ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ: ಶ್ರದ್ಧಾ, ಭಕ್ತಿಯ ಮಧ್ವಜಯಂತಿ

Last Updated 20 ಫೆಬ್ರುವರಿ 2013, 8:46 IST
ಅಕ್ಷರ ಗಾತ್ರ

ಸುರಪುರ: ದ್ವೆೃತಮತದ ಸ್ಥಾಪಕ ಮಧ್ವಾಚಾರ್ಯರು ಶ್ರೇಷ್ಠ ತತ್ವಜ್ಞಾನಿ, ಹನುಮ ಮತ್ತು ಭೀಮನ ನಂತರ ಜನಿಸಿದ ಅವರ ಅವತಾರ ಎಂಬ ಉಲ್ಲೇಖವಿದೆ. ವಾಯುಪುತ್ರರಾದ ಅವರು ಇಡೀ  ಭಾರತವನ್ನು ಎರಡು ಮೂರು ಬಾರಿ ಸುತ್ತಿ ಧರ್ಮ ಪ್ರಚಾರ ಕೈಗೊಂಡರು. ಭಕ್ತಿ ಮಾರ್ಗದ ಪ್ರವರ್ತಕರಲ್ಲಿ ಪ್ರಮುಖರಾಗಿರುವ ಅವರು ಸಂಸ್ಕೃತದಲ್ಲಿ ಅನೇಕ ಗ್ರಂಥ ರಚಿಸಿದ್ದಾರೆ.

ಅವು ಸರ್ವಮೂಲ ಗ್ರಂಥಗಳೆಂದು ಸ್ವೀಕರಿಸಲ್ಪಟ್ಟಿವೆ ಎಂದು ಖ್ಯಾತ ಪಂಡಿತ ನಾರಾಯಣಾಚಾರ್ಯ ಐಜಿ ವಿವರಿಸಿದರು. ಇಲ್ಲಿನ ಪಂಚಮುಖಿ ಹನುಮಾನ ದೇವಸ್ಥಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ಮಧ್ವ ನವಮಿಯ ಅಂಗವಾಗಿ ಪವಮಾನ ಹೋಮ ನೆರವೇರಿಸಿ ಮಾತನಾಡಿದರು.

1238ರ ವಿಜಯದಶಮಿಯಂದು ಉಡುಪಿಯ ಪಾಜಕದಲ್ಲಿ ಮಧ್ಯಗೇಹಭಟ್ ಮತ್ತು ವೇದವತಿ ದಂಪತಿಯ ಉದರದಲ್ಲಿ ಜನಿಸಿದ ಮಧ್ವಾಚಾರ್ಯರ ಪೂರ್ವಾಶ್ರಮದ ಹೆಸರು ವಾಸುದೇವ. 11ನೇ ವಯಸ್ಸಿನಲ್ಲಿ ಅಚ್ಯುತಪ್ರಜ್ಞರಿಂದ ಸನ್ಯಾಸ ದೀಕ್ಷೆ ಸ್ವೀಕರಿಸುತ್ತಾರೆ.

ಬಾಲ್ಯದಲ್ಲೆ ಅಸಧಾರಣ ಪ್ರತಿಭೆ ಹೊಂದಿದ್ದ ಅವರು 12ನೇ ವಯಸ್ಸಿನಲ್ಲೆ ವಿಧ್ಯಾಭ್ಯಾಸ ಮತ್ತು ವೇದಾಭ್ಯಾಸದಲ್ಲಿ ಪಾರಂಗತರಾದರು ಎಂದು ಹೇಳಿದರು.

ಪೂರ್ಣಪ್ರಜ್ಞ, ಆನಂದತೀರ್ಥ ಎಂಬ ಹೆಸರಿನಿಂದಲೂ ಕರೆಯಲ್ಪಡುತ್ತಾರೆ. ಉಡುಪಿಯಲ್ಲಿ ಅಷ್ಟಮಠಗಳನ್ನು ಸ್ಥಾಪಿಸುತ್ತಾರೆ. ಉಡುಪಿಯಲ್ಲಿ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸುತ್ತಾರೆ. 1317ರಲ್ಲಿ ಬದರಿಕಾಶ್ರಮ ಪ್ರವೇಶ ಮಾಡುತ್ತಾರೆ. ಅಂದಿನ ದಿನವನ್ನು ಮಧ್ವನವಮಿಯೆಂದು ಆಚರಿಸುತ್ತಾ ಬರಲಾಗಿದೆ. ಸಾಕ್ಷಾತ್ ಪರಮಾತ್ಮನ ಅವತಾರವಾದ ಅವರನ್ನು ಪೂಜಿಸುವುದರಿಂದ ಸಕಲ ಇಷ್ಟಾರ್ಥಗಳು ಸಿದ್ಧಿಸುತ್ತವೆ. ಅವರ ತತ್ವ ಸಂದೇಶಗಳನ್ನು ಪಾಲಿಸುವುದರಿಂದ ನರಜನ್ಮ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

ಸೋಮವಾರ ಭೀಷ್ಮಾಷ್ಠಮಿ ಆಚರಿಸಲಾಯಿತು. ಮಂಗಳವಾರ ಮಧ್ವನವಮಿ ನಿಮಿತ್ತ ಪ್ರಭೋದೋತ್ಸವ, ಪಂಚಾಮೃತಾಭಿಷೇಕ ನಡೆಯಿತು. ಮಧ್ವಾಚಾರ್ಯರ ಭಾವಚಿತ್ರದ ಭವ್ಯ ಶೋಭಾಯಾತ್ರೆ ಏರ್ಪಡಿಸಲಾಗಿತ್ತು. ತಾರತಮ್ಯದ ಭಜನೆ ಗಮನಸೆಳೆಯಿತು. 

ಪ್ರತಿ ಮನೆಯ ಮುಂದೆ ಮಧ್ವಾಚಾರ್ಯರರಿಗೆ ಪೂಜೆ ಸಲ್ಲಿಸುವುದು ಸಾಮಾನ್ಯವಾಗಿತ್ತು. ಅನ್ನಸಂತರ್ಪಣೆ, ಭಜನೆ, ಮಂಗಳಾರುತಿ, ಮಂತ್ರಪುಷ್ಪದೊಂದಿಗೆ ಕಾರ್ಯಕ್ರಮ ಸಮಾಪ್ತಿಯಾಯಿತು.

ಪ್ರಾಣೇಶಾಚಾರ್ಯ ಗಾಳಿ, ನರಸಿಂಹಮೂರ್ತಿ ಡಬೀರ, ಕೃಷ್ಟಾಚಾರ್ಯ ಅರಳಿಗಿಡ, ಭೀಮಾಚಾರ್ಯ ಜಾಲಿಬೆಂಚಿ, ಭೀಮಸೇನಾಚಾರ್ಯ ಭಂಡಿ, ಶ್ರೀಹರಿರಾವ ಆದವಾನಿ, ಸೀತಾರಾಮ ಐಜಿ, ಅಚ್ಯುತಾನಂತ ಪಾಲ್ಮೂರ, ಮಧುಸೂದನ ಡಬೀರ, ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT