೆ ಹಾಕುತ್ತಾ ಹೋಗುತ್ತೀರಿ. ಕೆಲವು ಮೈಕ್ರೊ ಸೆಕೆಂಡ್‌ಗಳಲ್ಲಿಯೇ ಇತರೆ ವೆಬ್‌ಸೈಟುಗಳು ನಿಮ್ಮ ಹುಡುಕಾಟದ ವಿವರಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತವೆ.

ನೀವು `ಸರ್ಚ್' ಅನ್ನು ಅಲ್ಲಿಗೇ ಸ್ಥಗಿತಗೊಳಿಸುತ್ತೀರಿ. ಆದರೆ, ಮುಂದೆ ಬೇರೆ ಯಾವುದೇ ಮಾಹಿತಿ ಹುಡುಕುವ ಸಂದರ್ಭದಲ್ಲಿ ಸಹ `ರಿಸ್ಟ್ ವಾಚ್'ಗೆ ಸಂಬಂಧಿಸಿದ ಜಾಹಿರಾತುಗಳು ನೀವು ಭೇಟಿ ನೀಡುವ ವೆಬ್‌ಸೈಟ್‌ನ ಎಡ-ಬಲಗಳಲ್ಲಿ ಪ್ರಕಟಗೊಳ್ಳುತ್ತಾ ಹೋಗುತ್ತವೆ. ಅಷ್ಟೇ ಅಲ್ಲ, ಮುಂದೆ ನೀವು ಯಾವ ಯಾವ ವೆಬ್‌ಸೈಟ್‌ಗೆ ಭೇಟಿ ನೀಡುವಿರೊ ಅಲ್ಲೆಲ್ಲಾ ನಿಮ್ಮ  ಹಿಂದೆ ಈ ಜಾಹಿರಾತುಗಳು ಹಿಂಬಾಲಿಸುತ್ತವೆ.
ಹೀಗೆ ವೆಬ್‌ಸೈಟ್‌ಗಳು ಕಲೆ ಹಾಕುವ ದತ್ತಾಂಶಗಳನ್ನು ಸಾಮಾನ್ಯವಾಗಿ ಸ್ಥಳ ಆಧಾರಿತ ಮತ್ತು ವ್ಯಕ್ತಿ ಆಧಾರಿತ ಜಾಹಿರಾತುಗಳಿಗಾಗಿ ಬಳಸಿಕೊಳ್ಳಲಾಗುತ್ತದೆ. ಈ ಪ್ರಕ್ರಿಯೆಯು ಬ್ರೌಸರ್‌ಗಳ ತೆರೆಯ ಹಿಂದೆ ಅತಿ ತೀವ್ರಗತಿಯಲ್ಲಿ ನಡೆಯುತ್ತಿರುತ್ತದೆ ಎಂಬುದನ್ನು ಗಮನಿಸಬೇಕು.

ಏನಿದು ಕೊಲ್ಯೂಷನ್?
ಬೇರೆ ಬೇರೆ ವೆಬ್‌ಸೈಟ್‌ಗಳು ನಮ್ಮ ಅಂತರ್ಜಾಲದ ಚಟುವಟಿಕೆ ಮೇಲೆ ನಿಗಾ ವಹಿಸುವುದನ್ನು ತಪ್ಪಿಸಬಹುದಾದ ಮತ್ತು ಅಂತಹ ಚಟುವಟಿಕೆಗಳನ್ನು ಬ್ಲ್ಯಾಕ್ ಕೂಡ ಮಾಡಬಹುದು. ಇದಕ್ಕೆ ಕೊಲ್ಯೂಷನ್ ಎನ್ನುತ್ತಾರೆ.

ಈ ತಂತ್ರಜ್ಞಾನವನ್ನು ಮೊದಲು `ಮೊಜಿಲ್ಲಾ ಫೈರ್‌ಫಾಕ್ಸ್' ಸಲುವಾಗಿ ಅಭಿವೃದ್ಧಿಪಡಿಸಲಾಗಿತ್ತು. ನಂತರ ಪೋರ್ಡ್ ಫೌಂಡೇಷನ್ ಸಹಯೋಗದಲ್ಲಿ `ಗೂಗಲ್ ಕ್ರೋಮ್' ಸಲುವಾಗಿ  `ಡಿಸ್ಕ್‌ನೆಕ್ಟ್ ಡಾಟ್ ಮಿ' ಎನ್ನುವ ತಂಡ ಇದನ್ನು ಅಭಿವೃದ್ಧಿಪಡಿಸಿದೆ. ಸದ್ಯ ಇದು ಕ್ರೋಮ್ ಸ್ಟೋರ್‌ನಲ್ಲಿ ಸಹ ಉಚಿತವಾಗಿ ಲಭ್ಯವಿದೆ.

ಬಳಕೆ ವಿಧಾನ
ಗೂಗಲ್ ಕ್ರೋಮ್ ಓಪನ್ ಮಾಡಿನಿಮ್ಮ ಇಷ್ಟದ ಸರ್ಚ್ ಎಂಜಿನ್ ಮೂಲಕ ಇCollusion for Chrome ಎಂದು ಟೈಪ್ ಮಾಡಿ. ಸರ್ಚ್‌ನ ಮೊದಲ ಲಿಂಕ್ ಬಳಸಿಕೊಳ್ಳಿ ಇಲ್ಲವೇ ನೇರವಾಗಿ ಅಡ್ರೆಸ್ ಬಾರ್‌ನಲ್ಲಿ https://chrome.google.com/webstore   ಎಂದು ಟೈಪ್ ಮಾಡಿ.  ಕ್ರೋಮ್ ವೆಬ್ ಸ್ಟೋರ್‌ನ ಬಲಭಾಗದ ಮೇಲಿರುವ ಸರ್ಚ್‌ನಲ್ಲಿ Collusion ಎಂದು ಟೈಪ್ ಮಾಡಿ.  Collusion for chrome  ಎಂದು ನಿಮ್ಮ ಕಂಪ್ಯೂಟರ್ ಸ್ಕ್ರೀನ್ ಮೇಲೆ ಸರ್ಚ್ ರಿಸಲ್ಟ್ ಪ್ರದರ್ಶಿತವಾಗುತ್ತದೆ. ನಂತರ ಅ ಠಿಟ ಇಜ್ಟಟಞಛಿ ಎನ್ನುವುದರ ಮೇಲೆ ಕ್ಲಿಕ್ ಮಾಡಿ. ಕೆಲವೇ ಸೆಕೆಂಡುಗಳಲ್ಲಿ ನಿಮ್ಮ (ಇಂಟರ್ನೆಟ್ ಸ್ಪೀಡ್‌ಗೆ ಅನುಗುಣವಾಗಿ) ಬ್ರೌಸರ್‌ಗೆ ಈ `ಆ್ಯಡ್ ಆನ್' ಇನ್‌ಸ್ಟಾಲ್ ಆಗುತ್ತದೆ.

ನಂತರ ನಿಮ್ಮ ಬ್ರೌಸರ್ ಅಡ್ರೆಸ್‌ಬಾರ್‌ನ ಕೊನೆಯಲ್ಲಿ(ಬಲಭಾಗದಲ್ಲಿ) ಮೂರು ಚುಕ್ಕೆಗಳ ಒಂದು ಸಣ್ಣ ಐಕಾನ್ ಸೃಷ್ಟಿಯಾಗುತ್ತದೆ. ಇದರ ಮೇಲೆ ಕ್ಲಿಕ್ ಮಾಡುವುದರ ಮೂಲಕ ನಿಮ್ಮನ್ನು ಯಾರು ಟ್ರ್ಯಾಕ್ ಮಾಡುತ್ತಿದ್ದಾರೆ ಎನ್ನುವುದನ್ನು ಗಮನಿಸಬಹುದು. ಇದರಿಂದಾಗಿ ಒಬ್ಬ ನೆಟಿಜನ್ ತನ್ನ ನೆಟ್ ಚಟುವಟಿಕೆಗಳನ್ನು ಯಾವ ಯಾವ ವೆಬ್‌ಸೈಟ್‌ಗಳು ಟ್ರ್ಯಾಕ್ ಮಾಡುತ್ತಿವೆ ಎನ್ನುವುದನ್ನು ನೇರವಾಗಿ ನೋಡಬಹುದು. ಅಲ್ಲಿರುವ ಗ್ರಾಫ್ ಮತ್ತು ಗ್ರಾಫ್‌ನ ಚುಕ್ಕಿಯಲ್ಲಿರುವ ವೆಬ್ ಅಡ್ರೆಸ್ ಮೂಲಕ ಯಾವ ವೆಬ್‌ಸೈಟ್ ತನ್ನನ್ನು ಟ್ರ್ಯಾಕ್ ಮಾಡುತ್ತಿದೆ ಎನ್ನುವುದನ್ನು ನೋಡಬಹುದು.

ಈ ಎಲ್ಲ ಚಟುವಟಿಕೆಗಳನ್ನು ಬ್ಲಾಕ್ ಮಾಡಬೇಕೆಂದರೆ ಗ್ರಾಫ್‌ನ ಬಲಬದಿಯಲ್ಲಿರುವ Block known tracking sites ಅನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡುವುದರ ಮೂಲಕ ಇದನ್ನು ಬ್ಲಾಕ್ ಮಾಡಬಹುದಾಗಿದೆ.

ಅಂತರ್ಜಾಲ ಜಾಹಿರಾತು ಮಾರುಕಟ್ಟೆ ತೀವ್ರವಾಗಿ ಬೆಳೆಯುತ್ತಿದೆ. ಇದರಿಂದ ಈ ತರಹದ ಅಡ್ಡದಾರಿ ಮೂಲಕ ಅನೇಕ ಕಂಪನಿಗಳು ಮಾಹಿತಿ ಕಲೆಹಾಕಿ, ಸ್ಥಳ, ವ್ಯಕ್ತಿ, ಆಸಕ್ತಿ ಆಧಾರಿತವಾಗಿ ಜಾಹಿರಾತುಗಳನ್ನು ಪ್ರತಿಯೊಬ್ಬ ಬಳಕೆದಾರರಿಗೆ ತಲುಪಿಸಲು ಬಗೆಬಗೆ ತಂತ್ರಗಳನ್ನು ಹೂಡುತ್ತಿವೆ. ನಮಗೇ ತಿಳಿಯದೇ ನಾವು ವೀಕ್ಷಿಸುವ ಜಾಹಿರಾತುಗಳ ಮೂಲಕ ಸಾಕಷ್ಟು ಹಣವನ್ನೂ ಮಾಡಿಕೊಳ್ಳುತ್ತಿವೆ.

ಇದನ್ನು ತಪ್ಪಿಸಿ, ನಮ್ಮ ಅಂತರ್ಜಾಲ ಪಯಣವನ್ನು ತಕ್ಕ ಮಟ್ಟಿಗೆ ಸುರಕ್ಷಿತಗೊಳಿಸಲು `ಕೊಲ್ಯೂಷನ್' ಆ್ಯಪ್ ಸಹಾಯಕವಾಗಬಲ್ಲದು.
ಈ ಆ್ಯಪ್ ಉಚಿತವೂ ಆಗಿರುವುದರಿಂದ ಹಾಗೂ ಬಳಸಲು ಮತ್ತು ಅನುಸರಿಸಲು ಸುಲಭವೂ ಆಗಿರುವುದರಿಂದ ಮಾಹಿತಿ ಸುರಕ್ಷತೆ ಬಯಸುವ ಪ್ರತಿಯೊಬ್ಬರೂ ಈ ತಂತ್ರಾಂಶದ ಮೊರೆ ಹೋಗಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT